ಅಮ್ರೋಲಿ(ಗುಜರಾತ್): ಸಿಂಹಗಳ ಗುಂಪೊಂದು ರಾಜಾರೋಷವಾಗಿ ನಡು ರಸ್ತೆಯಲ್ಲೇ ಸುತ್ತಾಡಿರುವ ವಿಡಿಯೋ ವೈರಲ್ ಆಗಿದ್ದು, ಗುಜರಾತ್ನ ಅಮ್ರೋಲಿ ಎಂಬಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ನಿನ್ನೆ ತಡರಾತ್ರಿ ಗಿರ್ ಅರಣ್ಯ ಪ್ರದೇಶದ ಐದು ಸಿಂಹಗಳು ನಡುರಸ್ತೆಯಲ್ಲಿ ತಿರುಗಾಡಿವೆ. ಆದರೆ ಈ ವೇಳೆ ಯಾವುದೇ ವ್ಯಕ್ತಿ ಮೇಲೆ ಅವುಗಳು ದಾಳಿ ನಡೆಸಿಲ್ಲ. ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಇದರ ವಿಡಿಯೋ ಸೆರೆಹಿಡಿದು, ತದನಂತರ ವೈರಲ್ ಮಾಡಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯಾಗಿ ಕೆಲ ಸಿಂಹಗಳು ರೋಡ್ನಲ್ಲಿ ಸುತ್ತಾಡಿದ್ದವು. ಅದರ ವಿಡಿಯೋ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿರಿ: ಮೂವರು ಬಾಲಕಿಯರ ಜೀವ ತೆಗೆದ ಸೆಲ್ಫಿ: ಕಾಲು ಜಾರಿ ಕೆರೆಗೆ ಬಿದ್ದು ದಾರುಣ ಸಾವು
ಗಿರ್ ಸಂರಕ್ಷಿತ ಅಭಿಯಾರಣ್ಯದಲ್ಲಿ ಹೆಚ್ಚಿನ ಸಿಂಹಗಳಿದ್ದು, ಅಲ್ಲಿಂದಲೇ ರಸ್ತೆಗೆ ಲಗ್ಗೆ ಹಾಕಿರಬೇಕು ಎಂದು ತಿಳಿದು ಬಂದಿದೆ. ಈ ಪ್ರದೇಶದಲ್ಲಿ ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ.