ETV Bharat / bharat

ನೋಯ್ಡಾದ ಅವಳಿ ಕಟ್ಟಡಗಳ ಮಾರುಕಟ್ಟೆ ಮೌಲ್ಯ 700 ಕೋಟಿ.. ಧ್ವಂಸದಿಂದ 500 ಕೋಟಿ ನಷ್ಟ - Rs 500 cr lost on Noida twin towers

ಎರಡು ಕಟ್ಟಡಗಳಲ್ಲಿದ್ದ 900ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಸೂಪರ್‌ಟೆಕ್ ಲಿಮಿಟೆಡ್‌ನ ಅಧ್ಯಕ್ಷ ಆರ್‌ಕೆ ಅರೋರಾ ತಿಳಿಸಿದ್ದಾರೆ.

gone-with-the-wind-supertech-says-rs-500-cr-lost-on-noida-twin-towers
ನೋಯ್ಡಾದ ಅವಳಿ ಕಟ್ಟಡಗಳ ಮಾರುಕಟ್ಟೆ ಮೌಲ್ಯ 700 ಕೋಟಿ, ಧ್ವಂಸದಿಂದ 500 ಕೋಟಿ ನಷ್ಟ
author img

By

Published : Aug 28, 2022, 6:16 PM IST

ನವದೆಹಲಿ: ನೋಯ್ಡಾದಲ್ಲಿ ರಿಯಾಲ್ಟಿ ಸಂಸ್ಥೆ ಸೂಪರ್‌ಟೆಕ್ ಲಿಮಿಟೆಡ್‌ನ ಅವಳಿ ಕಟ್ಟಡಗಳನ್ನು ಕೆಡವಿದ್ದರಿಂದ ನಿರ್ಮಾಣ ಮತ್ತು ಬಡ್ಡಿ ವೆಚ್ಚ ಸೇರಿದಂತೆ ಸುಮಾರು 500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪನಿಯ ಅಧ್ಯಕ್ಷ ಆರ್‌ ಕೆ ಅರೋರಾ ಹೇಳಿದರು.

ಸುಮಾರು 100 ಮೀಟರ್ ಎತ್ತರದ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸೆಯಾನೆಗಳನ್ನು ಭಾನುವಾರ ಮಧ್ಯಾಹ್ನ 2.30ಕ್ಕೆ ನೆಲಸಮ ಮಾಡಲಾಯಿತು. ಈ ಕಾರ್ಯಾಚರಣೆಗೆ 3,700 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಲಾಗಿದೆ. ಇದನ್ನು ಕೆಡವಿದ ವೆಚ್ಚವೇ ಸುಮಾರು 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಅವಳಿ ಗೋಪುರಗಳಿಗಾಗಿ ಭೂಮಿ ಮತ್ತು ನಿರ್ಮಾಣ ವೆಚ್ಚಕ್ಕಾಗಿ ಖರ್ಚು ಮಾಡಿದ ಮೊತ್ತ, ವಿವಿಧ ಅನುಮೋದನೆಗಳಿಗಾಗಿ ಅಧಿಕಾರಿಗಳಿಗೆ ಪಾವತಿಸಿದ ಶುಲ್ಕಗಳು, ವರ್ಷಗಳ ಕಾಲ ಬ್ಯಾಂಕ್‌ಗಳಿಗೆ ಪಾವತಿಸಿದ ಬಡ್ಡಿ ಮತ್ತು ಖರೀದಿದಾರರಿಗೆ ಪಾವತಿಸಿದ ಶೇಕಡಾ 12ರ ಬಡ್ಡಿಯನ್ನು ಗಣನೆಗೆ ತೆಗೆದುಕೊಂಡರೆ ನಮ್ಮ ಒಟ್ಟಾರೆ ನಷ್ಟ ಸುಮಾರು 500 ಕೋಟಿ ರೂಪಾಯಿ ಎಂದು ಅರೋರಾ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಎರಡು ಕಟ್ಟಡಗಳಲ್ಲಿದ್ದ 900ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಎರಡು ಗೋಪುರಗಳ ಒಟ್ಟು ನಿರ್ಮಾಣ ಪ್ರದೇಶವು ಸುಮಾರು 8 ಲಕ್ಷ ಚದರ್​ ಅಡಿಗಳಷ್ಟಿದೆ. ನಾವು ಈ ಗೋಪುರಗಳನ್ನು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರವು ಅನುಮೋದಿಸಿದ ಕಟ್ಟಡದ ಯೋಜನೆಯ ಪ್ರಕಾರವೇ ನಿರ್ಮಿಸಿದ್ದೆವು ಎಂದೂ ಅರೋರಾ ಹೇಳಿದರು.

ಮತ್ತೊಂದೆಡೆ, ಮನೆ ಖರೀದಿದಾರರ ಸಂಸ್ಥೆಯಾದ ಎಫ್‌ಪಿಸಿಇ ಅಧ್ಯಕ್ಷ ಅಭಯ್ ಉಪಾಧ್ಯಾಯ, ಈ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸಿರುವುದು ಫ್ಲಾಟ್ ಮಾಲೀಕರಿಗೆ ಸಂದ ದೊಡ್ಡ ವಿಜಯ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ಇದು ಬಿಲ್ಡರ್‌ಗಳು ಮತ್ತು ಅಭಿವೃದ್ಧಿ ಅಧಿಕಾರಿಗಳ ಅಹಂಕಾರವನ್ನು ಅಡಗಿಸಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಇತ್ತ, ರಿಯಲ್ ಎಸ್ಟೇಟ್ ಕಾನೂನು (ರೇರಾ) ಜಾರಿ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ ಮನೆ ಖರೀದಿದಾರರ ಛತ್ರಿ ಸಂಸ್ಥೆಯಾದ ಫೋರಮ್ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್ ಸಂಸ್ಥೆಯು ಇಂತಹ ಯೋಜನೆಗಳಲ್ಲಿ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಬೇಕೆಂದು ಹೇಳಿದೆ.

ಇನ್ನೊಂದೆಡೆ ಕ್ರೆಡೈ ರಾಷ್ಟ್ರೀಯ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ, ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಇದು ಉತ್ತಮ ನಡೆಯಾಗಿದ್ದು, ನವ ಭಾರತದ ಸಂಕೇತವಾಗಿದೆ. ಈ ನಿರ್ಧಾರದಲ್ಲಿ ನಾವು ಅಧಿಕಾರಿಗಳು ಮತ್ತು ಸುಪ್ರೀಂ ಕೋರ್ಟ್‌ನ ಪರವಾಗಿ ನಿಲ್ಲುತ್ತೇವೆ. ಹೆಚ್ಚಿನ ಡೆವಲಪರ್‌ಗಳು ಅಧಿಕಾರಿಗಳು ನಿಗದಿಪಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಒಂದು ವೇಳೆ ಇದನ್ನು ಮಾಡದವರಿಗೆ ನೆನಪಿನಲ್ಲಿ ಉಳಿಯುವಂತೆ ಆಗಿದೆ ಎಂದು ತಿಳಿಸಿದ್ದಾರೆ.

2009ರಲ್ಲಿ ನಿರ್ಮಿಸಲಾಗಿದ್ದ ಎರಡು ಕಟ್ಟಡಗಳು 1 ಬಿಹೆಚ್​​ಕೆ ಸ್ಟುಡಿಯೋ ಅಪಾರ್ಟ್‌ಮೆಂಟ್‌ಗಳು ಮತ್ತು 1,050 ಹಾಗೂ 1,475 ಚದರ ಅಡಿಗಳಲ್ಲಿ 2 ಮತ್ತು 3 ಬಿಹೆಚ್​ಕೆ ಫ್ಲಾಟ್‌ಗಳನ್ನು ಒಳಗೊಂಡಿತ್ತು. ಆರಂಭದಲ್ಲಿ ಪ್ರತಿ ಚದರ್​ ಅಡಿಗೆ 3,200 ರೂ. ನಿಗದಿಯಾಗಿತ್ತು. 2012 ರಲ್ಲಿ ಮಹಡಿಗಳ ಸಂಖ್ಯೆಯನ್ನು 40ಕ್ಕೆ ಹೆಚ್ಚಿಸಿದಾಗ ಪ್ರತಿ ಚದರ್​ ಅಡಿ ಬೆಲೆಯನ್ನು 5,200 ರೂ.ಗೆ ಪರಿಷ್ಕರಿಸಲಾಗಿತ್ತು. ಪ್ರಸ್ತುತ ಮಾರುಕಟ್ಟೆ ದರವು ಚದರ ಅಡಿಗೆ 8,500 ರಿಂದ 9,500 ರೂ. ಆಗಿದೆ.

ಇದನ್ನೂ ಓದಿ: Noida twin towers crashing down.. 9 ಸೆಕೆಂಡ್​ನಲ್ಲಿ ನೋಯ್ಡಾದ ಗಗನಚುಂಬಿ ಕಟ್ಟಡಗಳು ನೆಲಸಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.