ನವದೆಹಲಿ: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಿದ್ದು, ಕೇಸರಿ ಪಕ್ಷ ತೆಲುಗು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್, 'ಜಿಎಚ್‌ಎಂಸಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಫಲಿತಾಂಶವು ಬಹಳ ಉತ್ತೇಜನಕಾರಿಯಾಗಿದೆ. ಕರ್ನಾಟಕದ ನಂತರ ತೆಲಂಗಾಣವು ನಮಗೆ ಬಹಳ ಮುಖ್ಯವಾದ ಹಂತವಾಗಿದೆ ಮತ್ತು ದ.ಭಾರತದಲ್ಲಿ ಭಾರತೀಯ ಜನತಾ ಪಕ್ಷದ ಪ್ರಾಬಲ್ಯ ಇನ್ನೂ ಹೆಚ್ಚಾಗಲಿದೆ ಎಂಬುದನ್ನು ಹೈದರಾಬಾದ್ ಪಾಲಿಕೆ ಫಲಿತಾಂಶ ಸೂಚಿಸುತ್ತದೆ' ಎಂದರು.
ಓದಿ: ಹೈದರಾಬಾದ್ ಪಾಲಿಕೆ ಫಲಿತಾಂಶ: ಟಿಆರ್‌ಎಸ್‌ಗೆ ಹೆಚ್ಚು ಸ್ಥಾನ.. ಬಿಜೆಪಿ ಮಹತ್ಸಾಧನೆ
'ಮುಂದಿನ ಹಾದಿ ಕೇರಳ, ತಮಿಳುನಾಡು'
'ಬಂಗಾಳದ ನಂತರ ನಾವು ಕೇರಳವನ್ನು ಒಂದು ಪ್ರಮುಖ ರಾಜ್ಯವೆಂದು ಪರಿಗಣಿಸುತ್ತೇವೆ ಎಂದು ಅಮಿತ್ ಶಾ ಮೊದಲೇ ಹೇಳಿದ್ದರು. ತ್ರಿಪುರದಿಂದ ಕಮ್ಯುನಿಸ್ಟರತ್ತ ಸಾಗಿದ ಪ.ಬಂಗಾಳದ ಮಮತಾ ಬ್ಯಾನರ್ಜಿಯ ನಕ್ಸಲೈಟ್ ಚಿಂತನೆ ಕೊನೆಗೊಳ್ಳುತ್ತಿದೆ. ಈಗ ಕ್ರಮೇಣ, ದಾರಿ ಕೇರಳದ ಕಮ್ಯುನಿಸ್ಟರು ನಮ್ಮ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಮ್ಯುನಿಸ್ಟರನ್ನು ನಿರ್ಮೂಲನೆ ಮಾಡುವ ಗುರಿ ಹೊಂದಿದ್ದೇವೆ' ಎಂದು ಅಗರ್ವಾಲ್ ಹೇಳಿದರು.
'ಇದಲ್ಲದೆ, ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿವೆ. ಭಾರತೀಯ ಜನತಾ ಪಕ್ಷ ಖಂಡಿತವಾಗಿಯೂ ಅದರಲ್ಲಿಯೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತದೆ' ಎಂದು ಅವರು ಹೇಳಿದ್ದಾರೆ.
'ಹೈದರಾಬಾದ್ ಚುನಾವಣೆಯ ಫಲಿತಾಂಶ ಬಂದಿದೆ. ಅಲ್ಲಿ ನಾವು ತಕ್ಷಣ ಅಧಿಕಾರ ಹಿಡಿಯುವ ಆತುರ ಮಾಡುವುದಿಲ್ಲ. ಮುಂದಿನ ನಿರ್ಧಾರವನ್ನು ನಮ್ಮ ಪಕ್ಷದ ಹಿರಿಯ ನಾಯಕರು ತೆಗೆದುಕೊಳ್ಳುತ್ತಾರೆ' ಎಂದು ಅವರು ತಿಳಿಸಿದರು.