ETV Bharat / bharat

ಡ್ರೈವರ್ ಸ್ಟ್ರೈಕ್ ಇಂಪ್ಯಾಕ್ಟ್​: 28 ಕಿಲೋ ಮೀಟರ್ ನಡೆದು ವಧುವಿನ ಮನೆ ತಲುಪಿದ ವರ - ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ

ವಧುವಿನ ಮನೆಗೆ ಸುಮಾರು 28 ಕಿಲೋ ಮೀಟರ್ ನಡೆದು ವರನ ಕುಟುಂಬದವರು ಬಂದಿರುವ ಘಟನೆ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.

ವಧುವಿನ ಮನೆ ತಲುಪಿದ ವರ
ವಧುವಿನ ಮನೆ ತಲುಪಿದ ವರ
author img

By

Published : Mar 17, 2023, 11:05 PM IST

ಭುವನೇಶ್ವರ (ಓಡಿಶಾ) : ಇಲ್ಲಿನ ರಾಯಗಡ ಜಿಲ್ಲೆಯಲ್ಲಿ ನಡೆಯುತ್ತಿರುವ ಚಾಲಕರ ಮುಷ್ಕರದಿಂದಾಗಿ ವರ ಹಾಗೂ ಆತನ ಕುಟುಂಬಸ್ಥರು ವಧುವಿನ ಗ್ರಾಮಕ್ಕೆ 28 ಕಿಲೋ ಮೀಟರ್​ ನಡೆದುಕೊಂಡು ಹೋಗಿದ್ದಾರೆ. ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ಗುರುವಾರ ರಾತ್ರಿಯಿಡೀ ನಡೆದುಕೊಂಡು ದಿಬಳಪಾಡು ಗ್ರಾಮಕ್ಕೆ ಆಗಮಿಸಿ ಅಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದನ್ನೂ ಓದಿ : ಗೋವಾ ಕಡಲ ತೀರದಲ್ಲಿ ಬಂಗಾಳಿ ಸಂಪ್ರದಾಯದಂತೆ ಮದುವೆಯಾದ ''ಯೇ ಹೇ ಮೊಹಬ್ಬತೇ ನಟಿ

ಮುಷ್ಕರದಿಂದ ಲಭ್ಯವಾಗದ ಸಾರಿಗೆ ವ್ಯವಸ್ಥೆ: ಕೆಲವು ಮಹಿಳೆಯರು ಸೇರಿದಂತೆ ವರ ಮತ್ತು ಅವರ ಕುಟುಂಬದ ಸದಸ್ಯರು ರಾತ್ರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. "ಚಾಲಕರ ಮುಷ್ಕರದಿಂದಾಗಿ ಯಾವುದೇ ಸಾರಿಗೆ ಲಭ್ಯವಿಲ್ಲ. ರಾತ್ರಿಯಿಡೀ ನಡೆದುಕೊಂಡು ಗ್ರಾಮಕ್ಕೆ ಬಂದೆವು. ನಮಗೆ ಬೇರೆ ದಾರಿಯೇ ಇರಲಿಲ್ಲ" ಎಂದು ವರನ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : 80 ಲಕ್ಷ ನಗದು, ಕೃಷಿ ಭೂಮಿ, 41 ತೊಲ ಚಿನ್ನ, 3 ಕೆಜಿ ಬೆಳ್ಳಿ, ಹೊಸ ಟ್ರ್ಯಾಕ್ಟರ್: ಸೊಸೆಗೆ ಕೃಷಿಕ ಸೋದರ ಮಾವಂದಿರ ಭರ್ಜರಿ ಉಡುಗೊರೆ

ವಧುವಿನ ಮನೆಯಲ್ಲಿಯೇ ಉಳಿದುಕೊಂಡಿರುವ ವರ: ಶುಕ್ರವಾರ ಬೆಳಗ್ಗೆ ಮದುವೆ ನಿಶ್ಚಯವಾಗಿತ್ತು. ಆದರೆ ವರ ಮತ್ತು ಆತನ ಕುಟುಂಬಸ್ಥರು ವಧುವಿನ ಮನೆಯಲ್ಲಿಯೇ ಉಳಿದುಕೊಂಡಿದ್ದು, ಚಾಲಕರ ಸಂಘದವರು ಮುಷ್ಕರ ಹಿಂಪಡೆಯುತ್ತಾರೆ ಎಂದು ಕಾಯುತ್ತಿದ್ದಾರೆ. ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಮತ್ತಿತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘ ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.

ಇದನ್ನೂ ಓದಿ : 20 ನಿಮಿಷಗಳವರೆಗೆ ಲೋಕಸಭೆಯಲ್ಲಿ ಆಡಿಯೋ ಮ್ಯೂಟ್​: 'ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ..' ಕಾಂಗ್ರೆಸ್ ಟೀಕೆ

ರಾಜ್ಯ ಸರ್ಕಾರದ ಭರವಸೆ ನಂತರ ಮುಷ್ಕರ ವಾಪಾಸ್​: ಒಡಿಶಾದಲ್ಲಿ ವಾಣಿಜ್ಯ ವಾಹನಗಳ ಚಾಲಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ರಾಜ್ಯ ಸರ್ಕಾರವು ಭರವಸೆ ನೀಡಿದ ನಂತರ ಮುಷ್ಕರವನ್ನು ಸ್ಥಗಿತಗೊಳಿಸಲಾಯಿತು. ಮುಖ್ಯ ಕಾರ್ಯದರ್ಶಿ ಪಿ ಕೆ ಜೆನಾ ಮತ್ತು ಡಿಜಿಪಿ ಎಸ್ ಕೆ ಬನ್ಸಾಕ್ ಅವರು ಮುಷ್ಕರವನ್ನು ಹಿಂಪಡೆಯುವಂತೆ ಮುಷ್ಕರ ನಿರತ ಚಾಲಕರಿಗೆ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ ಚಾಲಕರ ಏಕತಾ ಮಹಾಸಂಘದ ಪ್ರಕಟಣೆ ಹೊರಬಿದ್ದಿದೆ.

ಇದನ್ನೂ ಓದಿ : ನೈಋತ್ಯ ರೈಲ್ವೆ ಸಿಬ್ಬಂದಿಯಿಂದ ಬೆಂಗಳೂರು ಮೈಸೂರು ಮಾರ್ಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ..

ಅಗತ್ಯ ವಸ್ತುಗಳ ಬೆಲೆ ಏರಿಕೆ : ಎರಡು ಲಕ್ಷಕ್ಕೂ ಹೆಚ್ಚು ಚಾಲಕರು ಮುಷ್ಕರ ನಡೆಸುತ್ತಿರುವುದರ ಪರಿಣಾಮ ಸಾಮಾನ್ಯರ ಜೀವನಕ್ಕೂ ಅಡ್ಡಿಯಾಗಿದೆ. ಇದಕ್ಕಾಗಿ ಕಚೇರಿಗೆ ಹೋಗುವವರಿಗೂ ತೊಂದರೆಯಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ.

ಇದನ್ನೂ ಓದಿ : ಮದುವೆ ಸಮಾರಂಭದಲ್ಲಿ ಮಾಫಿಯಾ ಅತೀಕ್ ಅಹ್ಮದ್ ಪುತ್ರ ಗುಂಡು ಹಾರಿಸುವ ಹಳೇ ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.