ಭರತಪುರ (ರಾಜಸ್ಥಾನ): ಜರ್ಮನಿ ಮಹಿಳೆ ಜೆನ್ನಿಫರ್ ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಇಲ್ಲಿನ ಜನರಿಂದ ಪ್ರಭಾವಿತರಾಗಿ ಭಾರತೀಯ ಯುವಕನನ್ನು ಮದುವೆಯಾಗಿದ್ದಾರೆ. ಅದು ಕೂಡ ಹಿಂದೂ ಸಂಪ್ರದಾಯದಂತೆ ವಿವಾಹ ಬಂಧನಕ್ಕೊಳಗಾಗಿರುವುದು ವಿಶೇಷವಾಗಿದೆ.
ಮಂಗಳವಾರ ಗಾಜಿಯಾಬಾದ್‌ನ ಶ್ರೇಷ್ಠಾ ಅವರು ಜರ್ಮನಿಯ ನಿವಾಸಿ ಜೆನ್ನಿಫರ್ ಅವರನ್ನು ಭರತ್‌ಪುರದ ಹೋಟೆಲ್‌ನಲ್ಲಿ ವಿವಾಹವಾದರು. ವಿದೇಶಿ ವಧು ಮಾತ್ರವಲ್ಲದೇ ಹುಡುಗಿಯ ಕಡೆಯವರೂ ಮದುವೆಯಲ್ಲಿ ಸಖತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಗಾಜಿಯಾಬಾದ್ ನಿವಾಸಿ ಶ್ರೇಷ್ಠಾ ಅವರು ಜರ್ಮನಿಯಲ್ಲಿ ಎಂಜಿನಿಯರಿಂಗ್ ಓದಲು ಹೋಗಿದ್ದರು. ಇದಾದ ಬಳಿಕ ಅಲ್ಲಿನ ಸೌರಶಕ್ತಿ ಕಂಪನಿಯೊಂದರಲ್ಲಿ ಕೆಲಸ ಆರಂಭಿಸಿದರು. ಈ ಸಮಯದಲ್ಲಿ ಶ್ರೇಷ್ಠಾ ಜರ್ಮನಿಯ ಜೆನ್ನಿಫರ್ ಅವರನ್ನು ಭೇಟಿಯಾದರು. ಇಬ್ಬರೂ ಸ್ನೇಹಿತರಾದರು ಮತ್ತು ನಂತರ ಪ್ರೀತಿಸಲು ಶುರು ಮಾಡಿದರು .
ನಾವು ಸುಮಾರು ಮೂರೂವರೆ ವರ್ಷಗಳಿಂದ ಒಟ್ಟಿಗೆ ಇದ್ದೇವೆ ಎಂದು ಶ್ರೇಷ್ಠಾ ಹೇಳಿಕೊಂಡಿದ್ದು, ಕೆಲವು ಸಮಯದ ಹಿಂದೆ ಶ್ರೇಷ್ಠಾ ಜೆನ್ನಿಫರ್ರನ್ನು ಮದುವೆ ಆಗುತ್ತಿಯಾ ಎಂದು ಕೇಳಿದಾಗ ಮರು ಮಾತಿಲ್ಲದೇ ಅವರು ಒಪ್ಪಿಕೊಂಡಿದ್ದಾರೆ. ಶ್ರೇಷ್ಠಾ ಮತ್ತು ಜೆನ್ನಿಫರ್ ಮದುವೆಯ ಬಗ್ಗೆ ತಮ್ಮ ಮನೆಯವರಿಗೆ ತಿಳಿಸಿದಾಗಲೂ ಅವರು ಸಂತಸದಿಂದ ಒಪ್ಪಿಕೊಂಡರು. ಎರಡೂ ಕಡೆಯವರ ಒಪ್ಪಿಗೆ ಮೆರೆಗೆ ಇಂದು ಹಿಂದೂ ವಿಧಿ ವಿಧಾನಗಳಂತೆ ಇಬ್ಬರೂ ಮದುವೆ ಆಗಿದ್ದೇವೆ ಎಂದು ನವ ಜೋಡಿ ಹೇಳಿಕೊಂಡಿದೆ.
ಇದನ್ನೂ ಓದಿ: ಹಿಂದೂ ಧರ್ಮ ಮೆಚ್ಚಿ ಇಬ್ಬರು ಯುವಕರನ್ನು ವರಿಸಿದ ಮುಸ್ಲಿಂ ಯುವತಿಯರು..!