ETV Bharat / bharat

ಜಾಗತಿಕ ಪತ್ರಿಕೆಗಳಲ್ಲಿ ಮೋದಿ ತವರು ಗುಜರಾತ್​​​ನಲ್ಲಿ ಬಿಜೆಪಿ​ ಐತಿಹಾಸಿಕ ವಿಜಯದ ವರದಿ

ಸಿಂಗಾಪೂರದ ದಿ ಸ್ಟ್ರೈಟ್​ ಟೈಮ್ಸ್​, ನಿಕ್ಕಿ ಏಷಿಯಾ, ಆಲ್​ ಜಾಜಿಯಾ, ಇಂಡಿಪೆಂಡೆಂಟ್​, ಎಬಿಸಿ ಸೇರಿದಂತೆ ಪ್ರಮುಖ ಜಾಗತಿಕ ಪತ್ರಿಕೆಗಳು ಗುಜರಾತ್​ನಲ್ಲಿನ ಭರ್ಜರಿ ಜಯದ ಕುರಿತು ಸುದ್ದಿ ಪ್ರಕಟಿಸಿವೆ.

ಜಾಗತಿಕ ಪತ್ರಿಕೆಗಳಲ್ಲಿ ಮೋದಿ ತವರು ಗುಜರಾತ್​ ಐತಿಹಾಸಿಕ ವಿಜಯದ ವರದಿ
global-newspapers-report-on-gujarats-historic-victor
author img

By

Published : Dec 9, 2022, 11:43 AM IST

ನವದೆಹಲಿ: ಪ್ರಧಾನಿ ಮೋದಿ ಅವರ ತವರು ಕ್ಷೇತ್ರವಾದ ಗುಜರಾತ್​ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಕಂಡಿದೆ. ಮೋದಿ ಅವರ ಈ ಗೆಲುವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು, ಅನೇಕ ಜಾಗತಿಕ ಸುದ್ದಿ ಸಂಸ್ಥೆಗಳು ಈ ಕುರಿತು ವರದಿ ಮಾಡಿದೆ. ಸತತ ಏಳನೇ ಬಾರಿಗೆ ಭಾರತೀಯ ಜನತಾ ಪಾರ್ಟಿ ಗುಜರಾತ್​ನಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ. 1980ರಲ್ಲಿ ಆರಂಭವಾದ ಪಕ್ಷ ಈ ಮೊತ್ತದ ಗೆಲುವನ್ನು ಹಿಂದೆಂದೂ ಕಂಡಿರಲಿಲ್ಲ. ತನ್ನದೇ ದಾಖಲೆ ಮುರಿದಿರುವ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಸಿಂಗಾಪೂರದ ದಿ ಸ್ಟ್ರೈಟ್​ ಟೈಮ್ಸ್​, ನಿಕ್ಕಿ ಏಷಿಯಾ, ಆಲ್​ ಜಾಜಿಯಾ, ಇಂಡಿಪೆಂಡೆಂಟ್​, ಎಬಿಸಿ ಸೇರಿದಂತೆ ಪ್ರಮುಖ ಜಾಗತಿಕ ಪತ್ರಿಕೆಗಳು ಗುಜರಾತ್​ನಲ್ಲಿನ ಭರ್ಜರಿ ಜಯದ ಕುರಿತು ಸುದ್ದಿ ಪ್ರಕಟಿಸಿದೆ.

2024ರ ಲೋಕಸಭಾ ಚುನಾವಣೆಗೆ ಮುಂಚೆಯೇ ಬಿಜೆಪಿ ಜನಪ್ರಿಯತೆಯನ್ನು ಮುಂದುವರೆಸಿದ್ದು, ಪ್ರಧಾನಿ ಮೋದಿ ಅವರು ಭಾರತೀಯ ಜನತಾ ಪಕ್ಷಕ್ಕೆ ಗಣನೀಯವಾಗಿ ಬಲ ತುಂಬಿದ್ದಾರೆ ಎಂದು ಬ್ರಿಟಿಷ್​ ಪಬ್ಲಿಕೇಷನ್​ ಆದ ಗಾರ್ಡಿಯನ್​ ವರದಿ ಮಾಡಿದೆ.

1995ರಿಂದ ಗುಜರಾತ್​ನಲ್ಲಿ ಬಿಜೆಪಿ ಪಕ್ಷ ಸೋಲೆಂಬುದನ್ನೇ ಕಂಡಿಲ್ಲ ಎಂದು ಜಪಾನ್​ ನಿಕ್ಕಿ ಏಷ್ಯಾ ವರದಿ ಮಾಡಿದ್ದು, ಮೋದಿ ಜನಪ್ರಿಯತೆಯನ್ನು ಉಲ್ಲೇಖಿಸಿದೆ. ರಾಜ್ಯದಲ್ಲಿ ಮೋದಿ ಜನಪ್ರಿಯತೆ ಹೊಂದಿದ್ದು, 13 ವರ್ಷಗಳ ಕಾಲ ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿ 2014ರಲ್ಲಿ ಪ್ರಧಾನಿಯಾದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಗುಜರಾತ್​ ಜಯದ ವರದಿ

ರಾಜ್ಯದಲ್ಲಿ ಮೋದಿ ನಿರಂತರವಾದ ಪ್ರಚಾರ ನಡೆಸುವ ಮೂಲಕ ಅವರ ಶಕ್ತಿ ಪ್ರದರ್ಶಿಸಿದ್ದಾರೆ. ಅನೇಕ ಗುಜರಾತ್​ ನಿವಾಸಿಗಳಿಗೆ ತಮ್ಮ ರಾಜ್ಯದ ಮೋದಿ ಭಾರತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಬಗ್ಗೆ ಹೆಮ್ಮೆ ಇದೆ. ಇದೇ ಕಾರಣಕ್ಕೆ ಅವರನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಂಬಿದ್ದಾರೆ ಎಂದು ವರದಿ ಮಾಡಲಾಗಿದೆ.

2024ರ ರಾಷ್ಟ್ರೀಯ ಚುನಾವಣೆಗೆ ಗುಜರಾತ್​ ಗೆಲುವು ಬಿಜೆಪಿಗೆ ದೊಡ್ಡ ಶಕ್ತಿ ನೀಡಿದೆ ಎಂದು ಅಮೆರಿಕ ಮೂಲದ ಇಂಡಿಪೆಂಡೆಟ್​ ವರದಿ ಮಾಡಿದೆ. ಗುಜರಾತ್​ನಲ್ಲಿ ಬಿಜಪಿ ಈ ಗೆಲುವು ಹಿಂದೂ ಮತಗಳ ಬಲವರ್ಧನೆಯನ್ನು ತಿಳಿಸುತ್ತದೆ ಎಂದು ಜೆಎನ್​ಯು ಪ್ರೊಫೆಸರ್​ ಅಜಯ್​ ಗುದವರ್ತೆ ಅಲ್​-ಜಲ್​ಜೀರಾಗೆ ತಿಳಿಸಿದ್ದಾರೆ.

ರಾಜಕೀಯ ಬೆಳವಣಿಗೆಗೆ ಆಶೀರ್ವಾದಿಸಿದ ಗುಜರಾತ್​ ಜನರಿಗೆ ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಯ ಖಾತೆ ಮೂಲಕ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ, ಅವರು ಬಿಜೆಪಿ ಕಾರ್ಯಕರ್ತರ ಶ್ರಮಕ್ಕೂ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಹಿಮಾಚಲದಲ್ಲಿ ನೆಕ್​​ ಟು ನೆಕ್​ ಫೈಟ್​... ಫೋಟೋ ಫಿನಿಶ್​​ ಫಲಿತಾಂಶದ ರೋಚಕ ಕ್ಷಣಗಳು ಹೀಗಿತ್ತು!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.