ETV Bharat / bharat

3 ದಿನ ಗೋ ಫಸ್ಟ್ ವಿಮಾನ ಸೇವೆ ರದ್ದು; ಟಿಕೆಟ್ ಖರೀದಿಸಿದ ಪ್ರಯಾಣಿಕರಿಗೆ ಪಜೀತಿ - ಗೋ ಫಸ್ಟ್

ಪ್ರಾಟ್ ಆ್ಯಂಡ್ ವಿಟ್ನಿ ಕಂಪನಿಯು ಎಂಜಿನ್​ಗಳನ್ನು ಪೂರೈಕೆ ಮಾಡದೇ ಇದ್ದುದರಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಗೋ ಫಸ್ಟ್ ಹೇಳಿದೆ. ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಮಧ್ಯೆ ಕಂಪನಿ ಈ ತೀರ್ಮಾನ ತೆಗೆದುಕೊಂಡಿದ್ದು, ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ.

Go first flight, passenger
ಗೋ ಫಸ್ಟ್ ವಿಮಾನ ,ಪ್ರಯಾಣಿಕ
author img

By

Published : May 3, 2023, 10:03 AM IST

ಅಮೃತಸರ (ಪಂಜಾಬ್): ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ವಾಡಿಯಾ ಸಮೂಹದ ಗೋ ಫಸ್ಟ್ ಏರ್‌ಲೈನ್ಸ್ ತನ್ನ ವಿಮಾನಗಳ ಸೇವೆಯನ್ನು ದಿಢೀರ್ ನಿನ್ನೆ(ಮಂಗಳವಾರ) ಸ್ಥಗಿತಗೊಳಿಸಿದ್ದು ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಏರ್‌ಲೈನ್ಸ್ ತನ್ನ ವಿಮಾನಗಳ ಹಾರಾಟವನ್ನು ಮೇ 3 ರಿಂದ ಮೇ 5 ರವರೆಗೆ ರದ್ದುಗೊಳಿಸುತ್ತಿದೆ ಎಂದು ಘೋಷಿಸಿ, ಪ್ರಯಾಣಿಕರಿಗೆ ಸಂಪೂರ್ಣ ಟಿಕೆಟ್ ಮರುಪಾವತಿ ಮಾಡಲಾಗುವುದು ಎಂದು ಹೇಳಿದೆ. ಇನ್ನೊಂದೆಡೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಕಂಪನಿಗೆ ನೋಟಿಸ್ ಜಾರಿಗೊಳಿಸಿದೆ.

ಏತನ್ಮಧ್ಯೆ, ಗೋ ಫಸ್ಟ್ ಏರ್‌ಲೈನ್ಸ್‌ನ ಕೌಂಟರ್‌ ಬಂದಾಗಿದ್ದು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣ ನಿರ್ಜನವಾಗಿ ಕಂಡುಬಂತು. ಪ್ರಯಾಣಿಕ ಗುರ್ವಿಂದರ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿ, "ನಾನು ಮುಂಬೈಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದೆ. ಆದರೆ ವಿಮಾನ ನಿಲ್ದಾಣ ತಲುಪಿದಾಗ ಕೌಂಟರ್‌ನಲ್ಲಿ ಯಾರೂ ಇರಲಿಲ್ಲ. ನಮ್ಮನ್ನು ಇತರೆ ವಿಮಾನಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಬೇಕೆಂದು ಕೇಳಿದೆ. ಆದರೆ ಗೋ ಫಸ್ಟ್ ಏರ್‌ಲೈನ್ ನಮಗೆ ಮರುಪಾವತಿ ನೀಡುವ ಬಗ್ಗೆ ಮಾತ್ರ ಮಾತನಾಡುತ್ತಿದೆ" ಎಂದು ಹೇಳಿದರು.

"ಗೋ ಫಸ್ಟ್ ಏರ್‌ಲೈನ್ಸ್‌ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ವಿಮಾನ ಸೇವೆ ನೀಡದೆ ಇದ್ದಕ್ಕಿದ್ದಂತೆ ರದ್ದುಗೊಳಿಸಿದೆ. ಇನ್ನೊಂದು ವಿಮಾನ ಸೇವೆ ಕಲ್ಪಿಸಬೇಕಿತ್ತು. ನಮಗೆ ಏಳು ದಿನಗಳ ನಂತರ ಹಣ ಮರುಪಾವತಿಸುವುದಾಗಿ ಹೇಳಿದ್ದಾರೆ" ಎನ್ನುತ್ತಾರೆ ಮತ್ತೊಬ್ಬ ಪ್ರಯಾಣಿಕ.

  • #WATCH | Go First counters at Delhi Airport were vacant after Go First Airlines grounded its flights for 3rd, 4th and 5th May amid bankruptcy. pic.twitter.com/PUHfPo4G5c

    — ANI (@ANI) May 3, 2023 " class="align-text-top noRightClick twitterSection" data=" ">

ಗೋ ಫಸ್ಟ್ ಏರ್‌ಲೈನ್ಸ್‌ ತನ್ನ ಟ್ವಿಟರ್ ಖಾತೆಯಲ್ಲಿ, "ಹಣಕಾಸಿನ ಕೊರತೆ ನಿಭಾಯಿಸಲು ಸಾಧ್ಯವಾಗದ ಕಾರಣ ಮೇ 3, 4 ಮತ್ತು 5ರಂದು ವಿಮಾನ ಸೇವೆ ರದ್ದುಗೊಳಿಸಲಾಗಿದೆ. ನಮ್ಮ ಗ್ರಾಹಕರಲ್ಲಿ ಕ್ಷಮೆ ಯಾಚಿಸುತ್ತೇವೆ. ನಾವು ಮರಳಿ ಬರುತ್ತೇವೆ. ಶೀಘ್ರದಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಮಾಡಲಾಗುವುದು" ಎಂದು ಬರೆದುಕೊಂಡಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, "ಭಾರತ ಸರ್ಕಾರವು ಗೋ ಫರ್ಸ್ಟ್ ಏರ್‌ಲೈನ್ಸ್‌ಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡುತ್ತಿದೆ. ಪ್ರಯಾಣಿಕರಿಗೆ ಅನನುಕೂಲತೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಏರ್‌ಲೈನ್‌ನ ಜವಾಬ್ದಾರಿ" ಎಂದು ಹೇಳಿದ್ದಾರೆ. "ಗೋ ಫಸ್ಟ್ ತಮ್ಮ ಎಂಜಿನ್‌ಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಏರ್‌ಲೈನ್‌ಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದೆ" ಎಂದು ಅವರು ಹೇಳಿದ್ದಾರೆ.

"ಯುಎಸ್ ಮೂಲದ ಜೆಟ್ ಎಂಜಿನ್ ತಯಾರಕ ಕಂಪನಿಯಾದ ಪ್ರಾಟ್ ಮತ್ತು ವಿಟ್ನಿ ಇಂಜಿನ್‌ಗಳನ್ನು ಪೂರೈಸದ ಕಾರಣ ಗೋ ಫಸ್ಟ್ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಇದರಿಂದಾಗಿ 50ಕ್ಕೂ ಹೆಚ್ಚು ವಿಮಾನಗಳನ್ನು ಗ್ರೌಂಡಿಂಗ್ ಮಾಡಬೇಕಾಗಿದೆ" ಎಂದು ಗೋ ಫಸ್ಟ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.

ಇದನ್ನೂಓದಿ: ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಸಿಂಹಪಾಲು: ಐಎಂಎಫ್ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.