ETV Bharat / bharat

ಗುಜರಾತ್​ ಚುನಾವಣೆ: ಡ್ರಗ್ಸ್ ಸೇರಿ 801 ಕೋಟಿ ರೂ ಮೌಲ್ಯದ ವಸ್ತುಗಳು ಜಪ್ತಿ

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್​ನಲ್ಲಿ 801.85 ಕೋಟಿ ಮತ್ತು ಹಿಮಾಚಲದಲ್ಲಿ 57.24 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವಿಚಾರ ಬಯಲಾಗಿದೆ.

guj-polls-massive-seizure-worth-rs-801-dot-85-crore
ಗುಜರಾತ್​ ಚುನಾವಣೆ: ಡ್ರಗ್ಸ್ ಸೇರಿ 801 ಕೋಟಿ ಮೌಲ್ಯದ ವಸ್ತುಗಳು ಜಪ್ತಿ
author img

By

Published : Dec 9, 2022, 10:20 PM IST

ನವ ದೆಹಲಿ: ಗುಜರಾತ್​ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದೆ. ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಉಭಯ ರಾಜ್ಯಗಳಲ್ಲಿ 850 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ದೇಶದ ಗಮನ ಸೆಳೆದಿದ್ದ ಗುಜರಾತ್​ನಲ್ಲಿ 801.85 ಕೋಟಿ ಮತ್ತು ಹಿಮಾಚಲದಲ್ಲಿ 57.24 ಕೋಟಿ ರೂ.ಯಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2017ರ ಚುನಾವಣೆಗೆ ಹೋಲಿಸಿದರೆ ಗುಜರಾತ್‌ನಲ್ಲಿ ಇದು ಎರಡು ಸಾವಿರ ಪಟ್ಟು (ಪ್ರತಿಶತ 2,846.89) ಅಧಿಕವಾಗಿದೆ. ಅದೇ ರೀತಿಯಾಗಿ ಹಿಮಾಚಲ ಪ್ರದೇಶದಲ್ಲೂ ಐನೂರು ಪಟ್ಟು (ಪ್ರತಿಶತ 533.88) ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. 2017ರಲ್ಲಿ ಗುಜರಾತ್ ಮತ್ತು ಹಿಮಾಚಲದಲ್ಲಿ ಕ್ರಮವಾಗಿ 27.21 ಕೋಟಿ ಮತ್ತು 9.03 ಕೋಟಿ ರೂ.ಯಷ್ಟು ಮಾತ್ರ ವಸ್ತುಗಳ ಪತ್ತೆಯಾಗಿದ್ದವು.

ಗುಜರಾತ್‌ನ ಗಡಿ ಜಿಲ್ಲೆ ಕಚ್​ನ ಮುಂದ್ರಾ ಬಂದರಿನಲ್ಲಿ ಡಿಆರ್‌ಐ 160 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಡೋದರಾದಲ್ಲಿ 478 ಕೋಟಿ ರೂ. ಮೌಲ್ಯದ ಭಾರಿ ಪ್ರಮಾಣದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಹಿಮಾಚಲದ ಗಡಿಯ ಕಾಂಗ್ರಾ ಜಿಲ್ಲೆಯಲ್ಲಿ 5.04 ಲಕ್ಷ ಲೀಟರ್ ಮತ್ತು ಮತ್ತೊಂದು ಗಡಿಯ ಸಿರ್ಮೋರ್ ಜಿಲ್ಲೆಯಲ್ಲಿ 2.51 ಲಕ್ಷ ಲೀಟರ್ ದಾಖಲೆಯ ಮದ್ಯದ ಜಪ್ತಿಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟೈರ್​ ಸ್ಫೋಟಿಸಿ ಮತ್ತೊಂದು ವಾಹನಕ್ಕೆ ಕಾರು ಡಿಕ್ಕಿ: ನಾಲ್ವರು ವಿದ್ಯಾರ್ಥಿಗಳ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.