ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಜಿ20 ಶೃಂಗಸಭೆ ಆಯೋಜಿಸಲಾಗಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಭದ್ರತಾ ವಿಷಯದಲ್ಲೂ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ಈಗಾಗಲೇ ರಾಜಧಾನಿಗೆ ವಿವಿಧ ರಕ್ಷಣಾಪಡೆಗಳು ಆಗಮಿಸಿವೆ. ಪ್ರಮುಖವಾಗಿ 19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ನಿಂದ ಸಭೆಗೆ ಆಗಮಿಸುತ್ತಿರುವ ವಿವಿಐಪಿಗಳು ಮತ್ತು ಪ್ರತಿನಿಧಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಸ್ರೇಲಿ ನಿರ್ಮಿತ Tavor X95 ರೈಫಲ್ ಹೊಂದಿರುವ ಉನ್ನತ ತರಬೇತಿ ಪಡೆದುಕೊಂಡಿರುವ ಭದ್ರತಾ ಸಿಬ್ಬಂದಿಗಳು G20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ VVIPಗಳು ಮತ್ತು ಪ್ರತಿನಿಧಿಗಳಿಗೆ ರಕ್ಷಣೆ ಒದಗಿಸಲಿದ್ದಾರೆ.
-
#WATCH | Delhi: Anti Sabotage check mock drill was conducted ahead of the G20 Summit.
— ANI (@ANI) September 6, 2023 " class="align-text-top noRightClick twitterSection" data="
Commanding officer of 202 Counter Explosives Device unit Col SS Bose says, "The major role which has been given to us is the AAS(Area Anti-Sabotage) cover. The AAS cover is basically in three… pic.twitter.com/VhJyVWu802
">#WATCH | Delhi: Anti Sabotage check mock drill was conducted ahead of the G20 Summit.
— ANI (@ANI) September 6, 2023
Commanding officer of 202 Counter Explosives Device unit Col SS Bose says, "The major role which has been given to us is the AAS(Area Anti-Sabotage) cover. The AAS cover is basically in three… pic.twitter.com/VhJyVWu802#WATCH | Delhi: Anti Sabotage check mock drill was conducted ahead of the G20 Summit.
— ANI (@ANI) September 6, 2023
Commanding officer of 202 Counter Explosives Device unit Col SS Bose says, "The major role which has been given to us is the AAS(Area Anti-Sabotage) cover. The AAS cover is basically in three… pic.twitter.com/VhJyVWu802
ದೆಹಲಿಯ ವಿವಿಧ ಸ್ಥಳಗಳು, ಹೋಟೆಲ್‌ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ಬುಧವಾರ ತಿಳಿಸಿವೆ. ಸಭೆಗೆ ಆಗಮಿಸಲಿರುವ ವಿವಿಐಪಿಗಳು ಮತ್ತು ಗಣ್ಯರನ್ನು ದೆಹಲಿಯ ವಿವಿಧ ಐಷಾರಾಮಿ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇವರು ಉಳಿದು ಕೊಳ್ಳಲಿರುವ ಹೋಟೆಲ್‌ಗಳ ಸುತ್ತಲೂ ಮೂರು ಹಂತದ ಭದ್ರತೆ ವ್ಯವಸ್ತೆ ಇರಲಿದೆ. ಇವುಗಳಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿನ ಮೀಸಲು ಪೊಲೀಸ್ ಪಡೆಯ (CRPF) ವಿವಿಐಪಿ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದಿರುವ 1,000ಕ್ಕೂ ಹೆಚ್ಚು ಜನರ ವಿಶೇಷ ರಕ್ಷಣಾ ತಂಡವು ಕಾವಲಿನಲ್ಲಿರಲಿದೆ.
ನಿಯೋಜನೆಗೊಳ್ಳುವ ವಿಶೇಷ ರಕ್ಷಣಾ ಪಡೆಗಳು ಇಸ್ರೇಲ್ ನಿರ್ಮಿತ ಟಾವರ್ ಎಕ್ಸ್ 95 ರೈಫಲ್ ಹೊಂದಿರಲಿದ್ದಾರೆ. ಈ ರೈಫಲ್ನ ವಿಶೇಷತೆ ಎಂದರೆ ಅಸಾಲ್ಟ್ ರೈಫಲ್ಸ್ ಕಾರ್ಬೈನ್ ಅಥವಾ ಸಬ್ ಮೆಷಿನ್ಗನ್, ಆಗಿಯೂ ಬಳಸಬಹುದಾಗಿದೆ. ಈ ರೈಫಲ್ ಅನ್ನು ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಬಳಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ, ಸಿಆರ್ಪಿಎಫ್ನ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ತಂಡವು ನಕ್ಸಲೀಯರ ವಿರುದ್ಧ ಈ ಮೂರು ಸಾಮರ್ಥ್ಯದ ರೈಫಲ್ ಗಳನ್ನು ಬಳಸುತ್ತದೆ.
-
#WATCH | Preparedness Initiative taken by DIAL (Delhi International Airport Limited) at Delhi Airport ahead of the G20 Summit
— ANI (@ANI) September 6, 2023 " class="align-text-top noRightClick twitterSection" data="
The G20 Leaders’ Summit will be held in New Delhi on September 9-10 pic.twitter.com/AFKDOiGpdh
">#WATCH | Preparedness Initiative taken by DIAL (Delhi International Airport Limited) at Delhi Airport ahead of the G20 Summit
— ANI (@ANI) September 6, 2023
The G20 Leaders’ Summit will be held in New Delhi on September 9-10 pic.twitter.com/AFKDOiGpdh#WATCH | Preparedness Initiative taken by DIAL (Delhi International Airport Limited) at Delhi Airport ahead of the G20 Summit
— ANI (@ANI) September 6, 2023
The G20 Leaders’ Summit will be held in New Delhi on September 9-10 pic.twitter.com/AFKDOiGpdh
ಶೃಂಗಸಭೆಯ ಸಮಯದಲ್ಲಿ ಕನಿಷ್ಠ 1,300 ವಿಶೇಷ ತರಬೇತಿ ಪಡೆದ ಸಿಬ್ಬಂದಿಯನ್ನು ಪ್ರಗತಿ ಮೈದಾನದಲ್ಲಿ ನಿಯೋಜಿಸಲಾಗುವುದು. ಹಾಗೇ ಬಿಳಿ ಉಡುಪಿನಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಪಿಸ್ತೂಲ್‌ಗಳೊಂದಿಗೆ ಇವರು ಶಸ್ತ್ರಸಜ್ಜಿತರಾಗಿರಲಿದ್ದು, ವಿದೇಶ ಪ್ರತಿನಿಧಿಗಳಿಗೆ ರಕ್ಷಣೆ ನೀಡಲಿದ್ದಾರೆ.
ಮೂರನೇ ಮೂರನೇ ಹಂತದ ಭದ್ರತಾ ವ್ಯವಸ್ಥೆಯಲ್ಲಿ MP5 ಕಾರ್ಬೈನ್ ರೈಫಲ್ನೊಂದಿಗೆ ದೆಹಲಿ ಪೊಲೀಸ್ ಸಿಬ್ಬಂದಿ ರಕ್ಷಣೆ ಕಾರ್ಯದಲ್ಲಿರಲಿದ್ದಾರೆ. ಸುಮಾರು 4,500 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಸೇರಿದಂತೆ ಬಹುತೇಕ ಎಲ್ಲ ಅರೆಸೇನಾ ಪಡೆಗಳು ಕಳೆದ ಹಲವು ದಿನಗಳಿಂದ ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತಾ ಕಸರತ್ತು ನಡೆಸುತ್ತಿವೆ. ವಿದೇಶಿ ಪ್ರತಿನಿಧಿಗಳಿಗೆ ರಕ್ಷಣೆ ನೀಡುವಲ್ಲಿ ಎನ್‌ಎಸ್‌ಜಿ ಕೆ9 ಸ್ಕ್ವಾಡ್‌ನ ಸಹಾಯವನ್ನೂ ಪಡೆಯಲಾಗುತ್ತಿದೆ. ಶ್ವಾನ ಘಟಕವನ್ನು ಕೂಡ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಜಿ20 ಶೃಂಗಸಭೆಗೆ ಎಲ್ಲ ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಿದ ಭಾರತ ಸರ್ಕಾರ : ಕೇದಾರನಾಥ್ ಧಾಮ್ ಹೆಲಿ ಸೇವೆ ಸ್ಥಗಿತ