ಆಗ್ರಾ (ಉತ್ತರ ಪ್ರದೇಶ): ತಾಜ್‌ನಗರಿಯಲ್ಲಿ ಮಂಗಳವಾರ ಚಲಿಸುತ್ತಿದ್ದ ಅವಧ್ ಎಕ್ಸ್‌ಪ್ರೆಸ್ ರೈಲಿನಲ್ಲಿರುವ ಕಮೋಡ್‌ನಲ್ಲಿ ನಾಲ್ಕು ವರ್ಷದ ಬಾಲಕಿಯ ಕಾಲು ಸಿಲುಕಿಕೊಂಡಿದೆ. ಬಾಲಕಿ ತುಂಬಾ ಕಿರುಚಾಡಿದ ವೇಳೆಯಲ್ಲಿ ತಾಯಿಯು, ತನ್ನ ಪುತ್ರಿಯ ಕಾಲನ್ನು ಎಳೆಯಲು ಪ್ರಾರಂಭಿಸಿದರು. ಈ ಕಿರುಚಾಟ ಕೇಳಿ ಇತರ ಪ್ರಯಾಣಿಕರೂ ಜಮಾಯಿಸಿದರು. ಎಲ್ಲರೂ ಹುಡುಗಿಯ ಕಾಲು ತೆಗೆಯಲು ಪ್ರಾರಂಭಿಸಿದರು. ಕೂಡಲೇ ಅಲ್ಲಿದ್ದವರಲ್ಲಿ ಕೆಲವರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿದರು. ಈ ವೇಳೆ ಅವಧ್ ಎಕ್ಸ್‌ಪ್ರೆಸ್ ರೈಲು ಸುಮಾರು 20 ಕಿ.ಮೀ. ವರೆಗೆ ಪ್ರಯಾಣಿಸಿತ್ತು. ನಂತರ ರೈಲು ಫತೇಪುರ್ ಸಿಕ್ರಿ ನಿಲ್ದಾಣವನ್ನ ತಲುಪಿದಾಗ, ಟಾಯ್ಲೆಟ್ ಬಾಕ್ಸ್ ತೆರೆದು ಬಾಲಕಿಯ ಕಾಲನ್ನು ಹೊರತೆಗೆಯಲಾಯಿತು.
ಬಿಹಾರದ ಸಿತಾಮರ್ಹಿ ನಿವಾಸಿ ಮೊಹಮ್ಮದ್ ಅಲಿ ಅವರು ತಮ್ಮ ಪತ್ನಿ ಮತ್ತು 4 ವರ್ಷದ ಮಗಳೊಂದಿಗೆ ಬರೌನಿ ಬಾಂದ್ರಾ ಅವಧ್ ಎಕ್ಸ್‌ಪ್ರೆಸ್‌ನ ಎಸಿ ಕೋಚ್ ಬಿ-6 ನಲ್ಲಿ ಪ್ರಯಾಣಿಸುತ್ತಿದ್ದರು. ಆಗಸ್ಟ್ 15 ರಂದು ಬೆಳಗ್ಗೆ ಆಗ್ರಾ ಫೋರ್ಟ್ ನಿಲ್ದಾಣದಿಂದ ರೈಲು ಹೊರಟಿತು. ರೈಲು ಈದ್ಗಾ ನಿಲ್ದಾಣದಿಂದ ಹೊರಟ ತಕ್ಷಣ ಬಾಲಕಿ ಶೌಚಾಲಯಕ್ಕೆ ಹೋಗುವುದಾಗಿ ತಿಳಿಸಿದ್ದರು. ಇದಾದ ಮೇಲೆ ತಾಯಿ ತನ್ನ ಪುತ್ರಿಯನ್ನು ಶೌಚಾಲಯಕ್ಕೆ ಕರೆದೊಯ್ದಳು.
ತಾಯಿಯು ಮಗಳನ್ನು ಕಮೋಡ್ ಮೇಲೆ ಕೂರಿಸಿದ್ದರು. ಅಷ್ಟರಲ್ಲಿ ಆಕೆಗೆ ಮೊಬೈಲ್‌ಗೆ ಕರೆ ಬಂದಿದೆ. ಕರೆ ಸ್ವೀಕರಿಸಿ ಮಾತನಾಡತೊಡಗಿದ್ದಾರೆ. ಅವಧ್ ಎಕ್ಸ್ ಪ್ರೆಸ್ ರೈಲು ತನ್ನದೇ ವೇಗದಲ್ಲಿ ಸಂಚರಿಸುತ್ತಿತ್ತು. ಇದರಿಂದಾಗಿ ರೈಲು ನಡುಗುತ್ತಿತ್ತು. ಅಷ್ಟರಲ್ಲಿ ಬಾಲಕಿಯ ಕಾಲು ಕಮೋಡ್ ನಲ್ಲಿ ಸಿಲುಕಿಕೊಂಡಿತ್ತು. ಬಾಲಕಿ ಅಳಲು ಆರಂಭಿಸಿದಾಗ ತಾಯಿಯ ಎಚ್ಚರಗೊಂಡಿದ್ದಾಳೆ. ಮೊದ ಮೊದಲು ಮಗುವಿನ ಕಾಲನ್ನು ಹೊರತೆಗೆಯಲು ಯತ್ನಿಸಿದ ತಾಯಿ ಕಾಲು ತೆಗೆಯಲು ಸಾಧ್ಯವಾಗದಿದ್ದಾಗ ಜೋರಾಗಿ ಕೂಗಿದ್ದಾರೆ. ಶಬ್ದ ಕೇಳಿ ಮಹಮ್ಮದ್ ಅಲಿ ಮತ್ತು ಅನೇಕ ಪ್ರಯಾಣಿಕರು ಆಗಮಿಸಿದರು. ಎಲ್ಲರೂ ಹುಡುಗಿಯ ಕಾಲು ತೆಗೆಯಲು ಪ್ರಯತ್ನಿಸಿದರು. ಕಾಲು ತೆಗೆಯಲು ಸಾಧ್ಯವಾಗದಿದ್ದಾಗ ಬಾಲಕಿ ಅಳಲು ತೋಡಿಕೊಂಡಿದ್ದಾಳೆ.
20 ಕಿಲೋ ಮೀಟರ್ ದೂರ ಕ್ರಮಿಸಿದ ರೈಲು: ಮುಂದಿನ ನಿಲ್ದಾಣ ಫತೇಪುರ್ ಸಿಕ್ರಿ ಸುಮಾರು 20 ಕಿಲೋ ಮೀಟರ್ ದೂರವಿರುವಾಗ ರೈಲಿನ ವೇಗ ಕಡಿಮೆಯಾಯಿತು. ಪ್ರಯಾಣಿಕರು ರೈಲ್ವೆ ಸಹಾಯವಾಣಿ ಮೂಲಕ ಸಹಾಯ ಕೋರಿದರು. ಸುಮಾರು ಅರ್ಧ ಗಂಟೆಯ ನಂತರ, ರೈಲು ಫತೇಪುರ್ ಸಿಕ್ರಿ ನಿಲ್ದಾಣವನ್ನು ತಲುಪಿತು. ಇಲ್ಲಿ ಜಿಆರ್‌ಪಿ, ಆರ್‌ಪಿಎಫ್ ಮತ್ತು ರೈಲ್ವೆ ಅಧಿಕಾರಿಗಳು ಕೋಚ್‌ನಲ್ಲಿ ಹಾಜರಿದ್ದರು.
30 ನಿಮಿಷಗಳ ಪ್ರಯತ್ನ: ಹುಡುಗಿಯ ಕಾಲು ಕಮೋಡ್‌ನಲ್ಲಿ ಸಿಲುಕಿಕೊಂಡ ರೀತಿಯನ್ನು ಗಮನಿಸಿದರೆ, ಕಮೋಡ್ ಅಡಿಯಲ್ಲಿರುವ ಬಯೋ ಟಾಯ್ಲೆಟ್ ಬಾಕ್ಸ್ ತೆರೆಯುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ರೈಲ್ವೆಯ ತಾಂತ್ರಿಕ ತಂಡವು ಆಗ್ರಾದಿಂದ ಫತೇಪುರ್ ಸಿಕ್ರಿ ತಲುಪಿತು. ಸುಮಾರು 30 ನಿಮಿಷಗಳ ಪ್ರಯತ್ನದ ನಂತರ, ತಂಡವು ಕಮೋಡ್ ಅಡಿ ಇರಿಸಲಾದ ಬಯೋ ಟಾಯ್ಲೆಟ್ ಬಾಕ್ಸ್ ಅನ್ನು ತೆರೆಯಿತು. ಇದಾದ ಬಳಿಕ ಬಾಲಕಿಯ ಕಾಲನ್ನು ಹೊರತೆಗೆದಿದ್ದಾರೆ. ಈ ಸಮಯದಲ್ಲಿ, ಅವಧ್ ಎಕ್ಸ್‌ಪ್ರೆಸ್ ಫತೇಪುರ್ ಸಿಕ್ರಿಯಲ್ಲಿ ಸುಮಾರು ಒಂದು ಗಂಟೆ ನಿಂತಿತ್ತು,
ಇದನ್ನೂ ಓದಿ: ಧಾರಾಕಾರ ಮಳೆ, ಭೂಕುಸಿತಕ್ಕೆ ತತ್ತರಿಸಿದ ಹಿಮಾಚಲ.. 800 ಜನರನ್ನು ರಕ್ಷಿಸಿದ ವಾಯುಪಡೆ