ETV Bharat / bharat

ಚೀನಾ ಮತ್ತು ಭಾರತಕ್ಕೆ ಪರಸ್ಪರ ಗಡಿಗಳು ಗೊತ್ತಿದೆ: ಜನರಲ್ ಬಿಪಿನ್ ರಾವತ್​ - ಚೀನಾದಿಂದ ಗಡಿಯಲ್ಲಿ ಗ್ರಾಮ ನಿರ್ಮಾಣ

ಚೀನಾದಿಂದ ಗಡಿಯಲ್ಲಿ ಗ್ರಾಮ ನಿರ್ಮಾಣ, ರೈಲು ಹಳಿಗಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜನರಲ್ ಬಿಪಿನ್ ರಾವತ್​ ಉತ್ತರಾಖಂಡಕ್ಕೆ ಭೇಟಿ ನೀಡುವ ವೇಳೆ ಸ್ಪಷ್ಟನೆ ನೀಡಿದ್ದಾರೆ.

Gen Rawat visits Uttarakhand, denies Chinese intrusion at Arunachal border
ಚೀನಾ ಮತ್ತು ಭಾರತಕ್ಕೆ ಪರಸ್ಪರ ಗಡಿಗಳು ಗೊತ್ತಿದೆ: ಜನರಲ್ ಬಿಪಿನ್ ರಾವತ್​
author img

By

Published : Nov 10, 2021, 8:46 AM IST

ಡೆಹ್ರಾಡೂನ್(ಉತ್ತರಾಖಂಡ): ಚೀನಾಗೆ ಭಾರತದ ಗಡಿ ಗೊತ್ತಿದೆ. ಭಾರತಕ್ಕೂ ಚೀನಾದ ಗಡಿ ಗೊತ್ತಿದೆ. ಕೆಲವೊಮ್ಮೆ ಚೀನಾ ತನ್ನ ದೇಶಕ್ಕೆ ಸೇರಿದ್ದು ಎಂದುಕೊಂಡ ಪ್ರದೇಶಗಳಿಗೆ ಆಗಾಗ ಭೇಟಿ ನೀಡುತ್ತದೆ. ಭಾರತವೂ ತನ್ನ ಪ್ರದೇಶಗಳಿಗೆ ಆಗಾಗ ಭೇಟಿ ನೀಡುತ್ತದೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್​ ಸ್ಪಷ್ಟನೆ ನೀಡಿದರು.

ಉತ್ತರಾಖಂಡ ರಾಜ್ಯದ 22ನೇ ವರ್ಷದ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಬಿಪಿನ್ ರಾವತ್​ ಕೆಲವೊಮ್ಮೆ ಚೀನಾ ಬಾರಾಹೋಟಿ, ಲಡಾಖ್‌ನಂತಹ ಪ್ರದೇಶಗಳಿಗೆ ಭೇಟಿ ನೀಡುತ್ತದೆ. ನಾವೂ ಕೂಡಾ ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡುತ್ತೇವೆ. ಗಡಿಯಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಮ್ಮ ದೇಶದಲ್ಲಿ ಚೀನಾದವರನ್ನು ನೆಲೆಸಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಕಳೆದ ವಾರ ಬಿಡುಗಡೆಯಾದ ಅಮೆರಿಕದ ರಕ್ಷಣಾ ಇಲಾಖೆ ವಾರ್ಷಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅರುಣಾಚಲ ಪ್ರದೇಶದ ಸಮೀಪವಿರುವ ಟಿಬೆಟ್​​ ವಿವಾದಿತ ಪ್ರದೇಶದಲ್ಲಿ ಚೀನಾ ನೂರು ಮನೆಗಳಿರುವ ಗ್ರಾಮವನ್ನು ನಿರ್ಮಾಣ ಮಾಡಿತ್ತು. ಇದರ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಅಷ್ಟೇ ಅಲ್ಲದೇ ಗಡಿಗೆ ಸಮೀಪದಲ್ಲಿರುವ ಹಲವು ಪ್ರದೇಶಗಳಲ್ಲಿ ಚೀನಾ ಹೈಸ್ಪೀಡ್ ರೈಲು ಹಳಿಗಳನ್ನು ಹಾಕಿದೆ. ಪೂರ್ವ ಲಡಾಖ್ ಉದ್ದಕ್ಕೂ ಇಂಥಹದ್ದೇ ನಡೆಯನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಈ ವಿಚಾರಕ್ಕೆ ಬಿಪಿನ್ ರಾವತ್ ಸ್ಪಷ್ಟನೆ ನೀಡಿದ್ದಾರೆ.

ವಲಸೆ ಹೋಗಬೇಡಿ: ಉತ್ತರಾಖಂಡ ರಾಜ್ಯದ ಬಗ್ಗೆ ಮಾತನಾಡಿದ ಅವರು, ವಲಸೆ ಹೋಗುವುದು ರಾಜ್ಯದ ಅತಿ ದೊಡ್ಡ ಸಮಸ್ಯೆಯಾಗಿದೆ. ಗಡಿ ರಾಜ್ಯವಾದ ಕಾರಣ ಇಲ್ಲಿ ಕೆಲವು ಸೌಲಭ್ಯಗಳ ಕೊರತೆ ಇದೆ. ಆದರೂ ರಸ್ತೆಗಳು ಮುಂತಾದ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಯಾರೂ ವಲಸೆ ಹೋಗಬಾರದು. ರಾಜ್ಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ.

ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಗಮನ ಹರಿಸಬೇಕಿದೆ. ಡೆಹ್ರಾಡೂನ್, ನೈನಿತಾಲ್ ಮುಂತಾದ ಪ್ರದೇಶಗಳಲ್ಲಿರುವ ಶಿಕ್ಷಣ ವ್ಯವಸ್ಥೆ ಗುಡ್ಡಗಾಡು ಪ್ರದೇಶಗಳನ್ನು ತಲುಪಿಲ್ಲ. ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆ ಗುಡ್ಡಗಾಡು ಪ್ರದೇಶಗಳಿಗೆ ತಲುಪಿದರೆ ಅಭಿವೃದ್ಧಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ರಾವತ್ ಹೇಳಿದ್ದಾರೆ.

ಇದನ್ನೂ ಓದಿ: ಛತ್ ಪೂಜಾ ಆಚರಣೆ ವೇಳೆ ನದಿಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.