ETV Bharat / bharat

'ತವರಿಗೆ ತೆರಳಲು ದಾಖಲೆ ನೀಡಿ': ಕೇಂದ್ರಕ್ಕೆ ಮನವಿ ಮಾಡಿದ ಮಾಜಿ ಉಗ್ರರ ಪತ್ನಿಯರು

ಕಾಶ್ಮೀರಿ ಪುರುಷರನ್ನು ಮದುವೆಯಾದ ಪಾಕಿಸ್ತಾನ ಮೂಲದ ಮಹಿಳೆಯರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ, ಪಾಕಿಸ್ತಾನದಲ್ಲಿರುವ ತಮ್ಮ ಮನೆಗಳಿಗೆ ಹೋಗಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

Pakistani wives of former militants
ಮಾಜಿ ಉಗ್ರರ ಪತ್ನಿಯರು
author img

By

Published : Mar 9, 2021, 6:46 AM IST

ಶ್ರೀನಗರ: ಇಡೀ ಜಗತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ಇತ್ತ ಕಾಶ್ಮೀರಿ ಪುರುಷರನ್ನು ಮದುವೆಯಾದ ಪಾಕಿಸ್ತಾನ ಮೂಲದ ಮಹಿಳೆಯರು ಸೋಮವಾರ ತಮ್ಮ ಬೇಡಿಕೆಗಳಿಗೆ ಕಿವಿಗೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಭಾರತೀಯ ಪೌರತ್ವವನ್ನು ನೀಡುವವರೆಗೆ ಅಥವಾ ಪಾಕಿಸ್ತಾನದಲ್ಲಿರುವ ತಮ್ಮ ಮನೆಗಳಿಗೆ ಹೋಗಲು ಅನುಮತಿ ನೀಡುವವರೆಗೂ ಮಹಿಳಾ ದಿನವು ನಮಗೆ ಅರ್ಥಹೀನವಾಗಿದೆ ಎಂದು ಹೇಳಿದರು.

ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಶ್ಮೀರಿ ಮಾಜಿ ಉಗ್ರರ ಪತ್ನಿಯರು, "ಸರ್ಕಾರದ ಪುನರ್ವಸತಿ ನೀತಿಯಡಿ ಕಾಶ್ಮೀರಕ್ಕೆ ಬಂದಿದ್ದೇವೆ. ಆದರೆ ಇಲ್ಲಿ ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದೇವೆ. ಸರ್ಕಾರದ ಆಶ್ವಾಸನೆಗಳ ಮೇರೆಗೆ ನಾವು ಕಾಶ್ಮೀರಕ್ಕೆ ಬಂದಿದ್ದರೂ ನಮಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ನಮಗೆ ಇಲ್ಲಿ ಪೌರತ್ವ ನಿರಾಕರಿಸಲಾಗುತ್ತಿದೆ. ಪಾಕಿಸ್ತಾನದಲ್ಲಿರುವ ನಮ್ಮ ಮನೆಗಳಿಗೆ ಹೋಗಲು ನಮ್ಮಲ್ಲಿ ದಾಖಲೆಗಳಿಲ್ಲ. ಆದ್ದರಿಂದ ಸರ್ಕಾರ ನಮ್ಮ ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡಬೇಕು" ಎಂದು ಮನವಿ ಮಾಡಿಕೊಂಡರು.

ಇದನ್ನು ಓದಿ: ಶಾಲೆಯ ಗೋಡೆ ಕುಸಿದು 6 ಕಾರ್ಮಿಕರ ಸಾವು

ಕಾಶ್ಮೀರದಲ್ಲಿ ಪ್ರಸ್ತುತ ಇಂತಹ 300 ಪಾಕಿಸ್ತಾನಿ ಮಹಿಳೆಯರು ಇದ್ದಾರೆ. ಅವರಲ್ಲಿ ಕೆಲವರು ವಿಚ್ಛೇದನ ಪಡೆದಿದ್ದಾರೆ. ಇನ್ನೂ ಕೆಲವರು ನಾವು ಎಲ್ಲಿಯೂ ಹೋಗುವುದಿಲ್ಲ, ಇಲ್ಲೇ ಇರುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಕಳೆದ ಕೆಲವು ತಿಂಗಳುಗಳಲ್ಲಿ ಕೇಂದ್ರ ಮತ್ತು ರಾಜ್ಯ ಆಡಳಿತಕ್ಕೆ ಪ್ರಯಾಣ ದಾಖಲೆಗಳನ್ನು ನೀಡುವಂತೆ ಅಥವಾ ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಮನವಿ ಮಾಡಿದ್ದಾರೆ.

90 ರ ದಶಕದ ಆರಂಭದಲ್ಲಿ, ಅನೇಕ ಕಾಶ್ಮೀರಿ ಪುರುಷರು ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿನ ಯುವತಿಯರನ್ನು ಮಡುವೆಯಾಗಿದ್ದರು. ಬಳಿಕ ಕೇಂದ್ರ ಸರ್ಕಾರ ಮತ್ತು ಜೆ & ಕೆ ಸರ್ಕಾರವು ಕಾಶ್ಮೀರದ ತಮ್ಮ ಕುಟುಂಬಗಳಿಗೆ ಮರಳಲು ಬಯಸುವ ಉಗ್ರರಿಗಾಗಿ ಹೊಸ ನೀತಿಗಳನ್ನು ಪರಿಚಯಿಸಿತು. ಈ ಸಂದರ್ಭದಲ್ಲಿ ಅಂತಹ ಪುನರ್ವಸತಿ ನೀತಿಗಳು ಮತ್ತು ಭರವಸೆಗಳ ಅಡಿ ಅನೇಕ ಮಾಜಿ ಉಗ್ರರು ತಮ್ಮ ಕುಟುಂಬಗಳೊಂದಿಗೆ ಕಾಶ್ಮೀರಕ್ಕೆ ಮರಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.