ರತ್ಲಂ/ಮಧ್ಯಪ್ರದೇಶ: ಬಾವಿಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವತಿವೋರ್ವಳು ಆಯತಪ್ಪಿ ಸುಮಾರು 50 ಅಡಿ ಆಳದ ಬಾವಿಗೆ ಬಿದ್ದ ಘಟನೆ ರತ್ಲಂ ಜಿಲ್ಲೆಯ ಸುಖೇಡಾ ಗ್ರಾಮದಲ್ಲಿ ನಡೆದಿದೆ.
ಬಾವಿಯೊಳಗಿಂದ ಯುವತಿಯ ಕಿರುಚಾಟ ಕೇಳಿ , ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಕೆಯನ್ನು ಉಳಿಸಲು ಬಾವಿಗೆ ಹಾರಿ ಆತನೂ ಇ್ಕಕಟ್ಟಿಗೆ ಸಿಲುಕಿದ್ದ.
ಸುಜಾಪುರ ದೇವಸ್ಥಾನ ನೋಡಲೆಂದು ಬಂದಿದ್ದ ಯುವತಿ ಪೂಜೆ ಮುಗಿಸಿ, ಪಕ್ಕದಲ್ಲಿಯೇ ಇದ್ದ ಬಾವಿಯ ಬಳಿ ಸೆಲ್ಫಿ ತೆಗೆದುಕೊಳ್ಳಲಿ ಹೋದಾಗ ಕಾಲುಜಾರಿ ಬಾವಿಗೆ ಬಿದ್ದಿದ್ದಾಳೆ. ಯುವತಿಯನ್ನ ರಕ್ಷಿಸಲು ಬಾವಿಗೆ ಹಾರಿದ ಯುವಕ ಮೇಲೆಳಲಾಗದೇ ಒದ್ದಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಹಗ್ಗದ ಮೂಲಕ ಹರಸಾಹನ ಪಟ್ಟು ಇಬ್ಬರನ್ನೂ ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತಿದ್ದಾರೆ.
ಇದನ್ನೂ ಓದಿ:ಟೂಲ್ಕಿಟ್ ಕೇಸ್: ಮಾನವ ಹಕ್ಕು ಪ್ರತಿಪಾದಿಸಿ ದಿಶಾಗೆ ಬೆಂಬಲ ವ್ಯಕ್ತಪಡಿಸಿದ ಗ್ರೆಟಾ ಥನ್ಬರ್ಗ್