ETV Bharat / bharat

ಚಿನ್ನ, ಬೆಳ್ಳಿ ಲೇಪಿತ ಹನುಮಂತನ 6.5 ಅಡಿ ಎತ್ತರದ ವಿಗ್ರಹವನ್ನು ಮನೆಯಲ್ಲೇ ಪ್ರತಿಷ್ಠಾಪಿಸಿದ ಉದ್ಯಮಿ! - Businessman Sheetal Bhai

ರಾಮನ ಬಂಟ ಹನುಮಂತನ ಬೃಹತ್‌ ವಿಗ್ರಹಗಳನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುತ್ತಾರೆ. ಸೂರತ್​ನ ಉದ್ಯಮಿಯೊಬ್ಬರು ತಮ್ಮ ಮನೆಯಲ್ಲೇ ಬೃಹತ್ ಚಿನ್ನ, ಬೆಳ್ಳಿ ಲೇಪಿತ ವಿಗ್ರಹವನ್ನು ಪ್ರತಿಷ್ಠಾಪಿಸಿ ನಿತ್ಯಪೂಜೆ ಸಲ್ಲಿಸುತ್ತಿದ್ದಾರೆ.

ಬೃಹತ್ ಹನುಮಾನ್ ಮೂರ್ತಿ
ಬೃಹತ್ ಹನುಮಾನ್ ಮೂರ್ತಿ
author img

By

Published : Apr 6, 2023, 3:27 PM IST

Updated : Apr 6, 2023, 4:30 PM IST

ಮನೆಯಲ್ಲೇ ಹನುಮಂತನ ಬೃಹತ್ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ

ಗುಜರಾತ್​ : ಇಲ್ಲಿನ ಉದ್ಯಮಿ ಶೀತಲ್ ಭಾಯಿ ಎಂಬವರು ತಮ್ಮ ಮನೆಯಲ್ಲೇ ಸುಮಾರು 6.5 ಅಡಿ ಎತ್ತರದ ಹನುಮಂತನ ಪ್ರತಿಮೆ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಪ್ರತಿಮೆಯು ಸುಮಾರು 350 ಕೆ.ಜಿಗಿಂತಲೂ ಹೆಚ್ಚು ತೂಕ ಹೊಂದಿದೆ. 110 ಕೆ.ಜಿ ಬೆಳ್ಳಿ ಮತ್ತು ಚಿನ್ನದ ಲೇಪನದಿಂದ ತಯಾರಿಸಲಾಗಿದೆ. ಉದ್ಯಮಿಯ ಕುಟುಂಬಸ್ಥರು ಪ್ರತಿನಿತ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದಂತೆ ಮನೆಯಲ್ಲಿ ಬೃಹತ್ ಹನುಮಂತನನ್ನು ಆರಾಧಿಸುತ್ತಿದ್ದಾರೆ.

ಹನುಮಂತನನ್ನು ಶಿವನ ರುದ್ರ ರೂಪ ಎಂದು ಹೇಳಲಾಗುತ್ತದೆ. ಭವ್ಯ ಪ್ರತಿಮೆ ಸ್ಥಾಪನೆಗೂ ಮುನ್ನ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಈ ಉದ್ಯಮಿ ಸಾಕಷ್ಟು ಚರ್ಚಿಸಿದ್ದಾರೆ. ದೇಶ-ವಿದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹಗಳನ್ನು ಅಂತರ್ಜಾಲದ ಮೂಲಕ ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ರುದ್ರರೂಪದ ಚಿತ್ರ ಇನ್ಸ್ಟಾಗ್ರಾಂನಲ್ಲಿ ಅವರಿಗೆ ಕಾಣಿಸಿಕೊಂಡಿದೆ. ಆರು ತಿಂಗಳ ಸ್ವಯಂ ಹುಡುಕಾಟದ ನಂತರ ಬೆಳ್ಳಿಯಲ್ಲಿ ವಿಗ್ರಹ ತಯಾರಿಸಲು ನಿರ್ಧರಿಸಿದ್ದರು. ರಾಜಸ್ಥಾನದ ಕಲಾವಿದರು 6 ತಿಂಗಳ ಕಾಲ ಸಮಯ ತೆಗೆದುಕೊಂಡು ಬೆಳ್ಳಿ ಹಾಗೂ 24 ಕ್ಯಾರೆಟ್ ಚಿನ್ನ ಲೇಪನದಿಂದ ಮೂರ್ತಿ ಸಿದ್ಧಪಡಿಸಿದ್ದಾರೆ.

ತಮ್ಮ ಮನೆಯಲ್ಲಿ ಇತರರಿಗೂ ಪೂಜೆ ಸಲ್ಲಿಸಲು ಅವಕಾಶ: ಶೀತಲ್ ಬಾಯಿ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಮೆಗೆ ನಿತ್ಯವೂ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಹನುಮಂತನ ಭಕ್ತರು ಇವರ ಮನೆಗೆ ಬಂದು ದರ್ಶನ ಪಡೆಯಬಹುದು. ಪೂಜೆಯ ಅವಕಾಶವೂ ಇದೆ ಎಂದು ಶೀತಲ್ ಭಾಯಿ ಹೇಳಿದರು.

ಇದನ್ನೂ ಓದಿ : ಹನುಮ ಜಯಂತಿ ಆಚರಣೆ: ದೆಹಲಿಯ ಜಹಂಗೀರ್​ಪುರಿಯಲ್ಲಿ ಬಿಗಿ ಬಂದೋಬಸ್ತ್​

ಮಹಾರಾಷ್ಟ್ರದ ಪಂಡಿತರಿಂದ ಪ್ರಾಣ ಪ್ರತಿಷ್ಠೆ: "ಪ್ರತಿಮೆಯನ್ನು ಆರು ತಿಂಗಳಲ್ಲಿ ಉದಯಪುರದ ಕುಶಲಕರ್ಮಿಗಳು ಪೂರ್ಣಗೊಳಿಸಿದರು. ಆ ಬಳಿಕ ಸುಮಾರು 11 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ್ದು, ಪ್ರಾಣಪ್ರತಿಷ್ಠೆ ನೆರವೇರಿತು. ಸಂಸ್ಕೃತದಲ್ಲಿ ಪಿಹೆಚ್‌ಡಿ ಪಡೆದ ಮಹಾರಾಷ್ಟ್ರದ ಪಂಡಿತರು ವಿಗ್ರಹಕ್ಕೆ ಜೀವ ತುಂಬಿದರು" ಎಂದು ಶೀತಲ್ ಭಾಯಿ ಮಾಹಿತಿ ನೀಡಿದರು.

ದೆಹಲಿಯ ಜಹಾಂಗೀರ್​ಪುರಿಯಲ್ಲಿ ಬಿಗಿ ಭದ್ರತೆ: ಇಂದು ದೇಶದೆಲ್ಲೆಡೆ ಹನುಮ ಜಯಂತಿ ಆಚರಿಸಲಾಗುತ್ತಿದೆ. ಶಾಂತಿ ಸುವ್ಯವಸ್ಥೆಯಿಂದ ದಿನಾಚರಿಸಲು ದೆಹಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಕಂಡುಬಂತು. ರಾಮನವಮಿಯ ದಿನ ರಾಜಧಾನಿಯ ಜಹಂಗೀರ್​ಪುರಿ ಪ್ರದೇಶದಲ್ಲಿ ಕೋಮು ಸಂಘರ್ಷ ಉಂಟಾಗಿತ್ತು. ಈ ಸಂಬಂಧ ಬುಧವಾರ ದೆಹಲಿ ಪೊಲೀಸರು ಇದೇ ಪ್ರದೇಶದಲ್ಲಿ ಫ್ಲಾಗ್​ ಮಾರ್ಚ್​ (ಮೆರವಣಿಗೆ) ನಡೆಸಿದ್ದಾರೆ.

ಇದನ್ನೂ ಓದಿ: ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ.. ಭಕ್ತರ ಇಷ್ಟಾರ್ಥ ಈಡೇರಿಸುವ ಆಂಜನೇಯ

Last Updated : Apr 6, 2023, 4:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.