ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆ ಡಿಸೆಂಬರ್ನಲ್ಲಿ ನಡೆಯಲಿದ್ದು, ಬಿಜೆಪಿಯಿಂದ 160 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 14 ಮಹಿಳೆಯರಿಗೆ ಟಿಕೆಟ್ ನೀಡಲಾಗಿದ್ದು, ನಾಲ್ವರು ವೈದ್ಯ ವೃತ್ತಿಯನ್ನು ಮಾಡುತ್ತಿರುವವರು ಆಗಿದ್ದಾರೆ. 160 ಅಭ್ಯರ್ಥಿಗಳ ಪೈಕಿ 69 ಮಂದಿ ಎರಡು ಬಾರಿ ಶಾಸಕರಾಗಿದ್ದಾರೆ. ಪಕ್ಷದ ಹಿರಿಯ ನಾಯಕರಿಗೆ ಈ ಬಾರಿ ಟಿಕೆಟ್ ನೀಡಿಲ್ಲ.
14 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್: ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರಿಗೆ ಟಿಕೆಟ್ ನೀಡಲಾಗಿದೆ. ಗೊಂಡಾಲ್ ಕ್ಷೇತ್ರದಿಂದ ಗೀತಾಬಾ ಜಡೇಜಾ ಸ್ಪರ್ಧಿಸಲಿದ್ದಾರೆ. ಗೊಂಡಾಲ್‌ನಲ್ಲಿ ಟಿಕೆಟ್ಗಾಗಿ ಬಾರೀ ಪೈಪೋಟಿ ನಡೆಯುತ್ತಿತ್ತು. ಜಯರಾಜ್ ಸಿಂಗ್ ಮತ್ತು ರಿಬ್ಡಾದ ಅನಿರುದ್ಧ್ ಸಿಂಗ್ ತಮ್ಮ ಪುತ್ರರಿಗೆ ಟಿಕೆಟ್ ಕೊಡಿಸಲು ಹರಸಾಹಸ ಪಡುತ್ತಿದ್ದರು. ಕೊನೆಗೆ ಬಿಜೆಪಿ ಗೀತಾಬಾ ಜಡೇಜಾ ಅವರಿಗೆ ಟಿಕೆಟ್ ನೀಡಿದೆ.
ಬಿಜೆಪಿ ಮಹಿಳಾ ಅಭ್ಯರ್ಥಿಗಳ ಹೆಸರು:
1) ವಡೋದರಾ ನಗರ - ಮನೀಶಾಬೆನ್ ವಕೀಲ್
2) ಬೈದ್ - ಭಿಖಿಬೆನ್ ಪರ್ಮಾರ್
3) ಮೊರ್ವಾ ಹದಾಫ್ - ನಿಮಿಷಾಬೆನ್ ಕಾರ್ಪೆಂಟರ್
4) ಅಸರ್ವಾ - ದರ್ಶನಾಬೆನ್ ವಘೇಲಾ
5) ಗೊಂಡಲ್ - ಗೀತಾಬಾ ಜಡೇಜಾ
6) ಜಾಮ್‌ನಗರ ಉತ್ತರ - ರಿವಾಬಾ ಜಡೇಜಾ
7) ನಂದೋದ್ - ಡಾ. ದರ್ಶನಾಬೆನ್ ದೇಶಮುಖ್
8) ಲಿಂಬಾಯತ್ - ಸಂಗೀತಾಬೆನ್ ಪಾಟೀಲ್
9) ಧವನ್ - ಜಿಗ್ನಾಬೆನ್ ಪಾಂಡ್ಯ
10) ನರೋಡಾ - ಡಾ. ಪೈಲ್ಬೆನ್ ಕುಕ್ರಾಣಿ
11) ಥಕ್ಕರ್ಬಾಪಾ ನಗರ - ಕಾಂಚನ್ಬೆನ್ ರಾಡ್ಡಿಯಾ
12) ರಾಜ್‌ಕೋಟ್ ಗ್ರಾಮಾಂತರ - ಭಾನುಬೆನ್ ಬಾಬ್ರಿಯಾ
13) ರಾಜ್‌ಕೋಟ್ ಪಶ್ಚಿಮ - ಡಾ. ದರ್ಶಿತಾಬೆನ್ ಶಾ
14) ಗಾಂಧಿಧಾಮ್ - ಮಾಲ್ತಿಬೆನ್ ಮಹೇಶ್ವರಿ