ETV Bharat / bharat

ಕೋಚಿಂಗ್ ಸೆಂಟರ್​ಗಳು 16 ವರ್ಷದೊಳಗಿನವರನ್ನು ದಾಖಲಿಸಿಕೊಳ್ಳುವಂತಿಲ್ಲ: ಹೊಸ ಮಾರ್ಗಸೂಚಿ - ಕೋಚಿಂಗ್​ ಸೆಂಟರ್​

ಖಾಸಗಿ ಕೋಚಿಂಗ್ ಸೆಂಟರ್​ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

No intake of students below 16 years, no misleading promises: Guidelines for coaching centres

author img

By PTI

Published : Jan 19, 2024, 2:05 PM IST

ನವದೆಹಲಿ: ಕೋಚಿಂಗ್ ಸೆಂಟರ್​ಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ದಾರಿ ತಪ್ಪಿಸುವ ಭರವಸೆ ನೀಡುವಂತಿಲ್ಲ ಮತ್ತು ರ್ಯಾಂಕ್ ಅಥವಾ ಉತ್ತಮ ಅಂಕಗಳನ್ನು ಖಾತರಿಪಡಿಸುವಂತಿಲ್ಲ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಖಾಸಗಿ ಕೋಚಿಂಗ್ ಸೆಂಟರ್​ಗಳ ಅನಿಯಂತ್ರಿತ ಬೆಳವಣಿಗೆಯನ್ನು ನಿರ್ವಹಿಸಲು ಕೋಚಿಂಗ್ ಸೆಂಟರ್​ ನಿಯಂತ್ರಕ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.

ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು, ಬೆಂಕಿ ಅವಘಡಗಳು, ಕೋಚಿಂಗ್ ಸೆಂಟರ್​ಗಳಲ್ಲಿ ಸೌಲಭ್ಯಗಳ ಕೊರತೆ ಮತ್ತು ಸೆಂಟರ್​ಗಳು ಅಳವಡಿಸಿಕೊಂಡ ಬೋಧನಾ ವಿಧಾನಗಳ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದ ನಂತರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

"ಯಾವುದೇ ಕೋಚಿಂಗ್ ಸೆಂಟರ್ ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ಬೋಧಕರನ್ನು ನೇಮಿಸಿಕೊಳ್ಳಬಾರದು. ಕೋಚಿಂಗ್ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಲು ಸಂಸ್ಥೆಗಳು ದಾರಿತಪ್ಪಿಸುವ ಭರವಸೆಗಳನ್ನು ನೀಡಬಾರದು ಅಥವಾ ಪೋಷಕರಿಗೆ ರ್ಯಾಂಕ್ ಅಥವಾ ಉತ್ತಮ ಅಂಕಗಳನ್ನು ಖಾತರಿಪಡಿಸಬಾರದು. ಸಂಸ್ಥೆಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ. ಮಾಧ್ಯಮಿಕ ಶಾಲಾ ಹಂತದ ನಂತರದ ವಿದ್ಯಾರ್ಥಿಗಳನ್ನು ಮಾತ್ರ ಸೆಂಟರ್​ಗಳಿಗೆ ದಾಖಲಿಸಿಕೊಳ್ಳಬೇಕು" ಎಂದು ಮಾರ್ಗಸೂಚಿಗಳು ತಿಳಿಸಿವೆ.

ಕೋಚಿಂಗ್ ಸಂಸ್ಥೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಕೋಚಿಂಗ್​ನ ಗುಣಮಟ್ಟ ಅಥವಾ ಅದರಲ್ಲಿ ನೀಡಲಾಗುವ ಸೌಲಭ್ಯಗಳು ಅಥವಾ ಅಂತಹ ತರಗತಿಗೆ ಹಾಜರಾದ ವಿದ್ಯಾರ್ಥಿ ಪಡೆದ ಫಲಿತಾಂಶದ ಬಗ್ಗೆ ಯಾವುದೇ ತಪ್ಪುದಾರಿಗೆಳೆಯುವ ಜಾಹೀರಾತನ್ನು ಪ್ರಕಟಿಸುವಂತಿಲ್ಲ ಎಂದು ಅದು ಹೇಳಿದೆ. ಕೋಚಿಂಗ್ ಸೆಂಟರ್​ಗಳು ನೈತಿಕತೆ ಇಲ್ಲದ ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾದ ಬೋಧಕ ಅಥವಾ ವ್ಯಕ್ತಿಗಳನ್ನು ನೇಮಿಸಿಕೊಳ್ಳುವಂತಿಲ್ಲ. ಈ ಮಾರ್ಗಸೂಚಿಗಳ ಅಗತ್ಯಕ್ಕೆ ಅನುಗುಣವಾಗಿ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಹೊಂದಿರದ ಹೊರತು ಸಂಸ್ಥೆಯನ್ನು ನೋಂದಾಯಿಸಲಾಗುವುದಿಲ್ಲ ಎಂದು ಹೊಸ ನಿಯಮ ತಿಳಿಸಿದೆ.

ಕೋಚಿಂಗ್ ಸೆಂಟರ್​ಗಳು ತಮ್ಮಲ್ಲಿನ ಬೋಧಕರ ಅರ್ಹತೆ, ಕೋರ್ಸ್​ಗಳು / ಪಠ್ಯಕ್ರಮ, ಪೂರ್ಣಗೊಳಿಸುವ ಅವಧಿ, ಹಾಸ್ಟೆಲ್ ಸೌಲಭ್ಯಗಳು ಮತ್ತು ವಿಧಿಸಲಾಗುವ ಶುಲ್ಕಗಳ ಇತ್ತೀಚಿನ ಮಾಹಿತಿಯನ್ನು ಹೊಂದಿರುವ ವೆಬ್​ಸೈಟ್​ ಅನ್ನು ಹೊಂದಿರಬೇಕು ಎಂದು ಮಾರ್ಗಸೂಚಿಗಳು ತಿಳಿಸಿವೆ. ಹೊಸ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿಗಳ ಮಧ್ಯೆ ಕಠಿಣ ಸ್ಪರ್ಧೆ ಮತ್ತು ಶೈಕ್ಷಣಿಕ ಒತ್ತಡದ ನಿವಾರಣೆಗಾಗಿ ಕೋಚಿಂಗ್ ಸೆಂಟರ್​ಗಳು ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರ ಮೇಲೆ ಅನಗತ್ಯ ಒತ್ತಡ ಹೇರದೆ ತರಗತಿಗಳನ್ನು ನಡೆಸಬೇಕು.

"ಸಂಕಷ್ಟ ಮತ್ತು ಒತ್ತಡದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ತಕ್ಷಣ ಸಹಾಯವನ್ನು ಒದಗಿಸಲು ಕಾರ್ಯವಿಧಾನವನ್ನು ಸ್ಥಾಪಿಸಬೇಕು. ಕೋಚಿಂಗ್ ಸೆಂಟರ್ ನಿಂದ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸುಲಭವಾಗಿ ಲಭ್ಯವಿದೆ ಎಂದು ಖಚಿತಪಡಿಸಿಕೊಳ್ಳಲು ಸಕ್ಷಮ ಪ್ರಾಧಿಕಾರವು ಕ್ರಮಗಳನ್ನು ತೆಗೆದುಕೊಳ್ಳಬಹುದು. "ಮನಶ್ಶಾಸ್ತ್ರಜ್ಞರು, ಸಲಹೆಗಾರರ ಹೆಸರುಗಳು ಮತ್ತು ಅವರು ಸೇವೆ ಸಲ್ಲಿಸುವ ಸಮಯದ ಬಗ್ಗೆ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೀಡಬಹುದು. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರಿಣಾಮಕಾರಿ ಮಾರ್ಗದರ್ಶನ ಮತ್ತು ಸಮಾಲೋಚನೆಗೆ ಅನುಕೂಲವಾಗುವಂತೆ ತರಬೇತಿ ಪಡೆದ ಸಲಹೆಗಾರರನ್ನು ಕೋಚಿಂಗ್ ಕೇಂದ್ರದಲ್ಲಿ ನೇಮಿಸಬಹುದು" ಎಂದು ಮಾರ್ಗಸೂಚಿಗಳು ತಿಳಿಸಿವೆ.

ಬೋಧಕರು ತಮ್ಮ ಸುಧಾರಣೆಯ ಕ್ಷೇತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮತ್ತು ಸೂಕ್ಷ್ಮವಾಗಿ ಮಾಹಿತಿಯನ್ನು ತಿಳಿಸಲು ಮಾನಸಿಕ ಆರೋಗ್ಯ ವಿಷಯಗಳಲ್ಲಿ ತರಬೇತಿ ಪಡೆಯಬಹುದು ಎಂದು ಅದು ಉಲ್ಲೇಖಿಸಿದೆ. ಕೋಚಿಂಗ್ ಹಬ್ ಆಗಿರುವ ಕೋಟಾದಲ್ಲಿ 2023 ರಲ್ಲಿ ಅತ್ಯಧಿಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳ ಹಿನ್ನೆಲೆಯಲ್ಲಿ ಮಾನಸಿಕ ಯೋಗಕ್ಷೇಮದ ಕುರಿತಾದ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆಯಲ್ಲಿನ ತೀವ್ರ ಹೆಚ್ಚಳವು ಕೋಚಿಂಗ್ ಉದ್ಯಮವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ಮಾರ್ಗಸೂಚಿಗಳ ಪ್ರಕಾರ, ವಿವಿಧ ಕೋರ್ಸ್​ಗಳ ಬೋಧನಾ ಶುಲ್ಕಗಳು ಮತ್ತು ಪಠ್ಯಕ್ರಮಗಳು ನ್ಯಾಯಯುತ ಮತ್ತು ಸಮಂಜಸವಾಗಿರಬೇಕು ಮತ್ತು ವಿಧಿಸಲಾದ ಶುಲ್ಕದ ರಸೀದಿಗಳನ್ನು ನೀಡಬೇಕು.

"ವಿದ್ಯಾರ್ಥಿಯು ಕೋರ್ಸ್​ನ ಪೂರ್ಣ ಶುಲ್ಕ ಪಾವತಿಸಿದ್ದರೆ ಮತ್ತು ನಿಗದಿತ ಅವಧಿಯ ಮಧ್ಯದಲ್ಲಿ ಕೋರ್ಸ್ ಅನ್ನು ತೊರೆಯುತ್ತಿದ್ದರೆ, ಉಳಿದ ಅವಧಿಗೆ ಈ ಹಿಂದೆ ಠೇವಣಿ ಮಾಡಿದ ಶುಲ್ಕದಿಂದ 10 ದಿನಗಳಲ್ಲಿ ಪ್ರೊ-ರಾಟಾ ಆಧಾರದ ಮೇಲೆ ಶುಲ್ಕ ಮರುಪಾವತಿಸಬೇಕು. "ವಿದ್ಯಾರ್ಥಿಯು ಕೋಚಿಂಗ್ ಸೆಂಟರ್​ನ ಹಾಸ್ಟೆಲ್​ನಲ್ಲಿ ವಾಸಿಸುತ್ತಿದ್ದರೆ ಹಾಸ್ಟೆಲ್ ಶುಲ್ಕ ಮತ್ತು ಮೆಸ್ ಶುಲ್ಕ ಇತ್ಯಾದಿಗಳನ್ನು ಸಹ ಮರುಪಾವತಿಸಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲೂ, ನಿರ್ದಿಷ್ಟ ಕೋರ್ಸ್​ನ ದಾಖಲಾತಿ ಶುಲ್ಕ ಮತ್ತು ಅವಧಿಯನ್ನು ಕೋರ್ಸ್​ ನಡೆಯುತ್ತಿರುವಾಗ ಹೆಚ್ಚಿಸುವಂತಿಲ್ಲ" ಎಂದು ಅದು ಹೇಳಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾಗುವ ಅನಗತ್ಯ ಒತ್ತಡವನ್ನು ಉಂಟುಮಾಡುವ ಅಥವಾ ಇತರ ಕೃತ್ಯಗಳಿಗೆ ಕಾರಣವಾಗುವ ಅತಿಯಾದ ಶುಲ್ಕ ವಿಧಿಸುವ ಕೋಚಿಂಗ್ ಕೇಂದ್ರಗಳಿಗೆ 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಬೇಕು ಅಥವಾ ಅವರ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಕೇಂದ್ರವು ಸೂಚಿಸಿದೆ. ಕೋಚಿಂಗ್ ಸಂಸ್ಥೆಗಳ ಸರಿಯಾದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು, ಮಾರ್ಗಸೂಚಿಗಳು ಜಾರಿಗೆ ಬಂದ ಮೂರು ತಿಂಗಳೊಳಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಕೇಂದ್ರಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.

ಕೋಚಿಂಗ್ ಸೆಂಟರ್​ನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನೋಂದಣಿಯ ಬಗ್ಗೆ ಗಮನವಿಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. "+2 ಮಟ್ಟದ ಶಿಕ್ಷಣದ ನಿಯಂತ್ರಣವು ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಪರಿಗಣಿಸಿ, ಈ ಸಂಸ್ಥೆಗಳನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ನಿಯಂತ್ರಿಸುತ್ತವೆ" ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸ್ಯಾಮ್​ಸಂಗ್ ಹಿಂದಿಕ್ಕಿ ವಿಶ್ವದ ನಂ.1 ಸ್ಮಾರ್ಟ್​ಫೋನ್​ ಕಂಪನಿಯಾದ ಆ್ಯಪಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.