ETV Bharat / bharat

ಚಮೋಲಿ ಹಿಮಪ್ರವಾಹ: ನಾಪತ್ತೆಯಾಗಿದ್ದ ಇಂಜಿನಿಯರ್ ಶವವಾಗಿ ಪತ್ತೆ

ಹಿಮನದಿ ಸ್ಫೋಟ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37ಕ್ಕೆ ತಲುಪಿದೆ. ಇನ್ನೂ 168 ಜನರು ನಾಪತ್ತೆಯಾಗಿದ್ದಾರೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.

Glacier burst: Missing Kashmiri engineer's body found
ಚಮೋಲಿ ಹಿಮಪ್ರವಾಹ: ನಾಪತ್ತೆಯಾಗಿದ್ದ ಇಂಜಿನಿಯರ್ ಶವವಾಗಿ ಪತ್ತೆ
author img

By

Published : Feb 12, 2021, 9:20 PM IST

ಚಮೋಲಿ (ಉತ್ತರಾಖಂಡ್​): ಹಿಮನದಿ ಸ್ಫೋಟ ದುರಂತದ ವೇಳೆ ಕಾಣೆಯಾಗಿದ್ದ, ರಿಷಿ ಗಂಗಾ ವಿದ್ಯುತ್ ಯೋಜನೆಯಲ್ಲಿ ಹಿರಿಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾಶ್ಮೀರ ಮೂಲದ ಇಂಜಿನಿಯರ್ ಶವವಾಗಿ ಪತ್ತೆಯಾಗಿದ್ದಾರೆ.

ಶ್ರೀನಗರದ ಸೌರಾ ಪ್ರದೇಶದ ನಿವಾಸಿಯಾಗಿದ್ದ ಬಶರತ್ ಅಹ್ಮದ್ ಜರ್ಗರ್ ಮೃತಪಟ್ಟವರಾಗಿದ್ದು, ಉತ್ತರಾಖಂಡದಲ್ಲಿರುವ ಅವರ ಸಹೋದರ ಆಸಿಫ್ ಅಹ್ಮದ್ ಜರ್ಗರ್ ಅವರು ಬಶರತ್ ಸಾವನ್ನು ದೃಢೀಕರಿಸಿದ್ದಾರೆ.

ಇದನ್ನೂ ಓದಿ: ಮ್ಯಾನ್ಮಾರ್ ಮಿಲಿಟರಿ ದಂಗೆ ಅಮೆರಿಕದ ಭದ್ರತೆಗೆ ಬೆದರಿಕೆ: ಬೈಡನ್

ಸರ್ಕಾರಿ ನಿಯಮಗಳನ್ನು ಪೂರೈಸಿದ ನಂತರ ಅವರ ಶವವನ್ನು ಶ್ರೀನಗರಕ್ಕೆ ತರಲಾಗುತ್ತದೆ ಎಂದು ಆಸಿಫ್ ಅಹ್ಮದ್ ಜರ್ಗರ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಸದ್ಯಕ್ಕೆ ಹಿಮನದಿ ಸ್ಫೋಟ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37ಕ್ಕೆ ತಲುಪಿದೆ. ಇನ್ನೂ 168 ಜನರು ನಾಪತ್ತೆಯಾಗಿದ್ದಾರೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.