ETV Bharat / bharat

2028ರ ಹೊತ್ತಿಗೆ ಅತ್ಯಧಿಕ 'ಬಿಸಿ ವರ್ಷ' ದಾಖಲು ಸಾಧ್ಯತೆ: ವಿಶ್ವ ಹವಾಮಾನ ಸಂಸ್ಥೆ ವರದಿ ಎಚ್ಚರಿಕೆ!

author img

By

Published : May 20, 2023, 9:02 PM IST

2028 ರ ಹೊತ್ತಿಗೆ ಜಾಗತಿಕ ತಾಪಮಾನ ಏರಿಕೆಯು ದಾಖಲೆಯ ಮಟ್ಟದಲ್ಲಿ ಬಿಸಿ ವರ್ಷವನ್ನು ಸೃಷ್ಟಿಸಲಿದೆ. ಇದು 1.5 ಸಿ ತಾಪಮಾನ ದಾಖಲಿಸಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.

ಅತ್ಯಧಿಕ 'ಬಿಸಿ ವರ್ಷ' ದಾಖಲು
ಅತ್ಯಧಿಕ 'ಬಿಸಿ ವರ್ಷ' ದಾಖಲು

ನವದೆಹಲಿ: ಜಾಗತಿಕ ತಾಪಮಾನ ಏರುತ್ತಿರುವ ಮಧ್ಯೆಯೇ ಮತ್ತೊಂದು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ಮುಂದಿನ ಐದು ವರ್ಷಗಳು ಬಿಸಿಯಾಗಿರಬಹುದು. ಅದರಲ್ಲೂ ಒಂದು ವರ್ಷ ಅತ್ಯಂತ ಬಿಸಿಯಾಗಿರಲಿದೆ ಎಂದು ಅಂದಾಜಿಸಲಾಗಿದೆ. 2028 ರ ಹೊತ್ತಿಗೆ ಜಾಗತಿಕ ತಾಪಮಾನ ಅತ್ಯಧಿಕವಾಗಲಿದೆ. ಅದರಲ್ಲೂ ಒಂದು ವರ್ಷ ಅತಿ ಹೆಚ್ಚು ಅಂದರೆ, 1.5 ಸೆಲ್ಸಿಯಸ್​ ತಾಪಮಾನ ದಾಖಲಿಸಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಆತಂಕಕಾರಿ ಹೊಸ ವರದಿಯನ್ನು ಬಿಡುಗಡೆ ಮಾಡಿದೆ.

ತಾಪಮಾನ ಏರಿಕೆಯಾದಂತೆ ಹಸಿರುಮನೆಯ ಮೇಲೆ ಪರಿಣಾಮ ಬೀರಿ ಈ ದಶಕದಲ್ಲಿ ಅತ್ಯಧಿಕ ಬಿಸಿ ದಾಖಲಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ. 2023- 28 ಅನ್ನು ಇದುವರೆಗೆ ದಾಖಲಾದ ಅತ್ಯಂತ ಬೆಚ್ಚಗಿನ ಐದು ವರ್ಷಗಳ ಅವಧಿ ಎಂದು ಅಂದಾಜಿಸಲಾಗಿದೆ. 2016 ರಲ್ಲಿ ದಾಖಲಾದ ತಾಪಮಾನ ಈವರೆಗಿನ ದಾಖಲೆ ವರ್ಷಗಳಲ್ಲಿ ಒಂದಾಗಿದೆ. ಮುಂದಿನ ಐದು ವರ್ಷದಲ್ಲಿ ಇದಕ್ಕಿಂತಲೂ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆಗಳಿವೆ ಎಂದಿದೆ ವರದಿ.

ಮುರಿದ ಪ್ಯಾರೀಸ್​ ಒಪ್ಪಂದ: ಜಾಗತಿಕ ತಾಪಮಾನಕ್ಕಾಗಿ ಮಾಡಿಕೊಂಡ ಪ್ಯಾರೀಸ್​ ಒಪ್ಪಂದವನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಮುರಿದಿವೆ. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಸರಾಸರಿ ತಾಪಮಾನವು 1.5 C ಮಿತಿಯನ್ನು ಮೀರಿದರೆ ಪ್ಯಾರಿಸ್ ಒಪ್ಪಂದವು ಸಂಪೂರ್ಣವಾಗಿ ಉಲ್ಲಂಘನೆಯಾಗಲಿದೆ. ನೈಸರ್ಗಿಕ ಅನಿಲದ ಹೊರಸೂಸುವಿಕೆಯನ್ನು ತ್ವರಿತವಾಗಿ ಶೂನ್ಯಕ್ಕೆ ತಳ್ಳದಿದ್ದರೆ ತಾಪಮಾನದ ಮಿತಿ ಮೀರಿ ಅನಾಹುತ ಉಂಟಾಗಲಿದೆ ಎಂದು ವರದಿ ಅಂದಾಜಿಸಿದೆ.

ತಾಪಮಾನವು ದಾಖಲೆಯ ಶಾಖವನ್ನು ಸೃಷ್ಟಿಸುತ್ತದೆ. ವಿಶ್ವ ಹವಾಮಾನ ಸಂಸ್ಥೆಯ ಪ್ರಕಾರ, ಮುಂದಿನ 5 ವರ್ಷಗಳಲ್ಲಿ ಕನಿಷ್ಠ ಒಂದು ವರ್ಷವಾದರೂ ಅತ್ಯಧಿಕ ಬಿಸಿ ದಾಖಲಿಸುವ ಸಾಧ್ಯತೆ ಶೇಕಡಾ 98 ರಷ್ಟಿದೆ. 1.5C ಮಿತಿಗಿಂತ ಕನಿಷ್ಠ ಬಿಸಿಯನ್ನು ಒಂದು ವರ್ಷ ದಾಖಲಿಸುವುದು 66 ಪ್ರತಿಶತದಷ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಸರಾಸರಿ ತಾಪಮಾನವು 1.5C ಮಿತಿಯನ್ನು ಮೀರುವುದು 32 ಪ್ರತಿಶತ ಅವಕಾಶವಿದೆ ಎಂದಿದೆ.

2015 ರಿಂದಲೇ 1.5C ತಾಪಮಾನದ ಮಿತಿ ಏರುತ್ತಾ ಸಾಗಿದೆ. ಅದು ಇದೀಗ ಇನ್ನಷ್ಟು ಹತ್ತಿರದಲ್ಲಿದೆ. 2017 ಮತ್ತು 2021 ರ ನಡುವಿನ ವರ್ಷಗಳಲ್ಲಿ ಇದು 10 ಪ್ರತಿಶತ ಹೆಚ್ಚಾಗಿದೆ. ಮಾನವನ ಹಸಿರುಮನೆ ಪರಿಣಾಮದಿಂದಾಗಿ 19 ನೇ ಶತಮಾನದಲ್ಲಿ ಜಾಗತಿಕ ಸರಾಸರಿ ತಾಪಮಾನ 1C ಗಿಂತ ಹೆಚ್ಚು ದಾಖಲಾಗಿದೆ.

ಹವಾಮಾನವನ್ನು ತಂಪು ಮಾಡುವ ಲಾ ನಿಯಾದ ಪ್ರಭಾವದ ಹೊರತಾಗಿಯೂ 2022 ರಲ್ಲಿ ಸರಾಸರಿ ಜಾಗತಿಕ ತಾಪಮಾನವು 1850-1900ರ ಅವಧಿಯಲ್ಲಿನ ಸರಾಸರಿಗಿಂತ ಹೆಚ್ಚಿದೆ. ಕ್ಷಿಪ್ರ ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಹಿಂದಿನ ದಾಖಲೆಯನ್ನು ಮುರಿಯಲು ಇಷ್ಟು ಸಾಕಾಗಲಿದೆ. ಪ್ರಸ್ತುತ ಜಾಗತಿಕ ತಾಪಮಾನದ ಹೆಚ್ಚಳದಿಂದಾಗಿ ಏಳು ವರ್ಷಗಳಲ್ಲಿ ಇದು ಹಸಿರುಮನೆ ಪರಿಣಾಮವನ್ನು ಹೆಚ್ಚಿಸುವ ಮೂಲಕ ಹೊಸ ದಾಖಲೆ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಕೊರೊನಾ ಬಳಿಕ 'ಹಸಿರು ಮನೆ' ಹಾಳು ಮಾಡೋದ್ರಲ್ಲೂ ಚೀನಾಗೆ ಜಾಗತಿಕವಾಗಿ ಅಗ್ರಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.