ನವದೆಹಲಿ : ಕೇಂದ್ರ ಸರ್ಕಾರದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಖರೀದಿ ಮಾಡಿದ ಕೆಲ ದಿನಗಳ ಬೆನ್ನಲ್ಲೇ ಇದೀಗ ಟಾಟಾ ಗ್ರೂಪ್ ತೆಕ್ಕೆಗೆ ಕೇಂದ್ರ ಸರ್ಕಾರದ ಮತ್ತೊಂದು ಸಂಸ್ಥೆ ಸೇರಿದೆ. ಕೇಂದ್ರ ಸರ್ಕಾರದ ನೀಲಾಚಲ್ ಇಸ್ಪಾಟ್ ನಿಗಮ್ ಲಿಮಿಟೆಡ್ ಖರೀದಿ ಮಾಡುವಲ್ಲಿ ಟಾಟಾ ಸ್ಟೀಲ್ ಲಾಂಗ್ ಪ್ರಾಡೆಕ್ಟ್ಸ್ ಲಿಮಿಟೆಡ್(Tata Steel Long Products Ltd) ಯಶಸ್ವಿಯಾಗಿದೆ.
ಬಿಡ್ ಖರೀದಿ ಮಾಡುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಮಾಹಿತಿ ನೀಡಿದೆ. ಕೇಂದ್ರ ಸಾರ್ವಜನಿಕ ವಲಯದ ಜಂಟಿ ಉದ್ಯಮಗಳಲ್ಲಿ ಒದಾಗಿದ್ದ ಒಡಿಶಾದ ಕಳಿಂಗನಗರದಲ್ಲಿರುವ ನೀಲಾಚಲ್ ಇಸ್ಪಾಟ್ ನಿಗಮ್ 1.1 ಮೆಟ್ರಿಕ್ ಟನ್ ಸಾಮರ್ಥ್ಯದ ಉಕ್ಕಿನ ಸ್ಥಾವರವಾಗಿದ್ದು, ಇದೀಗ ಟಾಟಾ ಪಾಲಾಗಿದೆ.
ಕಳೆದ ಒಂದು ವಾರದ ಹಿಂದೆ ನೀಲಾಚಲ ಇಸ್ಪಾತ್ ನಿಗಮ್ ಮಿಮಿಟೆಡ್(NINL) ಮಾರಾಟ ಮಾಡಲು ಕೇಂದ್ರ ಸರ್ಕಾರ ಬಿಡ್ ಆಹ್ವಾನ ಮಾಡಿತ್ತು. ಇದರಲ್ಲಿ ಭಾಗಿಯಾಗಿದ್ದ ಟಾಟಾ ಬರೋಬ್ಬರಿ 12,100 ಕೋಟಿ ರೂ.ಗೆ ಹರಾಜು ಖರೀದಿ ಮಾಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ಬೆಂಗಳೂರಿನಿಂದ ಕೊಲ್ಹಾಪುರಕ್ಕೆ ಸಾಗಿಸುತ್ತಿದ್ದ ಅಕ್ರಮ ಶ್ರೀಗಂಧ ವಶ.. ಓರ್ವನ ಬಂಧನ
ನೀಲಾಚಲ ನಿಗಮ ಕಳೆದ ಕೆಲ ವರ್ಷಗಳಿಂದ ಆರ್ಥಿಕ ನಷ್ಟದಲ್ಲಿದ್ದು, ಕಳೆದ ವರ್ಷ 6,600 ಕೋಟಿ ರೂ. ಸಾಲ ಹೊಂದಿತ್ತು. ಇದೇ ಕಾರಣಕ್ಕಾಗಿ 2020ರಿಂದ ಈ ಸ್ಥಾವರ ಮುಚ್ಚಲಾಗಿದೆ. ಸಾರ್ವಜನಿಕ ವಲಯದ ಉಕ್ಕಿನ ಉತ್ಪಾದನಾ ವಲಯ ನೀಲಾಚಲ ಇದೀಗ ಖಾಸಗೀಕರಣವಾಗಿದೆ.
ಭಾರೀ ನಷ್ಟದಲ್ಲಿದ್ದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನ ಟಾಟಾ ಗ್ರೂಪ್ ಬರೋಬ್ಬರಿ 1800 ಕೋಟಿ ರೂ. ನೀಡಿ ಕಳೆದ ಕೆಲ ದಿನಗಳ ಹಿಂದೆ ಖರೀದಿ ಮಾಡಿತ್ತು. ಟಾಟಾ ಗ್ರೂಪ್ನ ಅಂಗ ಸಂಸ್ಥೆಯಾಗಿರುವ ಟೆಲೆಸ್ ಪ್ರೈವೇಟ್ ಮಿಮಿಟೆಡ್ ಈ ಬಿಡ್ನಲ್ಲಿ ಭಾಗಿಯಾಗಿತ್ತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ