ETV Bharat / bharat

ಮದುವೆಗೆ ವಿರೋಧ : ಪೋಷಕರನ್ನು ಕೊಂದ 17ರ ಬಾಲಕಿ, 20ರ ಯುವಕ! - ಅಪ್ರಾಪ್ತ ಬಾಲಕಿ ಪ್ರಿಯಕರ ಬಂಧನ

ಬಾಲಕಿ ತಂದೆಯ ಮೃತದೇಹ ಮನೆಯಲ್ಲೇ ಪತ್ತೆಯಾಗಿತ್ತು. ಅಲ್ಲದೇ, ಇದಕ್ಕೂ ಮುನ್ನ ತಾಯಿ ಕೂಡ ಇದೇ ರೀತಿಯಲ್ಲಿ ಮೃತಪಟ್ಟಿದ್ದಳು. ಹೀಗಾಗಿ ಮಗಳು ಮತ್ತು ಆಕೆಯ ಪ್ರಿಯಕರನ ಮೇಲೆ ಅನುಮಾನ ಮೂಡಿತ್ತು..

parents murder
parents murder
author img

By

Published : Mar 15, 2022, 5:02 PM IST

ಬಿಜ್ನೋರ(ಉತ್ತರಪ್ರದೇಶ) : ಮದುವೆಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಬಾಲಕಿಯ ಪೋಷಕರನ್ನು ಕೊಲೆ ಮಾಡಿದ ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಮತ್ತು 20 ವರ್ಷದ ಯುವಕನನ್ನು ಉತ್ತರಪ್ರದೇಶದ ಬಿಜ್ನೋರ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಮತ್ತು ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರು ಮದುವೆ ಆಗಬೇಕೆಂಬ ಇಚ್ಛೆಗೆ ಬಾಲಕಿಯ ಪೋಷಕರು ಒಪ್ಪಿರಲಿಲ್ಲ. ಈ ನಡುವೆ ಮಾ.6ರಂದು ಬಾಲಕಿ ತಂದೆಯ ಮೃತದೇಹ ಮನೆಯಲ್ಲೇ ಪತ್ತೆಯಾಗಿತ್ತು. ಅಲ್ಲದೇ, ಇದಕ್ಕೂ ಮುನ್ನ ಅಂದರೆ ಜ.15ರಂದು ತಾಯಿ ಕೂಡ ಇದೇ ರೀತಿ ಮೃತಪಟ್ಟಿದ್ದಳು.

ಹೀಗಾಗಿ, ಕುಟುಂಬದ ಸಂಬಂಧಿಯೊಬ್ಬರು ಈ ಸಾವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಂತೆಯೇ ಪೊಲೀಸರು ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಪೊಲೀಸರು ವಿಚಾರಣೆಯಲ್ಲಿ ತಮ್ಮ ಕೃತ್ಯವನ್ನು ಇಬ್ಬರೂ ಒಪ್ಪಿದ್ದರು.

ಸದ್ಯ ಆರೋಪಿ ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯನ್ನು ಬಾಲಾಪರಾಧಿ ಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಆರೋಪಿ ಯುವಕನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆ ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ 100 ಜನರಿಗೆ ಮೋಸ: ಇಬ್ಬರು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.