ಜೈಪುರ (ರಾಜಸ್ಥಾನ): ರಾಜಸ್ಥಾನದ ಉದಯ್‌ಪುರ್‌ದಲ್ಲಿ ಇತ್ತೀಚೆಗೆ ಶಿರಚ್ಛೇದಕ್ಕೊಳಗಾದ ಕನ್ನಯ್ಯ ಲಾಲ್ ನಿವಾಸಕ್ಕೆ ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ ನೀಡಿ ಸಂತಾಪ ಸೂಚಿಸಿದರು. ಇದೇ ವೇಳೆ ಕನ್ನಯ್ಯ ಕುಟುಂಬಸ್ಥರಿಗೆ 50 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಸಿಎಂ, ಮುಂದೆಯೂ ಅಗತ್ಯ ನೆರವು ಕಲ್ಪಿಸುವುದಾಗಿಯೂ ಭರವಸೆ ನೀಡಿದರು.
ಸಚಿವರೊಂದಿಗೆ ಕನ್ನಯ್ಯ ಲಾಲ್ ನಿವಾಸಕ್ಕೆ ತೆರಳಿದ ಸಿಎಂ ಗೆಹ್ಲೋಟ್, ಮನೆಯಲ್ಲಿದ್ದ ಕನ್ನಯ್ಯ ಭಾವಚಿತ್ರಕ್ಕೆ ಗೌರವ ಅರ್ಪಿಸಿದರು. ನಂತರ ಕುಟುಂಬಸ್ಥರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಯ್ಯ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಎಐ ಶೀಘ್ರವೇ ಪೂರ್ಣಗೊಳಿಸುವ ವಿಶ್ವಾಸ ಇದೆ. ಅಲ್ಲದೇ, ಆದಷ್ಟು ಬೇಗ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಆಗಲಿದೆ. ಇದನ್ನೇ ರಾಜ್ಯ ಮತ್ತುಇಡೀ ದೇಶದ ಜನತೆ ಬಯಸುತ್ತಿದ್ದಾರೆ ಎಂದು ಹೇಳಿದರು.
-
#WATCH | Rajasthan CM Ashok Gehlot meets the family members of #KanhaiyaLal, who was killed by two men on June 28 in Udaipur pic.twitter.com/rQzra6Wqpd
— ANI MP/CG/Rajasthan (@ANI_MP_CG_RJ) June 30, 2022 " class="align-text-top noRightClick twitterSection" data="
">#WATCH | Rajasthan CM Ashok Gehlot meets the family members of #KanhaiyaLal, who was killed by two men on June 28 in Udaipur pic.twitter.com/rQzra6Wqpd
— ANI MP/CG/Rajasthan (@ANI_MP_CG_RJ) June 30, 2022#WATCH | Rajasthan CM Ashok Gehlot meets the family members of #KanhaiyaLal, who was killed by two men on June 28 in Udaipur pic.twitter.com/rQzra6Wqpd
— ANI MP/CG/Rajasthan (@ANI_MP_CG_RJ) June 30, 2022
ಈ ಹತ್ಯೆ ಬಗ್ಗೆ ದೇಶಾದ್ಯಂತ ವ್ಯಕ್ತವಾದ ಆಕ್ರೋಶದ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಭಾವನೆಗಳನ್ನೂ ಎನ್ಐಎ ಅರ್ಥ ಮಾಡಿಕೊಳ್ಳುತ್ತದೆ ಎಂದು ಭಾವಿಸಿದ್ದೇನೆ. ಇದು ಧರ್ಮದ ಮೇಲಿನ ಎರಡು ಸಮುದಾಯಗಳ ನಡುವಿನ ಹೋರಾಟವಲ್ಲ. ಈ ಘಟನೆಯಲ್ಲಿ ಭಯೋತ್ಪಾದನೆಯ ನಂಟಿನ ಬಗ್ಗೆ ಪತ್ತೆ ಹಚ್ಚುವುದು ಮುಖ್ಯವಾಗಿದೆ. ಪ್ರತಿ ಧರ್ಮದವರೂ ಹತ್ಯೆಗಳನ್ನು ಖಂಡಿಸಬೇಕೆಂದೂ ತಿಳಿಸಿದರು. ಜೊತೆಗೆ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಸಿಎಂ ಮನವಿ ಮಾಡಿದರು.
-
We have demanded security. My father was not provided security but we should be provided. We have been assured of the same. The culprits should not be given anything less than a death sentence: Yash, son of Kanhaiya Lal who was beheaded on June 28 by two men in Udaipur, Rajasthan pic.twitter.com/9JmmVpfQON
— ANI MP/CG/Rajasthan (@ANI_MP_CG_RJ) June 30, 2022 " class="align-text-top noRightClick twitterSection" data="
">We have demanded security. My father was not provided security but we should be provided. We have been assured of the same. The culprits should not be given anything less than a death sentence: Yash, son of Kanhaiya Lal who was beheaded on June 28 by two men in Udaipur, Rajasthan pic.twitter.com/9JmmVpfQON
— ANI MP/CG/Rajasthan (@ANI_MP_CG_RJ) June 30, 2022We have demanded security. My father was not provided security but we should be provided. We have been assured of the same. The culprits should not be given anything less than a death sentence: Yash, son of Kanhaiya Lal who was beheaded on June 28 by two men in Udaipur, Rajasthan pic.twitter.com/9JmmVpfQON
— ANI MP/CG/Rajasthan (@ANI_MP_CG_RJ) June 30, 2022
ಗಲ್ಲು ಶಿಕ್ಷೆಯಾಗಲೇಬೇಕು: ಈ ಸಂದರ್ಭದಲ್ಲಿ ಕನ್ನಯ್ಯ ಲಾಲ್ ಪುತ್ರ ಯಶ್ ಮಾತನಾಡಿ, ನಮಗೆ ಭದ್ರತೆ ಕಲ್ಪಿಸಬೇಕೆಂದು ಸಿಎಂ ಬಳಿ ಮನವಿ ಮಾಡಿದ್ದೇವೆ. ನಮ್ಮ ತಂದೆಯೂ ಭದ್ರತೆ ಕೋರಿದ್ದರು. ಆದರೆ, ಅವರಿಗೆ ಸಿಕ್ಕಿರಲಿಲ್ಲ. ಈಗ ನಾವು ಭದ್ರತೆಯನ್ನೇ ಬಯಸುತ್ತಿದ್ದೇವೆ ಹಾಗೂ ತಂದೆಯ ಹಂತಕರಿಗೆ ಕನಿಷ್ಠ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಅಲ್ಲದೇ, ನಮಗೆ ಸಿಎಂ ಆರ್ಥಿಕ ನೆರವು ಕಲ್ಪಿಸಿದ್ದಾರೆ. ಅಲ್ಲದೇ, ಸರ್ಕಾರಿ ನೌಕರಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ನಮಗೆ ಅವರು ಸಹಕಾರ ಕೊಟ್ಟರೆ, ನಾವು ಅವರಿಗೆ ಸಹಕರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
-
#WATCH | Prime accused in the Udaipur beheading case presented at the Udaipur district session court in Rajasthan pic.twitter.com/gcJ9ZzQXL6
— ANI MP/CG/Rajasthan (@ANI_MP_CG_RJ) June 30, 2022 " class="align-text-top noRightClick twitterSection" data="
">#WATCH | Prime accused in the Udaipur beheading case presented at the Udaipur district session court in Rajasthan pic.twitter.com/gcJ9ZzQXL6
— ANI MP/CG/Rajasthan (@ANI_MP_CG_RJ) June 30, 2022#WATCH | Prime accused in the Udaipur beheading case presented at the Udaipur district session court in Rajasthan pic.twitter.com/gcJ9ZzQXL6
— ANI MP/CG/Rajasthan (@ANI_MP_CG_RJ) June 30, 2022
ನ್ಯಾಯಾಂಗ ಬಂಧನಕ್ಕೆ ಪಾತಕಿಗಳು: ಇತ್ತ, ಪಾತಕಿಗಳಾದ ರಿಯಾಜ್ ಅಖ್ತಾರಿ ಮತ್ತು ಗೌಸ್ ಮೊಹಮ್ಮದ್ನನ್ನು ಎನ್ಎಐ ಅಧಿಕಾರಿಗಳು ಇಂದು ಉದಯ್‌ಪುರ್ ಜಿಲ್ಲಾ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಇಬ್ಬರನ್ನೂ ಜುಲೈ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: ಛೀ ಛೀ.. ಹಲ್ಲುಜ್ಜುವ ಮೊದಲು ಮಗನಿಗೆ ಕಿಸ್ ಮಾಡಬೇಡ ಎಂದಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ!