ETV Bharat / bharat

ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ! - ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌

ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ತುಂಡು-ತುಂಡಾಗಿ ಕತ್ತರಿಸಿ ವಿವಿಧ ನಗರದ ಬೀದಿಗಳಲ್ಲಿ ಎಸೆದು ಜನರ ಮಧ್ಯೆ ತಿರುಗುತ್ತಿದ್ದ ಕೊಲೆ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕೊಲೆ ನಡೆದು ಸುಮಾರು ಐದು ತಿಂಗಳ ನಂತರ ಬೆಳಕಿಗೆ ಬಂದಿದೆ.

Girl murdered in love affair  Murder of girl by bringing from Mumbai to Delhi  Girl murdered in Delhi  Girl murdered in love affair in Delhi  ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ  ತುಂಡಾಗಿ ಕತ್ತರಿಸಿ ಹಲವು ಬೀದಿಗಳಲ್ಲಿ ಎಸೆದ ಪ್ರಿಯಕರ  ಜನರ ಮಧ್ಯೆ ತಿರುಗುತ್ತಿದ್ದ ಕೊಲೆ ಆರೋಪಿ  ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾ  ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌  ಮದುವೆಯ ಬಗ್ಗೆ ಜಗಳ
ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ
author img

By

Published : Nov 14, 2022, 2:06 PM IST

Updated : Nov 14, 2022, 9:25 PM IST

ನವದೆಹಲಿ: 5 ತಿಂಗಳ ಹಿಂದೆ ಅಂದರೆ 2022ರ ಮೇ ತಿಂಗಳಲ್ಲಿ ನಡೆದಿರುವ ಕೊಲೆಯನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಅಫ್ತಾಬ್ ಅಮೀನ್ ಪೂನಾವಲ್ಲಾ ಎಂಬ ವ್ಯಕ್ತಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾ ವಾಕರ್ ಎಂಬುವರನ್ನು ಮದುವೆಯ ನೆಪದಲ್ಲಿ ಮುಂಬೈನಿಂದ ದೆಹಲಿಗೆ ಕರೆತಂದಿದ್ದನು. ಶ್ರದ್ಧಾ ಮದುವೆಗೆ ಒತ್ತಾಯಿಸಿದಾಗ ಅಫ್ತಾಬ್ ಅವಳನ್ನು ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಅವಳ ದೇಹವನ್ನು35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ಏನಿದು ಪ್ರಕರಣ: ಶ್ರದ್ಧಾ ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ವಾಸಿಸುತ್ತಿದ್ದರು. 26 ವರ್ಷದ ಶ್ರದ್ಧಾ ವಾಕರ್ ಮುಂಬೈನ ಮಲಾಡ್ ಪ್ರದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಅಫ್ತಾಬ್ ಅಮೀನ್ ಮತ್ತು ಶ್ರದ್ಧಾ ಪರಿಚಯವಾಗಿದ್ದು, ಕೆಲದಿನಗಳ ಅಂತರದಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು. ಬಳಿಕ ಅಫ್ತಾಬ್​ ಮತ್ತು ಶ್ರದ್ಧಾ ಲಿವ್-ಇನ್ ರಿಲೇಷನ್​ ಶಿಪ್​ನಲ್ಲಿ ವಾಸಿಸಲು ಪ್ರಾರಂಭಿಸಿದರು. ಈ ವಿಷಯ ಶ್ರದ್ಧಾ ಕುಟುಂಬಸ್ಥರಿಗೆ ತಿಳಿದಿದ್ದು, ಇಬ್ಬರಿಗೂ ತರಾಟೆಗೆ ತೆಗೆದುಕೊಂಡಿದ್ದರು.

ಪ್ರೇಯಸಿ ಕೊಂದ ಪ್ರಿಯಕರ ಅರೆಸ್ಟ್

ದೂರು ನೀಡಿದ ಯುವತಿ ತಂದೆ: ಮನೆಯಲ್ಲಿ ಈ ವಿಷಯದ ಬಗ್ಗೆ ಜಗಳ ನಡೆದ ಬಳಿಕ ಮಗಳು ಮತ್ತು ಅಫ್ತಾಬ್ ಇದ್ದಕ್ಕಿದ್ದಂತೆ ಮುಂಬೈ ತೊರೆದರು. ನಂತರ ಅವರು ಮೆಹ್ರಾಲಿಯ ಛತ್ತರ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿತು. ನನಗೆ ಪರಿಚಯಸ್ಥರೊಬ್ಬರಿಂದ ಮಗಳ ಮಾಹಿತಿ ಸಿಗುತ್ತಿತ್ತು. ಆದರೆ ಮೇ ತಿಂಗಳಿನಿಂದ ಆಕೆ ಬಗ್ಗೆ ಯಾವುದೇ ಮಾಹಿತಿ ನನಗೆ ಸಿಗಲಿಲ್ಲ. ಬಳಿಕ ಯುವತಿಯ ಮೊಬೈಲ್​ ಸಂಖ್ಯೆಗೂ ಸಂಪರ್ಕಿಸಿದರೂ ಯಾವುದೇ ಪ್ರಯೋಜನೆಯಾಗಲಿಲ್ಲ. ನಂತರ ನವೆಂಬರ್ 8 ರಂದು ಛತ್ತರ್​ಪುರದಲ್ಲಿ ಬಾಡಿಗೆ ಫ್ಲಾಟ್​ನಲ್ಲಿ ವಾಸಿಸುತ್ತಿದ್ದ ನನ್ನ ಮಗಳ ಮನಗೆ ಹೋಗಿ ನೋಡಿದೆ. ಫ್ಲಾಟ್​ ಲಾಕ್ ಆಗಿದ್ದರಿಂದ ನನಗೆ ಅನುಮಾನ ಹೆಚ್ಚಾದ ತೊಡಗಿತು. ನಂತರ ಪೊಲೀಸ್ ಠಾಣೆಗೆ ತೆರಳಿ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ಶ್ರದ್ಧಾ ತಂದೆ ವಿಕಾಸ್ ಮದನ್ ವಾಕರ್ ಹೇಳಿದ್ದಾರೆ.

ಮದುವೆಯ ಬಗ್ಗೆ ಜಗಳ: ಶನಿವಾರ ಸಿಸಿಟಿವಿ ಮೂಲಕ ಪೊಲೀಸರು ಅಫ್ತಾಬ್‌ನನ್ನು ಪತ್ತೆ ಮಾಡಿದ್ದಾರೆ. ವಿಚಾರಣೆ ವೇಳೆ ಅಫ್ತಾಬ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದನು. ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶ್ರದ್ಧಾ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರು. ಅದಕ್ಕಾಗಿಯೇ ಮೇ 18 ರಂದು ಶ್ರದ್ಧಾಳನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಮೃತ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದಾನೆ. ಆರೋಪಿ ಅಫ್ತಾಬ್‌ ನೀಡಿದ ಮಾಹಿತಿ ನಂತರ ಪೊಲೀಸರು ಅರಣ್ಯದಿಂದ ಕೆಲವು ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈತನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಓದಿ: ಗಾಜಿಯಾಬಾದ್‌ನಲ್ಲಿ ನೇಣು ಬಿಗಿದು ನಾಯಿಯನ್ನು ಕೊಂದ ಪಾಪಿಗಳು! ವಿಡಿಯೋ

Last Updated : Nov 14, 2022, 9:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.