ETV Bharat / bharat

ಶಿವರಾತ್ರಿ ಮಹಾಕೂಟದ ಜನಸ್ತೋಮಕ್ಕೆ 'ದೇವರು ಜವಾಬ್ದಾರ': ಬಿಜೆಪಿ ಶಾಸಕನ ಹೇಳಿಕೆ

ಗುಜರಾತ್​ನಲ್ಲಿ ಕೊರೊನಾ ಕೇಸುಗಳು ಹೆಚ್ಚಾಗುತ್ತಿದ್ದರೂ ಸಹ ಶಿವರಾತ್ರಿಯಂದು ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಮಂಜಲ್ಪುರ್ ಯೋಗೇಶ್ ಪಟೇಲ್ ಈ ಬೃಹತ್​ ಕೂಟಕ್ಕೆ "ದೇವರು ಜವಾಬ್ದಾರ" ಎಂದಿದ್ದಾರೆ.

BJP MLA
ಬಿಜೆಪಿ ಶಾಸಕ ಮಂಜಲ್ಪುರ್ ಯೋಗೇಶ್ ಪಟೇಲ್
author img

By

Published : Mar 17, 2021, 9:26 AM IST

ವಡೋದರಾ (ಗುಜರಾತ್): ಗುಜರಾತ್​ನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿದ್ದರೂ ಸಹ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಈ ಸಂಬಂಧ ಮಂಜಲ್ಪುರ್ ಬಿಜೆಪಿ ಶಾಸಕ ಯೋಗೇಶ್ ಪಟೇಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನು ಯಾರನ್ನೂ ಆಹ್ವಾನಿಸಿಲ್ಲ. ಈ ಬೃಹತ್​ ಕೂಟಕ್ಕೆ "ದೇವರು ಜವಾಬ್ದಾರ" ಎಂದಿದ್ದಾರೆ.

ಈ ಕಾರ್ಯಕ್ರಮವನ್ನು ಸತ್ಯ ಶಿವಂ ಸುಂದರಂ ಸಮಿತಿ ಆಯೋಜಿಸಿದೆ. ಈ ಮಧ್ಯೆ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಗುಜರಾತ್ ಸರ್ಕಾರ ಮಂಗಳವಾರ ನಾಲ್ಕು ಮಹಾನಗರಗಳಾದ ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್​ಕೋಟ್​ನಲ್ಲಿ ಮಾರ್ಚ್ 17 ರಿಂದ ಮಾರ್ಚ್ 31 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಗುಜರಾತ್‌ನಲ್ಲಿ 4,717 ಸಕ್ರಿಯ ಪ್ರಕರಣಗಳಿವೆ. ಇನ್ನು 2,69,955 ಜನರು ಚೇತರಿಸಿಕೊಂಡಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ 4,425ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.