ಮುಂಬೈ: ದೇಶದಲ್ಲಿ ಚಿನ್ನ -ಬೆಳ್ಳಿ ಬೆಲೆಯ ಹಾವು-ಏಣಿ ಆಟ ಮುಂದುವರೆದಿದ್ದು, ಇಂದು ಕೂಡ ಚಿನ್ನಿವಾರ ಪೇಟೆಯಲ್ಲಿ ಬಂಗಾರದ ಬೆಲೆಯಲ್ಲಿ ಬರೋಬ್ಬರಿ 717ರೂ ಕುಸಿತಗೊಂಡಿದೆ. ಹೀಗಾಗಿ ಆಭರಣ ಪ್ರೀಯರು ಚಿನ್ನಾಭರಣ ಖರೀದಿಗೆ ಮುಂದಾಗುತ್ತಿದ್ದಾರೆ.
ಬೆಳ್ಳಿ ಬೆಲೆಯಲ್ಲೂ 1,274 ರೂ. ಕಡಿಮೆಯಾಗಿದ್ದು, ಪ್ರತಿ ಕಿಲೋ ಗ್ರಾಂಗೆ 68,239 ರೂ ಆಗಿದೆ. 24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ 717ರೂ ಕಡಿತವಾಗಿದ್ದು, 10 ಗ್ರಾಂಗೆ ಇದೀಗ 47,730 ರೂ ಇದೆ.
ಓದಿ: ಮೂರು ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100 ರೂ. ವಿವಿಧ ರಾಜ್ಯಗಳಲ್ಲಿ ದರ ಇಂತಿದೆ!
22 ಕ್ಯಾರೆಟ್ ಬಂಗಾರದ ಬೆಲೆ
1 ಗ್ರಾಂ ಬಂಗಾರಕ್ಕೆ 4,375 ರೂ ಇದ್ದು, 10 ಗ್ರಾಂಗೆ 43,750 ರೂ ಇದೆ. ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಸಂತೋಷ ನೀಡಿದೆ.