ETV Bharat / bharat

ಗಾಂಧಿ ಟೋಪಿ ಬಗ್ಗೆ ಭುಗಿಲೆದ್ದ ವಿವಾದ... ಕಾಂಗ್ರೆಸ್​ ಬಿಜೆಪಿ ನಡುವೆ ಟ್ವೀಟ್​ ಸಮರ

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಗಾಂಧಿ ಜೀ ಅವರು ಎಂದಿಗೂ ಧರಿಸದ ಬಿಳಿ ಟೋಪಿಯನ್ನು ಇವರು ಧರಿಸಿ, ಗಾಂಧಿ ಟೋಪಿ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ಸಂಘಟನಾ ಕಾರ್ಯದರ್ಶಿ ರತ್ನಾಕರ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ಬಿಜೆಪಿ ನಡುವೆ ಟ್ವೀಟ್​ ಸಮರ
ಕಾಂಗ್ರೆಸ್​ ಬಿಜೆಪಿ ನಡುವೆ ಟ್ವೀಟ್​ ಸಮರ
author img

By

Published : Sep 7, 2021, 2:36 AM IST

ಅಹಮದಾಬಾದ್: ಬಿಜೆಪಿ ಸಂಘಟನಾ ಕಾರ್ಯದರ್ಶಿ ರತ್ನಾಕರ್ ಅವರು ಗಾಂಧಿ ಟೋಪಿ ಬಗ್ಗೆ ವ್ಯಂಗ್ಯವಾಡಿದ್ದು, ಈ ಬಗೆಗಿನ ಚರ್ಚೆ ಈಗ ಮುನ್ನೆಲೆಗೆ ಬರುತ್ತಿದೆ.ಇವರು ಮಾಡಿದ ಈ ಟ್ವೀಟ್​ಗೆ ಕಾಂಗ್ರೆಸ್ ಕಿಡಿ ಕಾರಿದೆ.

ಹೊಸದಾಗಿ ನೇಮಕಗೊಂಡ ಬಿಜೆಪಿ ಸಂಘಟನಾ ಕಾರ್ಯದರ್ಶಿ ರತ್ನಾಕರ್ ಅವರ ಟ್ವೀಟ್ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ಸಿಗರು ಎಲ್ಲದರಲ್ಲೂ ಟೋಪಿ ಧರಿಸಿದ್ದಾರೆ! ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಗಾಂಧಿ ಜೀ ಅವರು ಎಂದಿಗೂ ಧರಿಸದ ಬಿಳಿ ಟೋಪಿಯನ್ನು ಇವರು ಧರಿಸಿ, ಗಾಂಧಿ ಟೋಪಿ ಎಂದು ಹೇಳುತ್ತಿದ್ದಾರೆ. ಹಾಗೆ ಗುಜರಾತ್ ಅಥವಾ ಮಹಾರಾಷ್ಟ್ರದೊಂದಿಗೆ ಯಾವುದೇ ಪೂರ್ವಜರ ಸಂಬಂಧವನ್ನೂ ಹೊಂದಿಲ್ಲದಿದ್ದರೂ ನೆಹರು ಜೀ ಅವರು ಕೂಡ ಯಾವಾಗಲೂ ಈ ಟೋಪಿ ಧರಿಸುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ಡಾ. ಮನೀಶ್ ದೋಷಿ, ಗೋಡ್ಸೆಯ ವಿಚಾರವಾದಿಗಳು ಗಾಂಧಿ ಮತ್ತು ನೆಹರು ಅವರನ್ನು ಅವಹೇಳನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಬಿಜೆಪಿಯ ವಾಸ್ತವತೆ ನಿಧಾನವಾಗಿ ಹೊರಬರುತ್ತಿದೆ ಎಂದಿದ್ದಾರೆ.

  • कांग्रेसियों @INCIndia ने हर बात में टोपी पहनाई है!
    गुजरात और महाराष्ट्र में पहनी जाने वाली "सफेद टोपी" जिसे कभी गाँधी जी ने नही पहनी,
    लेकिन जिसका गुजरात या महाराष्ट्र से कभी कोई पैतृक सम्बंध भी नही रहा, ऐसे नेहरू जी ने हमेशा यह टोपी पहनी
    लेकिन कही गयी "गाँधी टोपी"@BJP4Gujarat pic.twitter.com/IMXCopniPa

    — Ratnakar (@ratnakar273) September 5, 2021 " class="align-text-top noRightClick twitterSection" data=" ">

ಗುಜರಾತ್ ಕಾಂಗ್ರೆಸ್ ವಕ್ತಾರ ಜಯರಾಜ್ ಸಿಂಗ್ ಪರ್ಮಾರ್ ಟ್ವೀಟ್ ಮಾಡಿ, ರತ್ನಾಕರ್​ ಜಿ ನಿಮಗೆ ಗುಜರಾತ್​ಗೆ ಸ್ವಾಗತವಿದೆ, ಆದರೆ ಇಲ್ಲಿಗೆ ಬಂದ ನಂತರ ಗುಜರಾತ್ ನ ಸಂಸ್ಕೃತಿ ಮತ್ತು ಜೀವನ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿ. ಬಿಳಿ ಗಾಂಧಿ ಟೋಪಿ ಗುಜರಾತ್‌ನ ಗುರುತು. ನಮಗೆ ತಿಳಿದಿರುವಂತೆ, ನಿಮ್ಮ ಉಡುಗೆ ಕಪ್ಪು ಟೋಪಿ ಮತ್ತು ನೀವು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರಲ್ಲ ಎಂದಿರುವ ಅವರು, ವಾಟ್ಸಾಪ್‌ನಿಂದ ಎರವಲು ಪಡೆದ ಜ್ಞಾನದೊಂದಿಗೆ ಬಿಜೆಪಿ ಆಮದು ಮಾಡಿಕೊಂಡ ನಾಯಕ ಎಂದು ವ್ಯಂಗ್ಯವಾಗೇ ಪ್ರತ್ಯುತ್ತರಿಸಿದ್ದಾರೆ.

ಗಾಂಧೀಜಿ ಅವರು ಟೋಪಿ ಧರಿಸಿದ ಯಾವುದೇ ಫೋಟೋ ಕಾಣಲಿಲ್ಲ:

ಇನ್ನು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಗಾಂಧೀಜಿಯ ಸಾವಿರಾರು ಫೋಟೋಗಳನ್ನು ನೋಡಿದರೂ ಸಹ ಗಾಂಧೀಜಿ ಎಂದಿಗೂ ಕ್ಯಾಪ್ ಧರಿಸಿದ್ದರು ಎಂದು ನನಗೆ ಕಾಣಿಸಲಿಲ್ಲ. ಗಾಂಧೀಜಿಯ ಸಾವಿರಾರು ಫೋಟೋಗಳನ್ನು ನಾವೆಲ್ಲರೂ ನೋಡಿದ್ದೇವೆ, ಗಾಂಧೀಜಿಯವರ ಸಾಕ್ಷ್ಯಚಿತ್ರಗಳನ್ನು ಸಹ ನಾವು ನೋಡಿದ್ದೇವೆ. ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗಲೀ ಅಥವಾ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಸಮಯದಲ್ಲಾಗಲೀ ಹಾಗೆ ಭಾರತಕ್ಕೆ ಬಂದು ದೇಶ ಪ್ರವಾಸ ಮಾಡಿದಾಗಲೂ ಯಾವುದೇ ಫೋಟೋದಲ್ಲಿಯೂ ಟೋಪಿ ಇಲ್ಲ. ಎಂದಿರುವ ಅವರು, ರತ್ನಾಕರ್​​ ಜಿ ಯವರ ಹೇಳಿಕೆ ಸತ್ಯವಾಗಿದೆ. ಯಾವುದೇ ಐತಿಹಾಸಿಕ ಪುಸ್ತಕದಲ್ಲಿ ಟೋಪಿ ಧರಿಸಿದ ಫೋಟೋವನ್ನು ನಾನು ನೋಡಿಲ್ಲ. ಯಾರಾದರೂ ಅಂಥಹ ಪುಸ್ತಕ ಅಥವಾ ಮಾಹಿತಿ ಹೊಂದಿದ್ದರೆ ನಾವು ಅಧ್ಯಯನ ಮಾಡುತ್ತೇವೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.