ETV Bharat / bharat

ಗೋವಾ ಸಿಎಂ ಸುಳ್ಳುಗಾರ, ಮಹದಾಯಿ ನ್ಯಾಯಮಂಡಳಿ ರಚಿಸಿದ್ದು ಕಾಂಗ್ರೆಸ್ ಸರ್ಕಾರ: ಖಲಪ್ - ಪ್ರಮೋದ್ ಸಾವಂತ್ ಸುಳ್ಳುಗಾರ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಓರ್ವ ಸುಳ್ಳುಗಾರ ಎಂದು ಗೋವಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಶ್ರೀನಿವಾಸ್ ಖಲಪ್ ಹೇಳಿದ್ದಾರೆ. ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ರಚಿಸಲಾಗಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.

Goa CM habitual liar, Mhadei Tribunal was formed by Manmohan Singh: Cong

author img

By

Published : May 15, 2023, 7:49 PM IST

ಪಣಜಿ (ಗೋವಾ) : ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು 2010 ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ರಚಿಸಲಾಗಿತ್ತು ಎಂದು ಹೇಳಿರುವ ಗೋವಾ ಕಾಂಗ್ರೆಸ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸುಳ್ಳುಗಾರ ಎಂದು ಆರೋಪಿಸಿದೆ. "ಸುಳ್ಳುಗಾರ ಪ್ರಮೋದ್ ಸಾವಂತ್ ಅವರು ಗೋವಾದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ರಚಿಸಲಾಯಿತು ಎಂದು ಈಗ ಪ್ರತಿಪಾದಿಸಿದ್ದಾರೆ. ವಾಸ್ತವ ಎಂದರೆ 2010 ರ ನವೆಂಬರ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದನ್ನು ರಚಿಸಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಶ್ರೀನಿವಾಸ್ ಖಲಪ್ ಹೇಳಿದರು.

ಮಹದಾಯಿ ಜಲವಿವಾದ ನ್ಯಾಯಮಂಡಳಿ ರಚನೆ ಸೇರಿದಂತೆ ಎಲ್ಲಾ ಪ್ರಮುಖ ನೀತಿ ನಿರ್ಧಾರಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಭಾನುವಾರ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. 2012ರಲ್ಲಿ ಗೋವಾದಲ್ಲಿ ಮತ್ತು 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರವೇ ನಮ್ಮ ಜೀವಸೆಲೆಯಾದ ಮಹದಾಯಿ ನದಿಯನ್ನು ನಾಶ ಮಾಡಲಾಗಿದೆ. ಕಳಸಾ ಬಂಡೂರಿಯ ವಿವರವಾದ ಯೋಜನಾ ವರದಿಗೆ ನೀಡಿದ ಅನುಮೋದನೆಯ ಬಗ್ಗೆ ಅವರು ಏಕೆ ಕ್ರೆಡಿಟ್ ಪಡೆಯುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

"ಕಾಂಗ್ರೆಸ್ ಪಕ್ಷವು ಮಹದಾಯಿಗಾಗಿ ಯಾವಾಗಲೂ ಹೋರಾಡುತ್ತಿದೆ. ನಾವು ಕೇಂದ್ರ, ಕರ್ನಾಟಕ ಮತ್ತು ಗೋವಾದ ಬಿಜೆಪಿ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ಗೋವಾದ ಎಲ್ಲ ತಾಲೂಕುಗಳಲ್ಲಿ ಹಾಗೂ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ರಾಜಭವನ, ಐಎಫ್‌ಎಫ್‌ಐ ಉದ್ಘಾಟನಾ ಸಮಾರಂಭ ಮತ್ತು ವಿವಿಧೆಡೆ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಜೀವನಾಡಿ ತಾಯಿ ಮಹದಾಯಿಯನ್ನು ಉಳಿಸಲು ಪ್ರಯತ್ನ ಮಾಡಿದ್ದೇವೆ ಎಂದು ಖಲಪ್ ಹೇಳಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗೋವಾದಿಂದ ತೆರಳಿದ ಸರ್ವಪಕ್ಷ ನಿಯೋಗವನ್ನು ಭೇಟಿ ಮಾಡಿದ್ದರು ಮತ್ತು ನಮ್ಮ ಮನವಿಯನ್ನು ಆಲಿಸಿದ್ದರು. ನಂತರ ಅವರು ಮಹದಾಯಿ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸಿದರು. ದುರದೃಷ್ಟವಶಾತ್, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ ಒಂಬತ್ತು ವರ್ಷಗಳಿಂದ ಗೋವಾದ ನಿಯೋಗವನ್ನು ಭೇಟಿ ಮಾಡಲು ಸಮಯ ಸಿಕ್ಕಿಲ್ಲ ಎಂದು ಖಲಪ್ ಹೇಳಿದರು. ಮಹದಾಯಿ ನದಿ ನೀರಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಕಳಸಾ ಬಂಡೂರಿ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಗೋವಾ ಮತ್ತು ಕರ್ನಾಟಕ ಪ್ರಸ್ತುತ ಕೇಂದ್ರೀಯ ನ್ಯಾಯಾಧಿಕರಣದಲ್ಲಿ ವಾದ ಮಂಡಿಸುತ್ತಿವೆ.

ಮಹದಾಯಿ ನದಿಯ ವಿವಾದ 80 ರ ದಶಕದಲ್ಲಿ ಪ್ರಾರಂಭವಾಯಿತು ಮತ್ತು ನಂತರದ ದಶಕಗಳಲ್ಲಿ ಪ್ರಬಲವಾಯಿತು. ಮಹದಾಯಿ ನದಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಹರಿಸಲು ಹಲವಾರು ಅಣೆಕಟ್ಟುಗಳು, ಕಾಲುವೆಗಳು ಮತ್ತು ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲು ಕರ್ನಾಟಕ ಉದ್ದೇಶಿಸಿದೆ. ಕೃಷ್ಣಾ ನದಿಯ ಉಪನದಿಯಾದ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಮಹದಾಯಿ ನದಿ ನೀರನ್ನು ಹರಿಸುವುದರಿಂದ ನೀರಿನ ಕೊರತೆಯಿರುವ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಕರ್ನಾಟಕ ಹೇಳಿಕೊಂಡಿದೆ.

ಇದನ್ನೂ ಓದಿ : ಅದಾನಿ ಸಮೂಹಕ್ಕೆ ನೆರವು ನೀಡಲು ಮುಂದಾದ 3 ಜಪಾನ್​ ಬ್ಯಾಂಕ್​ಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.