ETV Bharat / bharat

G20 Summit: ಪುಟಿನ್​, ಜಿನ್​ಪಿಂಗ್ ಅನುಪಸ್ಥಿತಿಯಲ್ಲಿ G20 ಶೃಂಗಸಭೆ; ಒಮ್ಮತದ ನಿರ್ಧಾರಕ್ಕೆ ಆಗುತ್ತಾ ಅಡ್ಡಿ?

ಸೆಪ್ಟೆಂಬರ್​ 9- 10 ರಂದು ನವದೆಹಲಿಯಲ್ಲಿ ಮಹತ್ವದ ಜಿ-20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಎಲ್ಲ ತಯಾರಿಗಳು ಮುಗಿದಿವೆ. G20 ಸದಸ್ಯರು ಜಾಗತಿಕ GDPಯ ಶೇ 85ರಷ್ಟು ಪಾಲು ಹೊಂದಿವೆ, ಅಂತಾರಾಷ್ಟ್ರೀಯ ವ್ಯಾಪಾರದ ಶೇ 75ರಷ್ಟು ಹಾಗೂ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಈ 20 ರಾಷ್ಟ್ರಗಳು ಪ್ರತಿನಿಧಿಸುತ್ತವೆ.

G20 Summit: Absence of Xi Jinping, and Vladimir Putin may lead to a lack of consensus on economic agenda
G20 Summit: ಪುಟಿನ್​, ಜಿನ್​ಪಿಂಗ್ ಅನುಪಸ್ಥಿತಿಯಲ್ಲಿ G20 ಶೃಂಗಸಭೆ; ಒಮ್ಮತದ ನಿರ್ಧಾರಕ್ಕೆ ಆಗುತ್ತಾ ಅಡ್ಡಿ?
author img

By ETV Bharat Karnataka Team

Published : Sep 7, 2023, 8:38 PM IST

ನವದೆಹಲಿ: ವಿಶ್ವ ಆರ್ಥಿಕತೆ, ರಷ್ಯಾ - ಉಕ್ರೇನ್​ ಯುದ್ಧ, ಹವಾಮಾನ ಬದಲಾವಣೆ ಸೇರಿದಂತೆ ಜಗತ್ತನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ವಿಶ್ವದ ಅಗ್ರ ಇಪ್ಪತ್ತು ಆರ್ಥಿಕತೆಗಳ ನಾಯಕರು ಈ ವಾರಾಂತ್ಯದಲ್ಲಿ ನವದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ. ಈ ಮಹತ್ವದ ಹಾಗೂ ಭಾರತದಲ್ಲಿ ನಡೆಯುತ್ತಿರುವ ಮೊದಲ ಸಭೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಗೈರಾಗುತ್ತಿದ್ದಾರೆ. ಹೀಗಾಗಿ ಜಿ-20ಯ ಉತ್ಸಾಹ ಸ್ಪಲ್ಪ ಮಟ್ಟಿಗೆ ಕುಸಿದಂತೆ ಕಾಣುತ್ತಿದೆ. ಏಕೆಂದರೆ ಇವುಗಳ ಸರ್ವೋಚ್ಚ ನಾಯಕರ ಅನುಪಸ್ಥಿತಿಯಲ್ಲಿ ಒಮ್ಮತ ರೂಪಿಸುವುದು ಸವಾಲಿನ ಕೆಲಸವಾಗಬಹುದು.

ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಇತರ ಪ್ರಮುಖ ವಿಶ್ವ ನಾಯಕರೆಂದರೆ ಅದು ಅಮೆರಿಕದ ಅಧ್ಯಕ್ಷ ಜೋ ಬೈಡನ್​, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಸೌದಿ ಅರೇಬಿಯಾದ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಜಪಾನ್‌ನ ಫ್ಯೂಮಿಯೊ ಕಿಶಿಡಾ ಸೇರಿ ಇನ್ನಿತರ ನಾಯಕರಾಗಿದ್ದಾರೆ. ಆದಾಗ್ಯೂ, ಕ್ಸಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಬದಲಿಗೆ ಚೀನಾದ ಪ್ರಧಾನಿ ಲಿ ಕಿಯಾಂಗ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಲ್ಲಿನ ಸರ್ಕಾರಗಳ ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿ ಜಿ- 20 ಕಾರ್ಯನಿರ್ವಹಿಸಲಿದೆ. ಜಾಗತಿಕ ಆರ್ಥಿಕತೆ, ಅದು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಸೂಚಿಸಲು ಈ ಜಿ-20 ಸಭೆ ನಿರ್ಣಾಯಕ ಪಾತ್ರ ವಹಿಸಲಿದೆ. G20 ರಾಷ್ಟ್ರಗಳು ವಿಶ್ವದ ಪ್ರಮುಖ ಮತ್ತು ವ್ಯವಸ್ಥಿತವಾಗಿರುವ ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ . G20 ಸದಸ್ಯರು ಜಾಗತಿಕ GDPಯ ಶೇ 85ರಷ್ಟು ಪಾಲು ಹೊಂದಿವೆ, ಅಂತಾರಾಷ್ಟ್ರೀಯ ವ್ಯಾಪಾರದ ಶೇ 75ರಷ್ಟು ಹಾಗೂ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಈ 20 ರಾಷ್ಟ್ರಗಳೇ ಪ್ರತಿನಿಧಿಸುತ್ತವೆ.

G20 ರಾಷ್ಟ್ರಗಳು ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಒಳಗೊಂಡಿರುವ ರಾಷ್ಟ್ರಗಳಾಗಿವೆ. ಅಮೆರಿಕ ದೊಡ್ಡ ಆರ್ಥಿಕತೆ ಹೊಂದಿರುವ ಮೊದಲ ರಾಷ್ಟ್ರವಾದರೆ, ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಚೀನಾ ಹೊಂದಿದೆ. ಇನ್ನು ಕ್ರಮವಾಗಿ ಜಪಾನ್, ಜರ್ಮನಿ ಮತ್ತು ಭಾರತ ಮೂರನೇ, ನಾಲ್ಕನೇ ಮತ್ತು ಐದನೇ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳಾಗಿವೆ. ಜಿ-20 ಆರ್ಥಿಕ ಒಕ್ಕೂಟವು ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಟಲಿ, ಕೆನಡಾ ಬ್ರೆಜಿಲ್, ರಷ್ಯಾ ಮತ್ತು ದಕ್ಷಿಣ ಕೊರಿಯಾದಂತಹ ಇತರ ಉನ್ನತ ಆರ್ಥಿಕತೆಗಳನ್ನು ಒಳಗೊಂಡಿರುವ ರಾಷ್ಟ್ರಗಳನ್ನೂ ಸಹ ಒಳಗೊಂಡಿದೆ. ಸೌದಿ ಅರೇಬಿಯಾ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಮೆಕ್ಸಿಕೋ ಮತ್ತು ಯುರೋಪಿಯನ್ ಒಕ್ಕೂಟದಂತಹ ಇತರ ಪ್ರಮುಖ ದೇಶಗಳನ್ನು ಸಹ ಜಿ-20 ಒಕ್ಕೂಟ ಒಳಗೊಂಡಿದೆ.

ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿ: ಚೀನಾ ದೇಶದ ಚುಕ್ಕಾಣಿ ಹಿಡಿದ ನಂತರ ಜಿನ್​ಪಿಂಗ್​, ತಪ್ಪಿಸಿಕೊಳ್ಳುತ್ತಿರುವ ಮೊದಲ G20 ಶೃಂಗಸಭೆ ಇದಾಗಿದೆ. ಭಾರತದ ನೇತೃತ್ವದ ಮೊದಲನೆಯ ಜಿ 20 ಶೃಂಗಸಭೆಗೆ ಗೈರಾಗುವ ಕ್ಸಿ ಜಿನ್‌ಪಿಂಗ್ ಅವರ ನಿರ್ಧಾರದ ಹಿಂದೆ ಅರುಣಾಚಲ ಪ್ರದೇಶ ವಿವಾದದ ಹಿನ್ನೆಲೆ ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತ ಮಾತ್ರವಲ್ಲದೇ ಮಲೇಷ್ಯಾ, ಫಿಲಿಪ್ಪಿನ್ಸ್​, ಇಂಡೋನೇಷ್ಯಾ ಮತ್ತು ವಿಯೆಟ್ನಾಂನಂತಹ ಇತರ ನೆರೆಹೊರೆ ರಾಷ್ಟ್ರಗಳು ಚೀನಾ ನೀತಿ ಹಾಗೂ ಹೊಸ ಪ್ರಮಾಣಿತ ನಕ್ಷೆಯನ್ನು ಖಂಡಿಸಿವೆ.

ಇದನ್ನು ಓದಿ: ಆಸಿಯಾನ್​ ಶೃಂಗಸಭೆ: ಇಂಡೋನೇಷ್ಯಾದಿಂದ ಭಾರತಕ್ಕೆ ವಾಪಸ್​ ಆದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.