ETV Bharat / bharat

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಪಾರ್ಟಿ ನಂತರ ಸ್ನೇಹಿತರಿಂದಲೇ ಕೃತ್ಯ

ಮನೆಯಲ್ಲಿ ಪಾರ್ಟಿ ಮಾಡಿದ ನಂತರ ಯುವತಿ ಪ್ರಜ್ಞೆ ತಪ್ಪಿಸಿ, ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಉಂಡ್ರಿ ಪ್ರದೇಶದಲ್ಲಿ ನಡೆದಿದೆ.

gang rape
gang rape
author img

By

Published : Oct 14, 2022, 1:51 PM IST

ಪುಣೆ (ಮಹಾರಾಷ್ಟ್ರ): ಇಲ್ಲಿನ ಉಂಡ್ರಿ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವತಿಯೊಬ್ಬರ ಮುಖಕ್ಕೆ ಎಚ್ಚರ ತಪ್ಪುವ ಸ್ಪ್ರೇ ಸಿಂಪಡಿಸಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೊಂಡ್ವಾ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಿದ್ದಾರೆ.

ಅಕ್ಟೋಬರ್ 9 ರಂದು ಉಂಡ್ರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 11 ಗಂಟೆಯ ನಡುವೆ ಈ ಘಟನೆ ನಡೆದಿದೆ. ರಾಕೇಶ್ ಸತೀಶ್ ಅಧವ್​​, ಮೊಹಮ್ಮದ್ ಶಹನವಾಜುದ್ದೀನ್ ಸರ್ವವುದ್ದೀನ್, ಮೊಹಮ್ಮದ್ ಶರೀಫ್​ ನವಾಜ್ ಸರ್ವರುದ್ದೀನ್ ಬಂಧಿತ ಆರೋಪಿಗಳು.ಈ ಸಂಬಂಧ 37 ವರ್ಷದ ಮಹಿಳೆಯೊಬ್ಬರು ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತ ಮಹಿಳೆ ಉಂಡ್ರಿಯಲ್ಲಿ ವಾಸಿಸುತ್ತಿದ್ದರು. ಅಕ್ಟೋಬರ್ 9 ರಂದು ಸಂಜೆ 7 ಗಂಟೆ ಸುಮಾರಿಗೆ ಅವರು ತಮ್ಮ ಕೋಣೆಯಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಗೆ ಆಕೆಯ ಗೆಳತಿಯರು ಮತ್ತು ಮೂವರು ಆರೋಪಿಗಳೂ ಬಂದಿದ್ದರು. ಪಾರ್ಟಿ ತುಂಬಾ ಹೊತ್ತು ನಡೆದಿದ್ದು, ಬಳಿಕ ಯುವತಿ ಬಾಗಿಲು ತೆರೆದು ಹಾಗೆ ಮಲಗಿದ್ದಾಳೆ.

ಇದನ್ನೂ ಓದಿ: ಪ್ರೀತಿಯ ಹೆಸರಲ್ಲಿ ಬಾಲಕಿಯ ಮೇಲೆ ಗ್ಯಾಂಗ್​ರೇಪ್

ಈ ವೇಳೆ ಬಂದ ಮೂವರು ಆರೋಪಿಗಳು, ಆಕೆಯ ಪ್ರಜ್ಞೆ ತಪ್ಪಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗ್ತಿದೆ. ಆಕೆಗೆ ಈ ಘಟನೆಯಾಗಿ ಒಂದೂವರೆ ದಿನದ ನಂತರ ಪ್ರಜ್ಞೆ ಬಂದಿದೆ. ಬಳಿಕ ಆಕೆ ತನ್ನ ಮೇಲೆ ಅತ್ಯಾಚಾರ ಆಗಿರುವುದನ್ನು ಖಚಿತಪಡಿಸಿಕೊಂಡು, ಕೂಡಲೇ ದೂರು ದಾಖಲಿಸಿದ್ದಾಳೆ. ಈ ವೇಳೆ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.