ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದ ಮುಂದುವರೆದ ಭಾಗವಾಗಿ ನಾಳೆಯಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಗೈಡ್ಲೈನ್ಸ್ ಹೊರಡಿಸಿದೆ.
ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. 12ರಿಂದ 14 ವರ್ಷದ ಮಕ್ಕಳನ್ನ ಎರಡು ಗುಂಪುಗಳಲ್ಲಿ ವಿಂಗಡಣೆಗೆ ಸೂಚಿಸಿದ್ದು, 12ರಿಂದ 13 ವರ್ಷ ಹಾಗೂ 13ರಿಂದ 14 ವರ್ಷದೊಳಗಿನ ಮಕ್ಕಳನ್ನ ಎರಡು ಗುಂಪುಗಳಲ್ಲಿ ವಿಂಗಡಣೆ ಮಾಡುವಂತೆ ತಿಳಿಸಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ವ್ಯಾಕ್ಸಿನ್ ನೀಡಲು ಸೂಚನೆ ನೀಡಿರುವ ಕೇಂದ್ರ 15 ಮಾರ್ಚ್ 2010ರೊಳಗೆ ಜನಿಸಿರುವ ಮಕ್ಕಳು ವ್ಯಾಕ್ಸಿನ್ ಪಡೆದುಕೊಳ್ಳಲು ಅರ್ಹರಲ್ಲ ಎಂದಿದೆ. ಲಸಿಕೆ ಪಡೆದುಕೊಳ್ಳಲು ಮಕ್ಕಳ ಪೋಷಕರು ಕೋವಿನ್ ಪೋರ್ಟಲ್ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿರಿ: ಪಂಚರಾಜ್ಯ ಸೋಲಿಗೆ ತಲೆದಂಡ.. ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಗೆ ಸೋನಿಯಾ ಸೂಚನೆ..
ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆ ಮಾತ್ರ ನೀಡಲು ಮಾರ್ಗಸೂಚಿಯಲ್ಲಿ ತಿಳಿಸಿದ್ದು, ಎರಡು ಡೋಸ್ಗಳ ಮಧ್ಯೆ 28 ದಿನಗಳ ಅಂತರ ಇರುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿ 4.7 ಕೋಟಿ ಮಕ್ಕಳು 12-14 ವರ್ಷದೊಳಗಿನ ಮಕ್ಕಳು ಇದ್ದು, ಆರಂಭದಲ್ಲಿ ಕೋವಿಡ್ ಸೋಂಕಿನಿಂದ ಅಪಾಯದಲ್ಲಿರುವ ಮಕ್ಕಳಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್: ನಾಳೆಯಿಂದಲೇ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಣೆ ಹೊರಡಿಸಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದೆ.