ಭಾರತೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದಿನ ದರಗಳನ್ನು ಗಮನಿಸಿದರೆ ಹೈದರಾಬಾದ್, ಕೇರಳ, ಮುಂಬೈ, ಕೊಲ್ಕತ್ತಾ ಮತ್ತು ವಿಶಾಖಪಟ್ಟಣಂನಲ್ಲಿ ಚಿನ್ನದ ದರಗಳು ಏರಿಕೆಯಾಗಿದೆ. ಇಂದಿನ ದರಗಳ ಪ್ರಕಾರ, ಈ ಮೇಲಿನ ನಗರಗಳಲ್ಲಿ 22 ಕ್ಯಾರೆಟ್ ಶುದ್ಧತೆಯ 10 ಗ್ರಾಂ ಚಿನ್ನ 250 ರೂ.ಗಳ ಏರಿಕೆಯೊಂದಿಗೆ 46,650 ರೂ.ಗೆ ಮತ್ತು 24 ಕ್ಯಾರೆಟ್ ಶುದ್ಧತೆಯ 10 ಗ್ರಾಂ ಚಿನ್ನ 270 ರೂ.ಗಳು ಹೆಚ್ಚಾಗಿ 50,890 ರೂ. ಹಾಗೂ ಒಂದು ಕೆಜಿ ಬೆಳ್ಳಿ 58,200 ರೂ.ಗೆ ಮಾರಾಟವಾಗುತ್ತಿದೆ.
22 ಕ್ಯಾರೆಟ್ ಚಿನ್ನದ ದರ ಚೆನ್ನೈಯಲ್ಲಿ 47,220 ರೂ., ದೆಹಲಿಯಲ್ಲಿ 46,800 ರೂ., ಬೆಂಗಳೂರಿನಲ್ಲಿ 46,700 ರೂ., ಪುಣೆಯಲ್ಲಿ 46,680 ರೂ, ಮಂಗಳೂರಿನಲ್ಲಿ 46,700 ರೂ, ಮೈಸೂರಿನಲ್ಲಿ ಗ್ರಾಂಗೆ 25 ರೂಪಾಯಿ ಜಾಸ್ತಿಯಾಗಿ 10 ಗ್ರಾಂ ಚಿನ್ನ 46,700 ರೂ.ಗೆ ಮಾರಾಟವಾಗುತ್ತಿದೆ.
24 ಕ್ಯಾರೆಟ್ ಚಿನ್ನದ ದರ ಚೆನ್ನೈಯಲ್ಲಿ 51,510 ರೂ, ದೆಹಲಿಯಲ್ಲಿ 51,050 ರೂ., ಬೆಂಗಳೂರಿನಲ್ಲಿ- 50,940 ರೂ., ಪುಣೆಯಲ್ಲಿ 50,920 ರೂ, ಮಂಗಳೂರಿನಲ್ಲಿ 50,940 ರೂ, ಮೈಸೂರಿನಲ್ಲಿ ಗ್ರಾಂಗೆ 32 ರೂಪಾಯಿ ಹೆಚ್ಚಾಗಿ 10 ಗ್ರಾಂ ಚಿನ್ನ 50,940 ರೂಗೆ ಹಾಗೂ ಬೆಳ್ಳಿ ಗ್ರಾಂಗೆ 54.50 ರೂ.ಗೆ ಮಾರಾಟವಾಗುತ್ತಿದೆ.
ಕರ್ನಾಟಕದ ನಗರಗಳಲ್ಲಿ ಚಿನ್ನ-ಬೆಳ್ಳಿ ದರ:
ನಗರ | ಚಿನ್ನ22K (1 ಗ್ರಾಂ) | ಚಿನ್ನ24K (1 ಗ್ರಾಂ) | ಬೆಳ್ಳಿ (1 ಗ್ರಾಂ) |
ಮೈಸೂರು | 4,670 ರೂ. | 5,226 ರೂ. | 54.50 ರೂ. |
ದಾವಣಗೆರೆ | 4,660 ರೂ. | 5,035 ರೂ. | 58.28 ರೂ. |
ಹುಬ್ಬಳ್ಳಿ | 4,628 ರೂ. | 5,049 ರೂ. | 58.20 ರೂ. |
ಮಂಗಳೂರು | 4,670 ರೂ. | 5,094 ರೂ. | 52.50 ರೂ. |