ETV Bharat / bharat

ಮಹಾರಾಷ್ಟ್ರ: ರಶ್ಮಿ ಶುಕ್ಲಾ ಫೋನ್ ಟ್ಯಾಪಿಂಗ್​ ಕೇಸ್​ ಸಿಬಿಐಗೆ ಹಸ್ತಾಂತರ - ಈಟಿವಿ ಭಾರತ ಕನ್ನಡ

ಎಫ್​ಐಆರ್ ದಾಖಲಾಗುವ ಮೂರು ದಿನಗಳ ಮುಂಚೆ, ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆಗ ಪ್ರತಿಪಕ್ಷ ನಾಯಕರಾಗಿದ್ದ ದೇವೇಂದ್ರ ಫಡಣವೀಸ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ತಮ್ಮ ವಾದಕ್ಕೆ ಪುಷ್ಟೀಕರಿಸಲು ಆಗಿನ ಮಹಾರಾಷ್ಟ್ರ ಗುಪ್ತಚರ ಇಲಾಖೆ ಕಮಿಷನರ್ ರಶ್ಮಿ ಶುಕ್ಲಾ ತಯಾರಿಸಿದ್ದ ವರದಿ ಹಾಗೂ ಇನ್ನೂ ಕೆಲ ದಾಖಲೆಗಳನ್ನು ಅವರು ಪ್ರದರ್ಶಿಸಿದ್ದರು.

Govt transfers Rashmi Shukla’s phone tapping case to CBI

author img

By

Published : Jul 23, 2022, 4:15 PM IST

ಮುಂಬೈ: ಐಪಿಎಸ್​ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧದ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ (ಫೋನ್ ಟ್ಯಾಪಿಂಗ್) ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಲಾಗಿದೆ. ಇದರ ಜೊತೆಗೆ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯ ನಿಕಟವರ್ತಿಯಾಗಿರುವ ಗಿರೀಶ ಮಹಾಜನ ಆರೋಪಿಯಾಗಿರುವ ಮತ್ತೊಂದು ಪ್ರಕರಣವನ್ನು ಸಹ ಸಿಬಿಐಗೆ ವಹಿಸಲಾಗಿದೆ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.

ರಶ್ಮಿ ಶುಕ್ಲಾ ವಿರುದ್ಧ ಮಾರ್ಚ್ 26, 2021 ರಂದು ಮುಂಬೈ ಸೈಬರ್ ಸೆಲ್ ಎಫ್​ಐಆರ್ ದಾಖಲಿಸಿತ್ತು. ಶುಕ್ಲಾ ಸಲ್ಲಿಸಿದ್ದ ರಹಸ್ಯ ವರದಿಯೊಂದನ್ನು ಸೋರಿಕೆ ಮಾಡಿದ್ದಕ್ಕಾಗಿ ಗುಪ್ತಚರ ಇಲಾಖೆಯ ಸಹಾಯಕ ಆಯುಕ್ತರು ಅಪರಿಚಿತ ವ್ಯಕ್ತಿಗಳ ವಿರುದ್ಧ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಎಫ್​ಐಆರ್ ದಾಖಲಾಗಿತ್ತು. ತಮ್ಮ ರಾಜಕೀಯ ಸಂಪರ್ಕಗಳನ್ನು ಉಪಯೋಗಿಸಿಕೊಂಡು, ಹಣಕ್ಕಾಗಿ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆ ಮಾಡಿರುವ ಬಗ್ಗೆ ಕೆಲ ಖಾಸಗಿ ವ್ಯಕ್ತಿಗಳ ಮುಖ್ಯವಾದ ಮಾಹಿತಿ ಈ ಫೈಲ್​ನಲ್ಲಿತ್ತು ಎನ್ನಲಾಗಿದೆ.

ಎಫ್​ಐಆರ್ ದಾಖಲಾಗುವ ಮೂರು ದಿನಗಳ ಮುಂಚೆ, ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆಗ ಪ್ರತಿಪಕ್ಷ ನಾಯಕರಾಗಿದ್ದ ದೇವೇಂದ್ರ ಫಡಣವೀಸ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ತಮ್ಮ ವಾದಕ್ಕೆ ಪುಷ್ಟೀಕರಿಸಲು ಆಗಿನ ಮಹಾರಾಷ್ಟ್ರ ಗುಪ್ತಚರ ಇಲಾಖೆ ಕಮಿಷನರ್ ರಶ್ಮಿ ಶುಕ್ಲಾ ತಯಾರಿಸಿದ್ದ ವರದಿ ಹಾಗೂ ಇನ್ನೂ ಕೆಲ ದಾಖಲೆಗಳನ್ನು ಅವರು ಪ್ರದರ್ಶಿಸಿದ್ದರು.

ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಶ್ಮಿ ಶುಕ್ಲಾ ತಯಾರಿಸಿರುವ ವರದಿಯ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದ ಅವರು, ತಮ್ಮ ಬಳಿ ಇರುವ ಎಲ್ಲ ದಾಖಲೆಗಳು ಹಾಗೂ ರಶ್ಮಿ ಶುಕ್ಲಾ ವರದಿಯ ಪೆನ್​ ಡ್ರೈವ್​ಗಳನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸುವುದಾಗಿ ಹೇಳಿದ್ದರು.

ಇದನ್ನು ಓದಿ:ಮಣ್ಣಲ್ಲಿ ಮಣ್ಣಾದ ಕಲ್ಲಕುರಿಚಿ ಪಿಯುಸಿ ವಿದ್ಯಾರ್ಥಿನಿ.. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.