ETV Bharat / bharat

ಪ್ರಧಾನಿ ಮೋದಿಯನ್ನು ಹೊಗಳಿದ ಕಾಂಗ್ರೆಸ್​ ನಾಯಕ ಆಜಾದ್

author img

By

Published : Feb 28, 2021, 10:20 PM IST

ಜಮ್ಮುವಿನಲ್ಲಿ ಗುಜ್ಜರ್ ದೇಶ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಜೆ & ಕೆ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.

Ghulam Nabi Azad lavishes praise on PM Modi
ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್

ಜಮ್ಮು: ಜಮ್ಮುವಿನಲ್ಲಿ ಗುಜ್ಜರ್ ದೇಶ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.

ಜಮ್ಮು ಕಾಶ್ಮೀರದ ಕೆಲ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಗುಜ್ಜರ್ ಸಮುದಾಯದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಆಜಾದ್, ನರೇಂದ್ರ ಮೋದಿ ಅವರು ತಮ್ಮ ಹಿನ್ನೆಲೆಯನ್ನು ಮುಚ್ಚಿಟ್ಟಿಲ್ಲ ಮತ್ತು ತಾವು ಹಳ್ಳಿಯಿಂದ ಬಂದವರು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮೋದಿಯೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಅವರು ತಮ್ಮ ನೈಜತೆಯನ್ನು ಮರೆಮಾಚಿಲ್ಲ, ಅದನ್ನು ನಾವು ಮೆಚ್ಚಬೇಕು. ವ್ಯಕ್ತಿಯೊಬ್ಬ ತನ್ನ ಹಿನ್ನೆಲೆಯನ್ನು ಜಗತ್ತಿನೆದುರು ಮುಚ್ಚಿಡಲು ಪ್ರಯತ್ನಿಸಬಾರದು ಎಂದರು.

ಓದಿ:ರೈತರೇ, ನಿಮ್ಮ ಟ್ರ್ಯಾಕ್ಟರ್​ಗಳನ್ನು ಮತ್ತೆ ಸಿದ್ಧವಾಗಿರಿಸಿಕೊಳ್ಳಿ; ರಾಕೇಶ್​ ಟಿಕಾಯತ್​​

"ನಾನು ಅನೇಕ ನಾಯಕರ ಹಲವು ವಿಷಯಗಳನ್ನು ಇಷ್ಟಪಡುತ್ತೇನೆ. ನಾನು ಹಳ್ಳಿಯಿಂದ ಬಂದವನು. ಆ ಬಗ್ಗೆ ನನಗೆ ಹೆಮ್ಮೆಯಿದೆ. ನಮ್ಮ ಪ್ರಧಾನಿ ಕೂಡ ಹಳ್ಳಿಯಿಂದ ಬಂದವರು ಎಂದು ಹೇಳಿಕೊಂಡಿದ್ದಾರೆ. ಚಹಾ ಮಾರಾಟ ಮಾಡುತ್ತಿದ್ದುದಾಗಿಯೂ ಹೇಳಿದ್ದಾರೆ, ಇದು ನನಗೆ ಮೆಚ್ಚುಗೆಯಾಗಿದೆ." ಎಂದು ಆಜಾದ್​ ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ನಾಯಕತ್ವ ಮತ್ತು ಸಾಂಸ್ಥಿಕ ಬದಲಾವಣೆಗೆ ಆಗ್ರಹಿಸಿರುವ ‘ಜಿ–23’ ನಾಯಕರು ಹಾಗೂ ಆಜಾದ್‌ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಮತ್ತು ಪಕ್ಷವು ದುರ್ಬಲಗೊಳ್ಳುತ್ತಿದೆ ಎಂದು ಹೇಳಿದ ಮರುದಿನವೇ ಅವರಿಂದ ಈ ಹೇಳಿಕೆ ಮೂಡಿಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.