ETV Bharat / bharat

ರಾಹುಲ್ ಗಾಂಧಿ ಗೋಬೆಲ್ಸ್ ಸಿದ್ಧಾಂತ ಅನುಸರಿಸುತ್ತಿದ್ದಾರೆ: ಗಿರಿರಾಜ್ ಸಿಂಗ್ - ನಾಜಿ ಜರ್ಮನಿಯ ಪ್ರಚಾರ ಡಾ. ಜೋಸೆಫ್ ಗೋಬೆಲ್ಸ್

ರೈತರ ಚಳವಳಿಗೆ ಬೆಂಬಲ ಸೂಚಿಸಿರುವ ರಾಹುಲ್ ಗಾಂಧಿಯನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ನಾಜಿ ಜರ್ಮನಿಯ ಪ್ರಚಾರ ಡಾ. ಜೋಸೆಫ್ ಗೋಬೆಲ್ಸ್​ಗೆ ಹೋಲಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿರಾಜ್ ಸಿಂಗ್
ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿರಾಜ್ ಸಿಂಗ್
author img

By

Published : Feb 22, 2021, 10:28 AM IST

ಮುಜಫರ್​ಪುರ: ರಾಹುಲ್ ಗಾಂಧಿ ಗೋಬೆಲ್ಸ್​ ಸಿದ್ಧಾಂತ ಅನುಸರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿರಾಜ್ ಸಿಂಗ್

ಮುಜಫರ್​ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿರಾಜ್ ಸಿಂಗ್, ರೈತ ಚಳವಳಿಯ ಮೂಲಕ ಕಾಂಗ್ರೆಸ್ ಪಕ್ಷ ರಾಜಕೀಯ ನಡೆಸಲು ಮುಂದಾಗುತ್ತಿದೆ. ರಾಹುಲ್ ಗಾಂಧಿಯವರು ಜರ್ಮನಿಯ ನಾಜಿ ಪ್ರಚಾರಕ ಗೋಬೆಲ್ಸ್ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ. ರೈತರ ಚಳವಳಿಗೆ ಬೆಂಬಲ ಸೂಚಿಸುವ ನೆಪದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ, ಜನರಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.