ETV Bharat / bharat

ಕಳೆದ ವರ್ಷದ 444 ಲಕ್ಷ ಟನ್‌ಗಳಿಂದ ಈ ವರ್ಷ 184.58 ಲಕ್ಷ ಟನ್‌ಗಳಿಗೆ ಇಳಿದ ಗೋಧಿ ಸಂಗ್ರಹ

author img

By

Published : May 31, 2022, 8:09 PM IST

ಪ್ರಸಕ್ತ ಮಾರುಕಟ್ಟೆ ವರ್ಷದ ಮೇ 29 ರವರೆಗೆ ಪಂಜಾಬ್‌ನಲ್ಲಿ 96.16 ಲಕ್ಷ ಟನ್, ಮಧ್ಯಪ್ರದೇಶದಲ್ಲಿ 44.45 ಲಕ್ಷ ಟನ್, ಹರಿಯಾಣದಲ್ಲಿ 40.97 ಲಕ್ಷ ಟನ್ ಮತ್ತು ಉತ್ತರ ಪ್ರದೇಶದಲ್ಲಿ 2.84 ಲಕ್ಷ ಟನ್, ಬಿಹಾರದಲ್ಲಿ ಸುಮಾರು 3,343 ಟನ್‌ಗಳು, ಚಂಡೀಗಢದಲ್ಲಿ 3,221 ಟನ್‌ಗಳು, ಉತ್ತರಾಖಂಡದಲ್ಲಿ 1,982 ಟನ್‌ಗಳು ಮತ್ತು ರಾಜಸ್ಥಾನದಲ್ಲಿ 1,685 ಟನ್‌ಗಳು ಮತ್ತು ದೆಹಲಿಯಲ್ಲಿ ಒಂದು ಟನ್‌ಗಳಷ್ಟು ಗೋಧಿಯನ್ನು ಸಂಗ್ರಹಿಸಲಾಗಿದೆ.

Government's wheat procurement down from 444 lakh tonnes last year to 184.58 lakh tonnes this year
ಕಳೆದ ವರ್ಷದ 444 ಲಕ್ಷ ಟನ್‌ಗಳಿಂದ ಈ ವರ್ಷ 184.58 ಲಕ್ಷ ಟನ್‌ಗಳಿಗೆ ಇಳಿದ ಗೋಧಿ ಸಂಗ್ರಹ

ನವದೆಹಲಿ: 2022-23ರ ಹಿಂಗಾರು ಮಾರುಕಟ್ಟೆ ವರ್ಷದಲ್ಲಿ ಸರ್ಕಾರವು 37,192.07 ಕೋಟಿ ರೂಪಾಯಿಗಳ MSP ಮೌಲ್ಯದಲ್ಲಿ 184.58 ಲಕ್ಷ ಟನ್ ಗೋಧಿಯನ್ನು ಸಂಗ್ರಹಿಸಿದ್ದು, ಇದು 17.50 ಲಕ್ಷ ರೈತರಿಗೆ ಪ್ರಯೋಜನವಾಗಿದೆ ಎಂದು ಆಹಾರ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಆಹಾರ ಸಚಿವಾಲಯದ ಪ್ರಕಾರ, ಪ್ರಸಕ್ತ ಮಾರುಕಟ್ಟೆ ವರ್ಷದ ಮೇ 29 ರವರೆಗೆ ಪಂಜಾಬ್‌ನಲ್ಲಿ 96.16 ಲಕ್ಷ ಟನ್, ಮಧ್ಯಪ್ರದೇಶದಲ್ಲಿ 44.45 ಲಕ್ಷ ಟನ್, ಹರಿಯಾಣದಲ್ಲಿ 40.97 ಲಕ್ಷ ಟನ್ ಮತ್ತು ಉತ್ತರ ಪ್ರದೇಶದಲ್ಲಿ 2.84 ಲಕ್ಷ ಟನ್, ಬಿಹಾರದಲ್ಲಿ ಸುಮಾರು 3,343 ಟನ್‌ಗಳು, ಚಂಡೀಗಢದಲ್ಲಿ 3,221 ಟನ್‌ಗಳು, ಉತ್ತರಾಖಂಡದಲ್ಲಿ 1,982 ಟನ್‌ಗಳು ಮತ್ತು ರಾಜಸ್ಥಾನದಲ್ಲಿ 1,685 ಟನ್‌ಗಳು ಮತ್ತು ದೆಹಲಿಯಲ್ಲಿ ಒಂದು ಟನ್‌ಗಳಷ್ಟು ಗೋಧಿಯನ್ನು ಸಂಗ್ರಹಿಸಲಾಗಿದೆ.

ಹಿಂಗಾರು ಮಾರುಕಟ್ಟೆ ವರ್ಷವು ಏಪ್ರಿಲ್‌ನಿಂದ ಮಾರ್ಚ್‌ವರೆಗೆ ನಡೆಯುತ್ತದೆ ಆದರೆ ಹೆಚ್ಚಿನ ಸಂಗ್ರಹಣೆಯು ಜೂನ್‌ನಲ್ಲಿ ಕೊನೆಗೊಳ್ಳುತ್ತದೆ. ಗೋಧಿ ಉತ್ಪಾದನೆಯಲ್ಲಿನ ಕುಸಿತ ಮತ್ತು ರಫ್ತು ಹೆಚ್ಚಳದಿಂದಾಗಿ ಗೋಧಿ ಸಂಗ್ರಹಣೆ ಗುರಿಯು ಹಿಂದಿನ 444 ಲಕ್ಷ ಟನ್‌ಗಳಿಂದ ಪ್ರಸಕ್ತ ವರ್ಷ 195 ಲಕ್ಷ ಟನ್‌ಗಳಿಗೆ ಕುಸಿದಿದೆ. ದೇಶದಲ್ಲಿ ಆಹಾರ ಧಾನ್ಯದ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಮೇ 14 ರಂದು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು.

ದೇಶದ ವಿವಿಧ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆಗಳಿಂದಾಗಿ ಗೋಧಿ ಉತ್ಪಾದನೆಯಲ್ಲಿ ಕುಸಿತವಾಗಿದೆ. ಮತ್ತು ರಷ್ಯಾದ ಒಕ್ಕೂಟದಿಂದ ಉಕ್ರೇನ್‌ನಲ್ಲಿನ ಯುದ್ಧದ ಪ್ರಭಾವದಿಂದಾಗಿ ಗೋಧಿ ಪೂರೈಕೆ ಸರಪಳಿಗೆ ಪೆಟ್ಟು ಬಿದ್ದಿರುವುದು ಮಾತ್ರವಲ್ಲದೆ ಜಾಗತಿಕವಾಗಿ ಧಾನ್ಯ ಉದ್ಯಮದ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ: ಶೇ.8.7ಕ್ಕೆ ತಲುಪಿದ ಭಾರತದ ಜಿಡಿಪಿ.. 4ನೇ ತ್ರೈಮಾಸಿಕದಲ್ಲಿ ಶೇ 4.1ರಷ್ಟು ಏರಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.