ನವದೆಹಲಿ: ಸುಪ್ರೀಂಕೋರ್ಟ್ಗೆ ಮೂವರು ಮಹಿಳಾ ನ್ಯಾಯಾಧೀಶರು ಸೇರಿದಂತೆ 9 ಮಂದಿ ನ್ಯಾಯಾಧೀಶರ ಹೆಸರುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೆಲವು ದಿನಗಳ ಹಿಂದೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಈ ಹೆಸರುಗಳನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಕರ್ನಾಟಕದ ಮುಖ್ಯ ನ್ಯಾಯಾಧೀಶರಾದ ಎ.ಎಸ್.ಓಕಾ, ಗುಜರಾತ್ನ ಮುಖ್ಯ ನ್ಯಾಯಾಧೀಶರಾದ ವಿಕ್ರಮ್ ನಾಥ್, ತೆಲಂಗಾಣದ ಹಿಮ ಕೊಹ್ಲಿ, ಸಿಕ್ಕಿಂನ ಜೆ.ಕೆ.ಮಹೇಶ್ವರಿ ಮತ್ತು ನಾಲ್ವರು ಹೈಕೋರ್ಟ್ ನ್ಯಾಯಮೂರ್ತಿಗಳಾದ ಕರ್ನಾಟಕದ ಬಿ.ವಿ.ನಾಗರತ್ನ, ಮದ್ರಾಸ್ನ ಎಂ.ಎಂ.ಸುಂದರೇಶ್, ಕೇರಳದ ಸಿ.ಟಿ.ರವಿಕುಮಾರ್ ಮತ್ತು ಗುಜರಾತ್ನ ಬೇಲಾ ಎಂ.ತ್ರಿವೇದಿ ಮತ್ತು ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿತ್ತು.
ಈ ಹಿಂದೆ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೊಲಿಜಿಯಂ ಸಭೆಯ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಗಳು 'ಅತ್ಯಂತ ದುರದೃಷ್ಟಕರ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ಇಂದು ಕೇಂದ್ರ ಸರ್ವಪಕ್ಷ ಸಭೆ: ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಜೈಶಂಕರ್ ಮಾಹಿತಿ