ETV Bharat / bharat

ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಫಿಲಿಪೈನ್ಸ್​ನಿಂದ ಗಡಿಪಾರು: ಸಿಬಿಐ, ಐಬಿ ವಿಚಾರಣೆ - ಸಿಬಿಐ, ಐಬಿ ಸುರೇಶ್ ಪೂಜಾರಿ ವಿಚಾರಣೆ

Gangster Suresh Pujari deported to India: ಮುಂಬೈ ಬಳಿಯ ಥಾಣೆ, ಕಲ್ಯಾಣ್, ಉಲ್ಲಾಸನಗರ ಮತ್ತು ಡೊಂಬಿವಿಲಿ ಹಾಗೂ ಕರ್ನಾಟಕದಲ್ಲಿ ಹಲವೆಡೆ ನಡೆದ ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ.

Gangster Suresh Pujari deported to India from Philippines; to be brought to Mumbai
ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಫಿಲಿಪ್ಪಿನ್ಸ್​ನಿಂದ ಗಡಿಪಾರು: ಸಿಬಿಐ, ಐಬಿ ವಿಚಾರಣೆ
author img

By

Published : Dec 15, 2021, 10:12 AM IST

ಮುಂಬೈ: ಕರ್ನಾಟಕ ಮತ್ತು ಮುಂಬೈನಲ್ಲಿ ನಡೆದ ಹಲವಾರು ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್​ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮುಂಬೈ ಬಳಿಯ ಥಾಣೆ, ಕಲ್ಯಾಣ್, ಉಲ್ಲಾಸನಗರ ಮತ್ತು ಡೊಂಬಿವಿಲಿಯಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಸುರೇಶ್​ ಪೂಜಾರಿಯನ್ನು ಮಂಗಳವಾರ ತಡರಾತ್ರಿ ಭಾರತಕ್ಕೆ ಕರೆತರಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸುರೇಶ್ ಪೂಜಾರಿ ಬಂದಿಳಿದ ನಂತರ ಐಬಿ ಮತ್ತು ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಐಬಿ ಮತ್ತು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ ನಂತರ ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುರೇಶ್ ಪೂಜಾರಿಯನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಈಗಾಗಲೇ ಮುಂಬೈ ಅಪರಾಧ ವಿಭಾಗದ ತಂಡವೊಂದು ದೆಹಲಿಗೆ ತೆರಳಿದೆ.

ಮುಂಬೈ ಮತ್ತು ಥಾಣೆ ಪೊಲೀಸರು ಕ್ರಮವಾಗಿ 2017 ಮತ್ತು 2018ರಲ್ಲಿ ಸುರೇಶ್ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು.15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೂಜಾರಿಯನ್ನು ಅಕ್ಟೋಬರ್‌ನಲ್ಲಿ ಫಿಲಿಪೈನ್ಸ್‌ನಲ್ಲಿ ಬಂಧಿಸಲಾಗಿತ್ತು.

ಸುರೇಶ್ ಪೂಜಾರಿ ವಿರುದ್ಧ ಥಾಣೆಯಲ್ಲಿ ಒಟ್ಟು 23 ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಆತ ಗ್ಯಾಂಗ್​ಸ್ಟರ್ ರವಿ ಪೂಜಾರಿಯ ಹತ್ತಿರದ ಸಂಬಂಧಿಯಾಗಿದ್ದನು. 2007ರಲ್ಲಿ ಆತ ರವಿ ಪೂಜಾರಿಯಿಂದ ದೂರ ಸರಿದು ವಿದೇಶಕ್ಕೆ ಪರಾರಿಯಾಗಿದ್ದನು.

ಇದನ್ನೂ ಓದಿ: ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣ: ಅಮೆರಿಕ, ಇರಾನ್​, ಆಫ್ಘನ್​ಗೆ ಪತ್ರ ಬರೆಯಲಿರುವ ಎನ್​ಐಎ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.