ಮೇಡ್ಚಲ್, ತೆಲಂಗಾಣ: ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಾಣೆಯಾಗುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ತ್ರೀಯರ ವಿರುದ್ಧ ದೌರ್ಜನ್ಯಗಳನ್ನು ತಡೆಯಲು ಎಷ್ಟೇ ಕಾನೂನುಗಳು ಬಂದರೂ, ಸಾರ್ವಜನಿಕ ಚರ್ಚೆಗಳು ನಡೆದರೂ ಉಪಯೋಗಕ್ಕೆ ಬರದಂತಾಗಿವೆ. ದಿನಕ್ಕೆ ಕನಿಷ್ಟ ಒಂದು ಅತ್ಯಾಚಾರ ಪ್ರಕರಣವಾದರೂ ಬೆಳಕಿಗೆ ಬರುವುದು ಸಾಮಾನ್ಯ ಎಂಬಂತಾಗಿರುವು ವಿಷಾದನೀಯವಾಗಿದೆ.
ತೆಲಂಗಾಣ ಜಿಲ್ಲೆಯ ಮೇಡ್ಚಲ್ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ದುಂಡಿಗಲ್ನಲ್ಲಿ ಮಧ್ಯರಾತ್ರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಶೋಲಾಪುರದಿಂದ ಬಂದಿದ್ದ 30 ವರ್ಷದ ಮಹಿಳೆಯನ್ನು ಮಧ್ಯರಾತ್ರಿ ಬಾರೊಂದರ ಹಿಂದಿನ ಖಾಲಿ ಜಾಗಕ್ಕೆ ಬಲವಂತವಾಗಿ ಎಳೆದೊಯ್ದು ನಾಲ್ವರು ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರ ಆರೋಪದಲ್ಲಿ ನರಸಿಂಹ (23), ಇಮಾಮ್ (20), ಕುದ್ದೂಸ್ (21) ಮತ್ತು ಉಮ್ರುದ್ದೀನ್ (21) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ದುಂಡಿಗಲ್ ಪೊಲೀಸ್ ಠಾಣೆ ಎದುರಿರುವ ಕೊಳಗೇರಿ ನಿವಾಸಿಗಳು ಎಂದು ಗುರ್ತಿಸಲಾಗಿದ್ದು, ಅವರೆಲ್ಲರೂ ಆಟೋ ಚಾಲಕರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಿಟೆಕ್ ವಿದ್ಯಾರ್ಥಿನಿ ಕೊಲೆ ಕೇಸ್: ಅಪರಾಧಿಗೆ ಮರಣದಂಡನೆ