ETV Bharat / bharat

ತ್ಯಾಜ್ಯದಿಂದ ಗಾರ್ಡನ್​ನಲ್ಲಿ ತಲೆ ಎತ್ತಿದ ವಿವಿಧ ಕಲಾಕೃತಿಗಳು - ತ್ಯಾಜ್ಯ ಬಳಸಿ ವಿವಿಧ ಕಲಾಕೃತಿ ರಚನೆ

ಚಂಡೀಗಢದ ಸೆಕ್ಟರ್ 36 ರಲ್ಲಿರುವ ಗಾರ್ಡನ್​ನಲ್ಲಿ​ ತ್ಯಾಜ್ಯ ಹಾಗೂ ಗೃಹ ಬಳಕೆಯಿಂದ ಬರುವ ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ವಿವಿಧ ರೀತಿಯ ಕಲಾಕೃತಿಗಳನ್ನು ತಯಾರಿಸಲಾಗಿದೆ.

garden
ಕಲಾ ಸಾಗರ್ ಸ್ಯಾನಿಟರಿ ಗಾರ್ಡನ್
author img

By

Published : Apr 6, 2023, 10:05 AM IST

ಚಂಡೀಗಢ (ಪಂಜಾಬ್​) : ಒಮ್ಮೆ ಬಳಕೆ ಮಾಡಿ ಬಿಸಾಕುವ ಪ್ಲಾಸ್ಟಿಕ್‌ನಂತಹ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕುವುದರಿಂದ ಪರಿಸರ ಸೌಂದರ್ಯದ ಜೊತೆಗೆ ನಗರದ ಸ್ವಚ್ಛತೆ ಸಹ ಹಾಳಾಗುತ್ತದೆ. ಆದ್ರೆ, ಚಂಡೀಗಢದ ಸೆಕ್ಟರ್ 36ರಲ್ಲಿ ಉದ್ಯಾನವನವೊಂದಿದ್ದು, ಇಲ್ಲಿ ತ್ಯಾಜ್ಯಗಳನ್ನೇ ಬಳಸಿ ವಸ್ತುಗಳನ್ನು ತಯಾರಿಸಲಾಗಿದೆ. ಕಳೆದ 25 ವರ್ಷಗಳಿಂದ ಈ ಕೆಲಸ ಮಾಡಲಾಗುತ್ತಿದೆ.

ಉದ್ಯಾನವನವನ್ನು ವಿಜಯಪಾಲ್ ಗೋಯಲ್ ವಿನ್ಯಾಸಗೊಳಿಸಿದ್ದಾರೆ. ಇವರು ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗೃಹ ಬಳಕೆಯಿಂದ ಬರುವ ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ವಿವಿಧ ರೀತಿಯ ಕಲಾಕೃತಿ ವಸ್ತುಗಳನ್ನು ರಚಿಸಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ಆದರೆ, ಕಲೆಯ ಮೇಲಿನ ಪ್ರೀತಿ ವಿಜಯಪಾಲ್ ಗೋಯಲ್ ಅವರನ್ನು ಚಂಡೀಗಢಕ್ಕೆ ಸೆಳೆಯುತ್ತಿದೆಯಂತೆ. ಹಾಗಾಗಿ, ಇಲ್ಲಿ ಕಲಾ ಸಾಗರ್ ಸ್ಯಾನಿಟರಿ ಗಾರ್ಡನ್ ಅನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ : ಕಸದಿಂದ ರಸ.. ತ್ಯಾಜ್ಯದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿದ ಶಾಲಾ ಮಕ್ಕಳು

ಕೆಲವು ದಿನ ದೆಹಲಿಯಲ್ಲಿ ಮತ್ತು ಕೆಲವು ದಿನ ಚಂಡೀಗಢದಲ್ಲಿ ಕಾಲ ಕಳೆಯುವ ವಿಜಯಪಾಲ್ ಅವರು ಈ ಉದ್ಯಾನವನ ನಿರ್ಮಿಸಲು ನೈರ್ಮಲ್ಯಕ್ಕೆ ಸಂಬಂಧಿಸಿದ ತ್ಯಾಜ್ಯ ವಸ್ತುಗಳನ್ನು ಬಳಸಿದ್ದಾರೆ. ವಾಶ್ ಬೇಸಿನ್, ಟಾಯ್ಲೆಟ್ ಸೀಟ್, ನೀರಿನ ಪೈಪ್, ನೀರಿನ ಟ್ಯಾಂಕ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಲಾಗಿದೆ. ಇವು ಎಲ್ಲಾ ಮರುಬಳಕೆ ಮಾಡಲಾಗದ ವಸ್ತುಗಳಾಗಿದ್ದು, ಲೋಡಿಂಗ್ ಸಮಯದಲ್ಲಿ ಬಿರುಕು ಅಥವಾ ಹಾನಿಗೊಳಗಾದ ವಸ್ತುಗಳನ್ನು ವಿಶೇಷವಾಗಿ ಬಳಸಲಾಗಿದೆ.

ಇದನ್ನೂ ಓದಿ : ಕಾರವಾರ ನಗರಸಭೆಯ ವಿಭಿನ್ನ ಪ್ರಯತ್ನ: ಕಸದಿಂದ ಅಲಂಕಾರಿಕ ವಸ್ತು ತಯಾರಿಕೆಗೆ‌ ಪ್ರೋತ್ಸಾಹ!

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ವಿಜಯಪಾಲ್ ಗೋಯಲ್, "ಮೊದಲಿನಿಂದಲೂ ಇತರರಿಗಿಂತ ಭಿನ್ನವಾಗಿಬೇಕೆಂಬ ಆಸೆ ಇತ್ತು. ಸ್ಯಾನಿಟರಿ ಗುತ್ತಿಗೆದಾರರಾಗಿ ಸೇವೆ ಸಲ್ಲಿಸುತ್ತಿರುವಾಗ ಇಂತಹ ವಿಭಿನ್ನ ಮಾದರಿಗಳನ್ನು ತಯಾರಿಸುವ ಆಸೆ ಬೆಳೆಸಿಕೊಂಡೆ. ಬಳಿಕ ಸ್ಯಾನಿಟರಿ ತ್ಯಾಜ್ಯ ವಸ್ತುಗಳಿಂದ ಮಾದರಿಗಳನ್ನು ತಯಾರಿಸಲು ಪ್ರಾರಂಭಿಸಿದೆ. ಇದುವರೆಗೆ ಮಟ್ಕಾ ಚೌಕ್, ವಿಮಾನಗಳು, ಫಿರಂಗಿಗಳು, ರೈಲುಗಳು, ಹಳೆಯ ದೂರವಾಣಿ ಸೇರಿದಂತೆ ಅನೇಕ ಮಾದರಿಗಳನ್ನು ತಯಾರಿಸಿದ್ದೇನೆ. ಹಲವು ಆಕಾರಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಇನ್ನೂ ಕೆಲವು 10 ನಿಮಿಷಗಳಲ್ಲಿ ಸಿದ್ಧವಾಗುತ್ತವೆ. ಇದಕ್ಕಾಗಿ ಸರ್ಕಾರದಿಂದ ಭೂಮಿ ನೀಡಲಾಗಿದೆ" ಎಂದರು.

ಇದನ್ನೂ ಓದಿ : ಕಸದಲ್ಲಿ ಕಲಾಕೃತಿ ರಚಿಸಿದ ಆರೋಗ್ಯ ಸಿಬ್ಬಂದಿ.. ಮಹಿಳೆಯ ಮನೆಯಂಗಳದಲ್ಲಿ ಅರಳಿತು ‘ಕಲಾವನ’

"ಮೊದಲು ಗಾರ್ಡನ್​ಗೆ ತುಂಬಾ ಜನ ಬರುತ್ತಿದ್ದರು. ಈಗ ಆಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಗೆ ಆಗಮಿಸುವವರಿಗೆ ತ್ಯಾಜ್ಯ ವಸ್ತುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಕಲಿಸಲಾಗುತ್ತದೆ. ಇದರಿಂದ ತ್ಯಾಜ್ಯ ಮತ್ತು ಅನಗತ್ಯ ವಸ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬಹುದು ಮತ್ತು ಸ್ಮಾರ್ಟ್ ರೀತಿಯಲ್ಲಿ ವಿಲೇವಾರಿ ಮಾಡಬಹುದು. ಈ ಉದ್ಯಾನವನ ನಗರದಿಂದ ಸ್ವಲ್ಪ ದೂರದಲ್ಲಿರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಬಹುತೇಕರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಆರಂಭದ ಅವಧಿಯಲ್ಲಿ ಸರ್ಕಾರದ ಬೆಂಬಲ ಸಿಕ್ಕಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಈಗ ಯಾರೂ ಇತ್ತ ಗಮನ ಹರಿಸುತ್ತಿಲ್ಲ" ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.