ಲಖನೌ : ಗೋರಖ್‌ಪುರದ ಪ್ರಸಿದ್ಧ ಶ್ರೀ ಗೋರಖನಾಥ ದೇವಸ್ಥಾನದಲ್ಲಿ ಭಾನುವಾರ ಸಂಜೆ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯ ತನಿಖೆಯನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಹಿಸಿಕೊಂಡಿದೆ. ಘಟನೆಯ ಬಳಿಕ ದೇವಸ್ಥಾನದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದಾಳಿಕೋರ ಅಹ್ಮದ್ ಮುರ್ತುಜಾ ಅಬ್ಬಾಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಘಟನೆ ನಡೆಯುವ ಎರಡು ದಿನಗಳ ಮೊದಲೇ ಎಟಿಎಸ್ ಗೋರಖ್‌ಪುರ ನಗರದಲ್ಲಿತ್ತು ಮತ್ತು ಘಟನೆ ಸಂಬಂಧ ಮುರ್ತುಜಾ ಅವರ ಮನೆಗೆ ವಕೀಲರಾಗಿ ಅವರು ಪ್ರವೇಶಿಸಿದ್ದರು. ಈ ವೇಳೆ ಮುರ್ತುಜಾ ಮನೆಯಲ್ಲಿ ಇರಲಿಲ್ಲ. ಅವರ ತಂದೆ ಎಟಿಎಸ್‌ನ ವಕೀಲರಾಗಿ ಆಗಮಿಸಿದ್ದವರನ್ನು ಭೇಟಿಯಾಗಿ ಮಾತನಾಡಿದ್ದರು.
ಆದರೆ, ಆತ ಮನೆಗೆ ಬಂದಾಗ ಅಧಿಕಾರಿಗಳು ಮನೆಗೆ ಬಂದಿದ್ದ ವಿಷಯ ತಿಳಿದು ತನ್ನ ಅಗತ್ಯ ವಸ್ತುಗಳಿದ್ದ ಬ್ಯಾಗ್ ಎತ್ತಿಕೊಂಡು ನೇಪಾಳದ ಕಡೆಗೆ ಹೊರಟ್ಟಿದ್ದ ಎನ್ನಲಾಗಿದೆ. ಪ್ರಮುಖ ವಿಷಯ ಎಂದರೆ ತನ್ನ ಮನೆಗೆ ಹೋಗಿದ್ದ ಎಟಿಎಸ್ ಅಧಿಕಾರಿಗಳನ್ನು ಗುರುತಿಸುವಲ್ಲಿ ಮುರ್ತಾಜಾ ಯಶಸ್ವಿಯಾಗಿದ್ದ. ಹಾಗೆ ತನ್ನ ಮುಂದಿನ ಯೋಜನೆಯನ್ನು ಕೈಗೊಳ್ಳುವ ಉದ್ದೇಶದಿಂದ ಮನೆಯನ್ನು ತೊರೆದಿದ್ದ ಎಂದು ತಿಳಿದು ಬಂದಿದೆ.
ಇನ್ನು ಮಹಾರಾಜ್‌ಗಂಜ್‌ನಿಂದ ಸಿಕ್ಕಿಬಿದ್ದಿರುವ ಅವರ ಇಬ್ಬರು ಸಹಚರರು ಆರೋಪಿಯನ್ನು ಮೋಟಾರ್‌ಸೈಕಲ್‌ನಲ್ಲಿ ಗೋರಖನಾಥ ದೇವಸ್ಥಾನದವರೆಗೆ ಬಿಟ್ಟಿದ್ದರು ಎನ್ನಲಾಗಿದೆ. ಮನೆಯಿಂದ ಹೊರಗೆ ಹೋದ ನಂತರ ಆರೋಪಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಈಗ ಗೋರಖ್‌ಪುರ ಸಿದ್ಧಾರ್ಥನಗರದ 4 ಜನರನ್ನು ವಿಚಾರಣೆ ನಡೆಸಲಾಗುತ್ತಿದೆ. ಹಾಗೆ ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್ನಲ್ಲಿನ ಕಾರ್ಯಾಚರಣೆಗಳ ಮೇಲೆ ಅಧಿಕಾರಿಗಳು ಕಣ್ಣಾಯಿಸಿದ್ದು, ಅದರಲ್ಲಿ ಭಯೋತ್ಪಾದನೆಗೆ ನಂಟಿರುವಂತಹ ವಿಡಿಯೋ ಹಾಗೂ ಇತರೆ ದಾಖಲಾತಿ ಲಭ್ಯವಾಗಿವೆ.
ಇದನ್ನೂ ಓದಿ: ಹೆಣ್ಣುಮಕ್ಕಳ ಅಂಗಾಂಗಗಳನ್ನು ಕಿತ್ತು ತಿನ್ನುತ್ತಾರೆ... ಭಯಂಕರ ಭವಿಷ್ಯ ನುಡಿದ ಶ್ರೀಗಳು
ಮುರ್ತಾಜಾ ಅವರ ಮನಸ್ಥಿತಿಯನ್ನು ಈಗಾಗಲೇ ಗ್ರಹಿಸಿರುವ ಎಟಿಎಸ್ ಮೂಲಗಳು, ಅವರು ಅಂತಹ ಘಟನೆಯನ್ನು ನಡೆಸಲು ಮುಂದಾಗಿದ್ದರು ಎಂದು ಶಂಕಿಸಿದ್ದರು. ಇನ್ನು ನಿನ್ನೆ ಮುರ್ತುಜಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಉಳಿದ ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಗೋರಖ್‌ಪುರಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ, ಗಾಯಗೊಂಡ ಪೊಲೀಸರನ್ನು ಭೇಟಿ ಮಾಡಿ ತನಿಖೆ ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಪರಿಣಾಮ ಎಲ್ಲಾ ತನಿಖಾ ಸಂಸ್ಥೆಗಳು ತಮ್ಮದೇ ಮಟ್ಟದಲ್ಲಿ ತನಿಖೆ ನಡೆಸುತ್ತಿವೆ. ಬಹುಶಃ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ತನಿಖೆ ನಡೆಸಬಹುದು ಎಂದು ತಿಳಿದು ಬಂದಿದೆ.
ಮುರ್ತಾಜಾ ಅವರ ತಂದೆಯ ಪ್ರಕಾರ, ಅವರು ಆಗಾಗ್ಗೆ ಮನೆಯಿಂದ ಹೊರಗೆ ಬರುತ್ತಿದ್ದರು. ಅವರ ಮಾನಸಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆತ ಚಿಕಿತ್ಸೆ ಪಡೆಯುತ್ತಿದ್ದ ಹೀಗಿರುವಾಗ ಇಂತಹ ಘಟನೆ ಹೇಗೆ ಸಾಧ್ಯ? ಆತನಿಗೆ ಭಯೋತ್ಪಾದಕರ ಸಂಪರ್ಕವಿದ್ದರೆ ಅದು ಹೇಗೆ? ಎಂದು ಪ್ರಶ್ನಿಸಿದ್ದಾರೆ.