ETV Bharat / bharat

ಪ್ರೀತಿಯ ಹೆಸರಲ್ಲಿ ಬಾಲಕಿಯ ಮೇಲೆ ಗ್ಯಾಂಗ್​ರೇಪ್ - ಪ್ರೀತಿಯ ಹೆಸರಲ್ಲಿ ಬಾಲಕಿಯ ಮೇಲೆ ಗ್ಯಾಂಗ್​ರೇಪ್

14 ವರ್ಷದ 8ನೇ ತರಗತಿಯಲ್ಲಿ ಓದುತ್ತಿದ್ದ ತಂದೆ ತಾಯಿ ಇಲ್ಲದ ಅಪ್ರಾಪ್ತೆ ವಿಜಯವಾಡದಲ್ಲಿ ತನ್ನ ಅಜ್ಜನೊಂದಿಗೆ ನೆಲೆಸಿದ್ದಾಳೆ. ಈ ವರ್ಷ ಆಕೆ 9ನೇ ತರಗತಿಗಾಗಿ ಮಚಲಿಪಟ್ಟಣದ ಹಾಸ್ಟೆಲ್ ಒಂದಕ್ಕೆ ಸೇರಿದ್ದಳು. ವಿಜಯವಾಡದಲ್ಲಿ ಇರುವಾಗಲೇ ಸಾಯಿ ಎಂಬಾತ ಆಕೆಯನ್ನು ಹಿಂಬಾಲಿಸುತ್ತಿದ್ದ.

ಪ್ರೀತಿಯ ಹೆಸರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್​ರೇಪ್
Gangrape of a minor girl in the name of love
author img

By

Published : Oct 14, 2022, 12:43 PM IST

ವಿಜಯವಾಡ (ಆಂಧ್ರ ಪ್ರದೇಶ): ಪ್ರೀತಿಯ ಹೆಸರಲ್ಲಿ ಯುವಕನೊಬ್ಬ ಮುಗ್ಧ ಬಾಲಕಿಯೊಬ್ಬಳಿಗೆ ವಂಚಿಸಿದ ಘಟನೆ ನಡೆದಿದೆ. ತಂದೆ ತಾಯಿ ಇಬ್ಬರೂ ತೀರಿಕೊಂಡ ನಂತರ ಅಜ್ಜನ ಬಳಿ ಇರುತ್ತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ವಂಚಕ ಯುವಕ ಹಲವಾರು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ, ತನ್ನ ಸ್ನೇಹಿತರಿಗೂ ಆಕೆಯನ್ನು ಬಳಸಿಕೊಳ್ಳಲು ಅವಕಾಶ ಮಾಡಿದ್ದಾನೆ.

ತುಂಬಾ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿ ವೈದ್ಯರ ಬಳಿ ಹೋದಾಗ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ವಿಜಯವಾಡ ಪರಿಸರದಲ್ಲಿ ಜನಾಕ್ರೋಶ ಹೆಚ್ಚಾಗುತ್ತಿದೆ.

ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ಮೂವರು ಯುವಕರು ಅದನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತ ಬೇಕಾದಾಗಲೆಲ್ಲ ಬಾಲಕಿಯನ್ನು ಕಾಮತೃಷೆಗೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾರೆ.

14 ವರ್ಷದ 8ನೇ ತರಗತಿಯಲ್ಲಿ ಓದುತ್ತಿದ್ದ ತಂದೆ ತಾಯಿ ಇಲ್ಲದ ಬಾಲಕಿ ವಿಜಯವಾಡದಲ್ಲಿ ತನ್ನ ಅಜ್ಜನೊಂದಿಗೆ ನೆಲೆಸಿದ್ದಾಳೆ. ಈ ವರ್ಷ ಆಕೆ 9ನೇ ತರಗತಿಗಾಗಿ ಮಚಲಿಪಟ್ಟಣದ ಹಾಸ್ಟೆಲ್ ಒಂದಕ್ಕೆ ಸೇರಿದ್ದಳು. ವಿಜಯವಾಡದಲ್ಲಿ ಇರುವಾಗಲೇ ಸಾಯಿ ಎಂಬಾತ ಆಕೆಯನ್ನು ಹಿಂಬಾಲಿಸುತ್ತಿದ್ದ. ಬೈಕ್ ಮೇಲೆ ಶಾಲೆಗೆ ಬಿಡುವ ನೆಪದಲ್ಲಿ ಸ್ನೇಹ ಸಂಪಾದಿಸಿದ್ದ ಆತ ಬಾಲಕಿಯ ಮೇಲೆ ರೇಪ್ ಮಾಡುತ್ತಿದ್ದ ಎನ್ನಲಾಗಿದೆ.

ತನ್ನ ಸ್ನೇಹಿತರಾದ ಬಬ್ಲು ಮತ್ತು ಪ್ರಕಾಶ್ ಜೊತೆ ಸೇರಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ವೈದ್ಯರಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆದಿತ್ತು. ಬಾಲಕಿ ಗರ್ಭಿಣಿಯಾಗಿರುವುದು ತಿಳಿಯುತ್ತಿದ್ದಂತೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀ ವಿರುದ್ಧ ಮತ್ತೊಂದು ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.