ETV Bharat / bharat

'ಗೋಧ್ರಾದಂತಹ ಘಟನೆ ಮತ್ತೆ ಉದ್ಭವಿಸಬಹುದು': ಉದ್ಧವ್ ಠಾಕ್ರೆ ಎಚ್ಚರಿಕೆ

author img

By PTI

Published : Sep 11, 2023, 9:47 AM IST

ಶ್ರೀರಾಮ ಮಂದಿರದ ಉದ್ಘಾಟನೆಗೆ ಸರ್ಕಾರವು ಹೆಚ್ಚಿನ ಸಂಖ್ಯೆಯ ಜನರನ್ನು ಬಸ್‌ ಮತ್ತು ಟ್ರಕ್‌ಗಳಲ್ಲಿ ಕರೆದೊಯ್ಯಲು ಆಹ್ವಾನಿಸುವ ಸಾಧ್ಯತೆಯಿದೆ. ಜನರು ದೇಗುಲದಿಂದ ಹಿಂದಿರುಗುವ ಸಮಯದಲ್ಲಿ ಗೋಧ್ರಾ ರೀತಿಯ ಘಟನೆ ಸಂಭವಿಸಬಹುದು ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.

Uddhav Thackeray
ಉದ್ಧವ್ ಠಾಕ್ರೆ

ಮುಂಬೈ (ಮಹಾರಾಷ್ಟ್ರ): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಲಕ್ಷಾಂತರ ಜನರು ಹಿಂತಿರುಗುವ ಸಮಯದಲ್ಲಿ ಗೋಧ್ರಾದಂತಹ ಘಟನೆ ಉದ್ಭವಿಸಬಹುದು ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಹೇಳಿದರು.

ಜಲಗಾಂವ್‌ನಲ್ಲಿ ಮಾತನಾಡಿದ ಅವರು, "ಫೆಬ್ರವರಿ 27, 2002ರಂದು ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಕರಸೇವಕರಿದ್ದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂಬುದು ಗಮನಾರ್ಹ. ಲೋಕಸಭೆ ಚುನಾವಣೆಗೆ ಕೆಲವು ತಿಂಗಳ ಮೊದಲು, 2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಈ ಬಾರಿ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮ ವೀಕ್ಷಿಸಲು ಕೇಂದ್ರ ಸರ್ಕಾರ ಬಸ್‌ಗಳು ಹಾಗೂ ಟ್ರಕ್‌ಗಳಲ್ಲಿ ಲಕ್ಷಾಂತರ ಮಂದಿಯನ್ನು ಆಹ್ವಾನಿಸುವ ಸಾಧ್ಯತೆ ಇದೆ. ಅವರೆಲ್ಲರೂ ತಮ್ಮ ತಮ್ಮ ಊರಿಗೆ ವಾಪಸ್​ ಆಗುವ ಸಂದರ್ಭದಲ್ಲಿ ಗೋಧ್ರಾ ಮಾದರಿ ಘಟನೆ ಸಂಭವಿಸುವ ಸಾಧ್ಯತೆ ಇದೆ" ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಅಯೋಧ್ಯೆಯ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ : ಪೇಜಾವರ ಶ್ರೀ

ಇದೇ ವೇಳೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಈಗ ನನ್ನ ತಂದೆ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜನರಿಗೆ ಮಾದರಿಯಾಗಬಲ್ಲ ಯಾವುದೇ ನಾಯಕರು ಪಕ್ಷದಲ್ಲಾಗಲೀ ಸಂಘಟನೆಯಲ್ಲಾಗಲೀ ಇಲ್ಲ. ಇದರ ಬದಲಿಗೆ ಅವರು ಸರ್ದಾರ್ ಪಟೇಲ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರಂಥ ದಂತಕಥೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಭೀಕರ ಕೊಮು ಗಲಭೆ: ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ಕೋಮು ಗಲಭೆಗಳಲ್ಲಿ 2002ರ ಗುಜರಾತ್ ಗಲಭೆ ಪ್ರಮುಖವಾದುದು. ಘಟನೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಗಲಭೆ ಘಟನೆಗಳ ತನಿಖೆ ನಡೆಸಿದ್ದ ಎಸ್‌ಐಟಿ ಅಂದಿನ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಗೋಧ್ರಾ ರೈಲು ದುರಂತ: 2002ರ ಫೆ.27ರಂದು ಅಯೋಧ್ಯೆಯಿಂದ ಕರಸೇವಕರನ್ನು ಹೊತ್ತು ಬಂದ ಸಬರಮತಿ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಗೋಧ್ರಾ ರೈಲ್ವೆ ನಿಲ್ದಾಣದ ಬಳಿಕ ನಿಂತಿತ್ತು. ರೈಲಿನ 4 ಬೋಗಿಗಳಿಗೆ ಬೆಂಕಿ ತಗುಲಿ 59 ಮಂದಿ ಸಜೀವ ದಹನವಾಗಿದ್ದರು. ಯಾವುದರಿಂದ ಬೆಂಕಿ ತಗುಲಿತು ಎಂಬುದಕ್ಕೆ ಈಗಲೂ ಉತ್ತರ ಸಿಕ್ಕಿಲ್ಲ. ಇನ್ನೂ ದುರಂತವೆಂದರೆ ಮೃತರಲ್ಲಿ 25 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದರು. ಘಟನೆ ಬಳಿಕ ಪ್ರಚೋದನಕಾರಿ ಹೇಳಿಕೆಗಳು ಗಲಭೆಕೋರರಿಗೆ ಇನ್ನಷ್ಟು ಪ್ರಚೋದನೆ ನೀಡಿದವು. ಒಂದು ವರ್ಷದವರೆಗೆ ನಡೆದ ಗಲಭೆಗಳಲ್ಲಿ ಸುಮಾರು 1044 ಜನರು ಸಾವನ್ನಪ್ಪಿರುವುದು ಅಧಿಕೃತವಾಗಿ ದಾಖಲಾಗಿರುವ ಮಾಹಿತಿ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಪಾಕಿಸ್ತಾನದ ಹಿಂದೂಗಳಿಗೂ ಆಹ್ವಾನ; ನವೆಂಬರ್‌ನಿಂದ ವಿದೇಶಿ ದೇಣಿಗೆಗೆ ಅವಕಾಶ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.