ಅಹಮದಾಬಾದ್(ಗುಜರಾತ್): ಅಹಮದಾಬಾದ್ನ ಸರ್ದಾರ್ ವಲ್ಲಾಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೌಸ್ ಕೀಪಿಂಗ್ ಕೆಲಸಗಾರರೊಬ್ಬರಿಗೆ ಶೌಚಾಲಯದಲ್ಲಿ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸಿಕ್ಕಿದ್ದು, ಅದನ್ನು ಕಸ್ಟಮ್ ಅಧಿಕಾರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಹೌಸ್ ಕೀಪಿಂಗ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಹರ್ವಿಂದರ್ ನರುಕಾ ಅವರು ಟರ್ಮಿನಲ್ 2ನಲ್ಲಿ ಸಿಬ್ಬಂದಿಗಳು ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದರು. ಇದೇ ವೇಳೆ, ಶೌಚಾಲಯದ ಫ್ಲಶ್ ಟ್ಯಾಂಕ್ ತೆರೆದಿರುವುದನ್ನು ಗಮನಿಸಿದರು. ಹೋಗಿ ಪರಿಶೀಲಿಸಿದಾಗ ತಲಾ 400 ಗ್ರಾಂ ತೂಕದ ಚಿನ್ನದ ಬಳೆಗಳಿರುವ ಎರಡು ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ.
ನಾನು ಶೌಚಾಲಯಗಳನ್ನು ಪರೀಶಿಲಿಸುವ ಮೊದಲು ನಿಲ್ದಾಣಕ್ಕೆ ಅಬುಧಾಬಿಯಿಂದ ವಿಮಾನ ಬಂದಿದೆ. ಆ ವಿಮಾನದಲ್ಲಿ ಬಂದಿರುವ ಪ್ರಯಾಣಿಕರೊಬ್ಬರು ಶೌಚಾಲಯದಲ್ಲಿ ಚಿನ್ನವನ್ನು ಬಿಟ್ಟು ಹೊಗಿದ್ದಾರೆ ಎಂದು ಶಂಕಿಸಲಾಗಿದೆ.
ಆದರೆ, ಈ ಚಿನ್ನವನ್ನು ತಂದವರು ಯಾರು, ಶೌಚಾಲಯದಲ್ಲಿ ಬಿಟ್ಟು ಹೋದವರು ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ ಎಂದು ಎಂದು ಹರ್ವಿಂದರ್ ನರುಕಾ ಹೇಳಿದರು. ಹರ್ವಿಂದರ್ ಅವರ ಪ್ರಾಮಣಿಕತೆ ಶ್ಲಾಘಿಸಿದ ವಿಮಾನ ನಿಲ್ದಾಣ ನಿರ್ವಹಣಾ ಪ್ರಾಧಿಕಾರವು ಅವರಿಗೆ ಗೌರವ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ: ಸುಲ್ತಾನಪುರಿ ಪೊಲೀಸ್ ಠಾಣೆಯ ಹೊರಗೆ ಜನರ ಪ್ರತಿಭಟನೆ: ವಿಡಿಯೋ