ETV Bharat / bharat

ಮುಂಬೈನಲ್ಲಿ ಗಣೇಶ ನಿಮಜ್ಜನಕ್ಕೆ ಕೃತಕ ಕೊಳಗಳು: ಒಂದೇ ದಿನ 55 ಸಾವಿರ ಮೂರ್ತಿ ನಿಮಜ್ಜನ

ಮುಂಬೈನಲ್ಲಿ ನಿನ್ನೆ ಒಂದೇ ದಿನ ಒಟ್ಟು 55 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ. ಮಹಾ ನಗರದಲ್ಲಿ ಸದ್ಯ ಗಣೇಶ ನಿಮಜ್ಜನಕ್ಕಾಗಿ 162 ಕೃತಕ ಕೊಳಗಳನ್ನು ನಿರ್ಮಿಸಲಾಗಿದ್ದು, 73 ನೈಸರ್ಗಿಕ ನಿಮಜ್ಜನ ಸ್ಥಳಗಳಿವೆ.

55,000 Ganesha idols immersed in one day in Mumbai
ಮುಂಬೈನಲ್ಲಿ ಒಂದೇ ದಿನ 55 ಸಾವಿರ ಗಣೇಶ ಮೂರ್ತಿ ನಿಮಜ್ಜನ
author img

By

Published : Sep 2, 2022, 11:55 AM IST

ಮುಂಬೈ (ಮಹಾರಾಷ್ಟ್ರ): ಮುಂಬೈನಲ್ಲಿ ಗಣೇಶ ಮೂರ್ತಿಗಳ ನಿಮಜ್ಜನಕ್ಕಾಗಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕೃತಕ ಕೊಳಗಳನ್ನು ನಿರ್ಮಾಣ ಮಾಡಿದೆ. ಮಾಲಿನ್ಯವನ್ನು ಕಡಿಮೆ ಮಾಡುವವಂತೆ ಜನರನ್ನು ಉತ್ತೇಜಿಸುವ ಕ್ರಮವಾಗಿ ಕೃತಕ ಹೊಂಡಗಳು ಅಥವಾ ಕೊಳಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ನಿಂದ ತಯಾರಿಸಿದ ಗಣೇಶನ ವಿಗ್ರಹಗಳನ್ನು ವಿಸರ್ಜಿಸುವಂತೆ ಬಿಎಂಸಿ ನಾಗರಿಕರನ್ನು ಕೇಳಿಕೊಂಡಿದೆ. ಮುಂಬೈನಲ್ಲಿ ಪ್ರಸ್ತುತ 162 ಕೃತಕ ಕೊಳಗಳು ಮತ್ತು 73 ನೈಸರ್ಗಿಕ ನಿಮಜ್ಜನ ಸ್ಥಳಗಳು ಲಭ್ಯವಿವೆ ಎಂದು ಬಿಎಂಸಿ ತಿಳಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಲಿಕೆ ಸಹಾಯಕ ಆಯುಕ್ತ ರಮಾಕಾಂತ ಬಿರಾದಾರ್, 162 ಕೃತಕ ಕೊಳಗಳು, 73 ನೈಸರ್ಗಿಕ ನಿಮಜ್ಜನ ಸ್ಥಳಗಳಿವೆ. ಈ ಎಲ್ಲ ಸ್ಥಳಗಳಲ್ಲಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಗಣೇಶ ಚತುರ್ಥಿ ಆಗಸ್ಟ್ 31 ರಂದು ಪ್ರಾರಂಭವಾಗಿದ್ದು, ಹತ್ತು ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ 9 ರಂದು ಗಣಪನ ನಿಮಜ್ಜನದೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ ಎಂದರು.

ಒಂದೂವರೆ ದಿನದ ಗಣಪತಿ ಹಬ್ಬದ ನಿಮಿತ್ತ ನಿನ್ನೆ ಮುಂಬೈನಲ್ಲಿ 22,687 ಗಣಪತಿ ಮೂರ್ತಿಗಳನ್ನು ನಿಮಜ್ಜನ ಮಾಡಲಾಯಿತು. ಜಿಲ್ಲಾಧಿಕಾರಿಗಳ ಪ್ರಕಾರ, ನಿನ್ನೆ ಮುಂಬೈನಲ್ಲಿ ಒಟ್ಟು 55,623 ವಿಗ್ರಹಗಳನ್ನು ನಿಮಜ್ಜನ ಮಾಡಲಾಗಿದೆ. ಅದರ ಪೈಕಿ ಕೃತಕ ಕೊಳಗಳಲ್ಲಿ 22,687 ಗಣಪತಿ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ. ಮುಂಬೈನ ಪ್ರಖ್ಯಾತ ಲಾಲ್‌ಬಾಗ್ ಚಾ ರಾಜಾ ಗಣೇಶನ ದರ್ಶನಕ್ಕೆ ದೇಶದ ಎಲ್ಲ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಈ ವರ್ಷ, ಜಿಯೊ ಮಾರ್ಟ್ ಮತ್ತು ಪೇಟಿಎಂ ಸಹಯೋಗದೊಂದಿಗೆ, ಗಣೇಶನ ಪ್ರಸಾದವನ್ನು ಆನ್‌ಲೈನ್‌ನಲ್ಲಿ ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಏರ್ಪಾಡು ಮಾಡಲಾಗಿದೆ. ಜಿಯೊ ಮಾರ್ಟ್​ನಲ್ಲಿ ಎರಡು ಲಡ್ಡುಗಳ ರೂಪದಲ್ಲಿ ಪ್ರಸಾದವನ್ನು ಆರ್ಡರ್ ಮಾಡಬಹುದು. ಮುಂಬೈ, ನವಿ ಮುಂಬೈ ಮತ್ತು ಥಾಣೆ ಪ್ರದೇಶಗಳಿಗೆ ಮಾತ್ರ ಈ ಆರ್ಡರ್‌ಗಳನ್ನು ಬುಕ್ ಮಾಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.