ETV Bharat / bharat

ಮೊದಲ ಹಂತದ ಮತದಾನಕ್ಕೆ ಗುಜರಾತ್ ಸಜ್ಜು: ಇಂದು 89 ಸ್ಥಾನಗಳಿಗೆ ವೋಟಿಂಗ್​ - ಗುಜರಾತ್

ಮೊದಲ ಹಂತದ ಮತದಾನಕ್ಕೆ ಗುಜರಾತ್​ ಚುನಾವಣಾ ಕಣ ಸಜ್ಜಾಗಿದೆ. 19 ಜಿಲ್ಲೆಗಳ 89 ಸ್ಥಾನಗಳಲ್ಲಿ 2.39 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

gujarat-assembly-election-2022-first-phase-poll-arrangements
ಮೊದಲ ಹಂತದ ಮತದಾನಕ್ಕೆ ಗುಜರಾತ್ ಸಜ್ಜು: ಇಂದು 89 ಸ್ಥಾನಗಳಿಗೆ ವೋಟಿಂಗ್​
author img

By

Published : Dec 1, 2022, 5:01 AM IST

ನವದೆಹಲಿ/ಅಹಮದಾಬಾದ್​: ಗುಜರಾತ್​ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಡಿಸೆಂಬರ್ 1ರಂದು ನಡೆಯಲಿದೆ. ಮತದಾನಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ. ಎರಡನೇ ಹಂತದ ಮತದಾನವು ಡಿಸೆಂಬರ್ 5ರಂದು ನಡೆಯಲಿದೆ.

ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ 19 ಜಿಲ್ಲೆಗಳ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಜರುಗಲಿದ್ದು, ಮತದಾನಕ್ಕೆ 34,324 ಬ್ಯಾಲೆಟ್ ಯೂನಿಟ್, 34,324 ಕಂಟ್ರೋಲ್ ಯೂನಿಟ್ ಮತ್ತು 38,749 ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುವುದು. ನಗರ ಪ್ರದೇಶದ 9,014 ಹಾಗೂ ಗ್ರಾಮೀಣ ಪ್ರದೇಶದ 16,416 ಮತಗಟ್ಟೆಗಳು ಸೇರಿದಂತೆ 25,430 ಮತಗಟ್ಟೆಗಳು ಸ್ಥಾಪಿಸಲಾಗಿದೆ ಎಂದು ಚುನಾವಣಾ ಆಯೋಗದ ಆಯುಕ್ತರಾದ ಪಿ ಭಾರತಿ ತಿಳಿಸಿದ್ದಾರೆ.

788 ಅಭ್ಯರ್ಥಿಗಳು ಕಣದಲ್ಲಿ: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ 718 ಪುರುಷ ಅಭ್ಯರ್ಥಿಗಳು ಮತ್ತು 70 ಮಹಿಳಾ ಅಭ್ಯರ್ಥಿಗಳು ಆಗಿದ್ದು, ಒಟ್ಟಾರೆ 39 ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿವೆ.

2.39 ಕೋಟಿ ಮತದಾರರು: 89 ಸ್ಥಾನಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 2,39,76,670 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು ಮತದಾರರಲ್ಲಿ 1,24,33,362 ಪುರುಷ ಮತದಾರರು ಮತ್ತು 1,1,5,42,811 ಮಹಿಳಾ ಮತದಾರರು ಮತ್ತು 497 ತೃತೀಯ ಮತದಾರರು ನೋಂದಣಿಯಾಗಿದ್ದಾರೆ. 18ರಿಂದ 19 ವರ್ಷದೊಳಗಿನ ಒಟ್ಟು 5,75,560 ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಆಯುಕ್ತರು ಮಾಹಿತಿ ನೀಡಿದ್ದಾರೆ.

99 ವರ್ಷಕ್ಕಿಂತ ಮೇಲ್ಪಟ್ಟ 4.945 ಮತದಾರರು: ಹಿರಿಯ ನಾಗರಿಕರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಹಂತದಲ್ಲಿ 99 ವರ್ಷಕ್ಕಿಂತ ಮೇಲ್ಪಟ್ಟ 4945 ಮತದಾರರು ಸಹ ಮತದಾನ ಮಾಡಲಿದ್ದಾರೆ. ಅಲ್ಲದೇ, 163 ಎನ್‌ಆರ್‌ಐಗಳು/ಎನ್‌ಆರ್‌ಜಿಗಳು ಮತ ಚಲಾಯಿಸಲು ಗುಜರಾತ್‌ಗೆ ತಲುಪಿದ್ದಾರೆ. ಇದರಲ್ಲಿ 125 ಪುರುಷರು ಮತ್ತು 38 ಮಹಿಳೆಯರು ಸೇರಿದ್ದಾರೆ ಎಂದು ಹೇಳಿದ್ದಾರೆ.

16,500 ಮತಗಟ್ಟೆ ಸೂಕ್ಷ್ಮ ಮತಗಟ್ಟೆ: ಒಟ್ಟಾರೆ 14,382 ವಿಶೇಷ ಮತಗಟ್ಟೆಗಳು ಸ್ಥಾಪಿಸಲಾಗಿದೆ. ಅದರಲ್ಲಿ 3,311 ನಗರ ಪ್ರದೇಶದಲ್ಲಿ ಮತ್ತು 11,071 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. ವಿಶೇಷ ಮತಗಟ್ಟೆಗಳಲ್ಲಿ 89 ಆದರ್ಶ ಮತಗಟ್ಟೆಗಳು, 89 ಅಂಗವಿಕಲರು ನಿರ್ವಹಿಸುವ ಮತಗಟ್ಟೆಗಳು, 89 ಪರಿಸರ ಸ್ನೇಹಿ ಮತಗಟ್ಟೆಗಳು, 611 ಸಖಿ ಮತಗಟ್ಟೆಗಳು, 18 ಮತಗಟ್ಟೆಗಳು ಯುವಕರು ಕಾರ್ಯನಿರ್ವಹಿಸುವ ಮತಗಟ್ಟೆಗಳು ಸಹ ಸೇರಿವೆ.

ಇದನ್ನೂ ಓದಿ: ಈ ವರ್ಷ ರಾಜಕೀಯ ಪಕ್ಷಗಳಿಗೆ ₹777 ಕೋಟಿ ದೇಣಿಗೆ.. ₹614 ಕೋಟಿ ಪಡೆದ ಬಿಜೆಪಿಯದ್ದೇ ಸಿಂಹಪಾಲು

ಒಟ್ಟು 16,500 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಇದರಲ್ಲಿ ಸೌರಾಷ್ಟ್ರದ 5000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತಗಟ್ಟೆ ಸಿಬ್ಬಂದಿಯನ್ನೂ ದೊಡ್ಡ ಮಟ್ಟದ ನಿಯೋಜಿಸಲಾಗಿದೆ. ಒಟ್ಟಾರೆ 1,06,963 ಸಿಬ್ಬಂದಿ ಮೊದಲ ಹಂತದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಚುನಾವಣಾ ಮೇಲೆ ಪೊಲೀಸರು ಸಹ ಹದ್ದಿನ ಕಣ್ಣು ಇರಿಸಲಾಗಿದೆ. 50ಕ್ಕೂ ಹೆಚ್ಚು ಸಾಮಾನ್ಯ ವೀಕ್ಷಕರು, 20 ಪೊಲೀಸ್ ವೀಕ್ಷಕರು ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಪೊಲೀಸರು, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ಗುಜರಾತ್​ ವಿಧಾನಸಭಾ ಚುನಾವಣೆ : ಶಿಯಾಲ್​ಬೆಟ್‌ ದ್ವೀಪದಲ್ಲಿ ಮತದಾನಕ್ಕೆ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.