ETV Bharat / bharat

ರಾಜಸ್ಥಾನ: ಬಾಲಕಿ ಅಪಹರಿಸಿ 16 ಜನರಿಂದ ಸಾಮೂಹಿಕ ಅತ್ಯಾಚಾರ

author img

By

Published : Feb 15, 2022, 6:28 AM IST

13 ವರ್ಷದ ಬಾಲಕಿಯ ಮೇಲೆ 16 ಮಂದಿ ಕಾಮುಕರು ಅತ್ಯಾಚಾರವೆಸಗಿದ ಅಮಾನವೀಯ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ನಡೆದಿದೆ.

Gang Rape in Rajasthan  Woman Crime in Rajasthan  Shocking gang rape of minor girl in rajasthan  Girl Kidnapped and Gang Raped in Deeg  13 year old girl gang raped by 16 people in bharatpur  ರಾಜಸ್ಥಾನದಲ್ಲಿ ಸಾಮೂಹಿಕ ಅತ್ಯಾಚಾರ  ರಾಜಸ್ಥಾನ ಅಪರಾಧ ಸುದ್ದಿ,  ಬಾಲಕಿ ಮೇಲೆ 16 ಜನರಿಂದ ಸಾಮೂಹಿಕ ಅತ್ಯಚಾರ  ರಾಜಸ್ಥಾನದಲ್ಲಿ ಬಾಲಕಿ ಅಪಹರಣ ಮತ್ತ ಅತ್ಯಾಚಾರ
13 ವರ್ಷದ ಬಾಲಕಿಯನ್ನು ಅಪಹರಿಸಿ 16 ಜನರಿಂದ ಸಾಮೂಹಿಕ ಅತ್ಯಾಚಾರ

ಭರತ್‌ಪುರ(ರಾಜಸ್ಥಾನ): ಪುಟ್ಟ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ದೀಗ್‌ನ ಖೋಹ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಫೆಬ್ರವರಿ 11ರಂದು ಒಣ ಕಟ್ಟಿಗೆಗಳನ್ನು ತರಲು ಕಾಡಿಗೆ ಹೋದಾಗ ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು ಆಕೆಯನ್ನು ಅಪಹರಿಸಿದ್ದರು. ಬಳಿಕ ಕೃಷಿ ಭೂಮಿಗೆ ಕರೆದೊಯ್ದು ದುಷ್ಕೃತ್ಯ ಎಸಗಿ ಪರಾರಿಯಾಗಿದ್ದರು.

ಇದನ್ನೂ ಓದಿ: 50 ರೂಪಾಯಿ ಲಂಚ ಪಡೆದಿದ್ದಕ್ಕೆ ಕಡ್ಡಾಯ ನಿವೃತ್ತಿ ಶಿಕ್ಷೆ ಸರಿಯಲ್ಲ: ಹೈಕೋರ್ಟ್

ಸಂತ್ರಸ್ತೆ ಮನೆಗೆ ಬಂದು ತನ್ನ ತಂದೆಗೆ ನಡೆದ ಘಟನೆ ವಿವರಿಸಿದ್ದಾಳೆ. ಪೋಷಕರು ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪ್ರಕರಣದ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ತಕ್ಷಣವೇ ಇಬ್ಬರು ಅಪರಿಚಿತರು ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ತಂಡ ಕೂಡ ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.