ನವದೆಹಲಿ: ಪ್ರಾಣಿಗಳಿಗೂ ಭಾವನೆಗಳಿರುತ್ತವೆ. ತನ್ನನ್ನು ಸಾಕಿದ ಮಾಲೀಕನ ಜೊತೆ ಅವಿನಾಭಾವ ಸಂಬಂಧ ಹೊಂದಿರುತ್ತವೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷೀಕರಿಸುತ್ತದೆ.
ಮಾಲೀಕರೊಬ್ಬರು ಮೇಕೆಯನ್ನು ಮಾರಾಟ ಮಾಡಿದ್ದು, ಈ ವೇಳೆ ಅದು ಮನುಷ್ಯನಂತೆ ಹೆಗಲ ಮೇಲೆ ಮುಖವಿಟ್ಟು ರೋಧಿಸುತ್ತಿರುವುದು ಕಂಡುಬಂದಿದೆ. ಇದು ಸಾಕುಪ್ರಾಣಿಗಳು ತನ್ನ ಯಜಮಾನನ ಮೇಲೆ ಹೊಂದಿರುವ ಪ್ರೀತಿ, ಭಾವನೆಯನ್ನು ವ್ಯಕ್ತಪಡಿಸುತ್ತದೆ.
-
Goat brought to be sold hugs owner, cries like human 💔😭 pic.twitter.com/k5LwYRKDqW
— Ramasubramanian V. Harikumar 💎 (@Ram_Vegan) July 15, 2022 " class="align-text-top noRightClick twitterSection" data="
">Goat brought to be sold hugs owner, cries like human 💔😭 pic.twitter.com/k5LwYRKDqW
— Ramasubramanian V. Harikumar 💎 (@Ram_Vegan) July 15, 2022Goat brought to be sold hugs owner, cries like human 💔😭 pic.twitter.com/k5LwYRKDqW
— Ramasubramanian V. Harikumar 💎 (@Ram_Vegan) July 15, 2022
ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ನಿಖರತೆ ಇಲ್ಲವಾದರೂ, ಈದ್ ಹಬ್ಬದ ವೇಳೆ ಮೇಕೆಯನ್ನು ಮಾರಾಟ ಮಾಡಲಾಗಿದೆ. ಈ ಸಂದರ್ಭದಲ್ಲಿ ಅದು ಮಾಲೀಕನಿಂದ ದೂರವಾಗುತ್ತಿರುವ ಆತಂಕದಲ್ಲಿ ಅಳುತ್ತಿತ್ತು. ಮಾಲೀಕನೂ ಕಣ್ಣೀರು ಸುರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
"ಮಾತು ಬಾರದ ಪ್ರಾಣಿಗಳು ಸಹ ಭಾವನೆಗಳನ್ನು ಹೊಂದಿರುತ್ತವೆ. ಅವು ತಮ್ಮ ಮಾಲೀಕರನ್ನು ತುಂಬಾ ಪ್ರೀತಿಸುತ್ತವೆ. ಅವರಿಂದ ಬೇರ್ಪಟ್ಟಾಗ ಅವುಗಳ ಆತ್ಮಕ್ಕೇ ನೋವುಂಟಾಗುತ್ತದೆ" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ಮೇಲೆ ನನಗೆ ಕಣ್ಣೀರು ಬಂತು ಎಂದು ಇನ್ನೊಬ್ಬರು ಹೇಳಿದ್ದರೆ, ನೀವು ಇಷ್ಟಾದ ಮೇಲೂ ಮೇಕೆಯನ್ನು ಮಾರಾಟ ಮಾಡಿಲ್ಲ ಎಂದು ಭಾವಿಸುತ್ತೇನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಗಳ ನಡುವೆ ಪೈಪೋಟಿ: ಯುಕೆ ಟಿವಿ ಚರ್ಚೆ ರದ್ದು