ETV Bharat / bharat

ಜಿ20: 200 ಗಂಟೆಗಳ ನಿರಂತರ ಮಾತುಕತೆ, 300 ದ್ವಿಪಕ್ಷೀಯ ಸಭೆಗಳ ಫಲವೇ ಐತಿಹಾಸಿಕ ನವದೆಹಲಿ ಘೋ‍ಷಣೆ! - G20 Summit

G20 New Delhi declaration: ಉಕ್ರೇನ್‌-ರಷ್ಯಾ ಯುದ್ಧದ ವಿಚಾರದಲ್ಲಿದ್ದ ಭಿನ್ನಮತ ಸಂಬಂಧಿಸಿದಂತೆ ಭಾರತದ ಅಧ್ಯಕ್ಷತೆಯ ಜಿ20 ಶೃಂಗಸಭೆಯಲ್ಲಿ ಐತಿಹಾಸಿಕ ಒಮ್ಮತ ಮೂಡಿದೆ.

Amitabh Kant
ಅಮಿತಾಭ್ ಕಾಂತ್
author img

By PTI

Published : Sep 10, 2023, 11:50 AM IST

Updated : Sep 10, 2023, 11:57 AM IST

ನವದೆಹಲಿ : ರಷ್ಯಾ-ಉಕ್ರೇನ್ ಸಂಘರ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಸಲುವಾಗಿ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಜಿ20 ಘೋಷಣೆಯ ಕುರಿತು ಒಮ್ಮತ ಮೂಡಿಸಲು ಭಾರತೀಯ ರಾಜತಾಂತ್ರಿಕರ ತಂಡವು 200 ಗಂಟೆಗಳ ನಿರಂತರ ಮಾತುಕತೆಗಳನ್ನು ನಡೆಸಿದೆ ಎಂದು ಭಾರತದ ನಿಯೋಗದ ಮುಖ್ಯಸ್ಥ (ಶೆರ್ಪಾ-ಪ್ರತಿನಿಧಿ) ಅಮಿತಾಭ್ ಕಾಂತ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಮಾಹಿತಿ ಹಂಚಿಕೊಂಡ ಜಿ​​G20 ಶೆರ್ಪಾ ಅಮಿತಾಭ್ ಕಾಂತ್ ಅವರು, ಶೃಂಗಸಭೆಯ ಸಂದರ್ಭದಲ್ಲಿ ತಮ್ಮ ತಂಡದ ಇಬ್ಬರು ಸದಸ್ಯರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಜಂಟಿ ಕಾರ್ಯದರ್ಶಿಗಳಾದ ಈನಮ್ ಗಂಭೀರ್ ಮತ್ತು ಕೆ.ನಾಗರಾಜ ನಾಯ್ಡು ಸೇರಿದಂತೆ ರಾಜತಾಂತ್ರಿಕರ ತಂಡವು 300 ದ್ವಿಪಕ್ಷೀಯ ಸಭೆಗಳನ್ನು ನಡೆಸಿತು. ವಿವಾದಾತ್ಮಕ ಉಕ್ರೇನ್ ಸಂಘರ್ಷದ ಕುರಿತು ತಮ್ಮ ಸಹವರ್ತಿಗಳೊಂದಿಗೆ 15 ಕರಡುಗಳನ್ನು ಪ್ರಸಾರ ಮಾಡಿತು. ಈ ಮೂಲಕ ಜಿ20 ನಾಯಕರಲ್ಲಿ ಶೃಂಗಸಭೆಯ ಮೊದಲ ದಿನವೇ ಒಮ್ಮತ ಮೂಡಿಸಲಾಗಿದೆ ಎಂದರು.

  • The most complex part of the entire #G20 was to bring consensus on the geopolitical paras (Russia-Ukraine). This was done over 200 hours of non -stop negotiations, 300 bilateral meetings, 15 drafts. In this, I was greatly assisted by two brilliant officers - @NagNaidu08 & @eenamg pic.twitter.com/l8bOEFPP37

    — Amitabh Kant (@amitabhk87) September 10, 2023 " class="align-text-top noRightClick twitterSection" data=" ">

"ಇಡೀ ಶೃಂಗಸಭೆಯ ಅತ್ಯಂತ ಸಂಕೀರ್ಣವಾದ ಭಾಗವೆಂದರೆ ರಷ್ಯಾ-ಉಕ್ರೇನ್ ಕುರಿತು ಒಮ್ಮತ ಉಂಟುಮಾಡುವುದು. ಇದನ್ನು 200 ಗಂಟೆಗಳ ತಡೆರಹಿತ ಮಾತುಕತೆಗಳು, 300 ದ್ವಿಪಕ್ಷೀಯ ಸಭೆಗಳು ಮತ್ತು 15 ಕರಡುಗಳ ಪರಿಷ್ಕರಣೆ ಪ್ರಕ್ರಿಯೆಯ ನಂತರ ಜಿ20 ರಾಷ್ಟ್ರಗಳು ಅಭೂತಪೂರ್ವ ಒಮ್ಮತಕ್ಕೆ ಬಂದಿವೆ. ಉಕ್ರೇನ್ ಸಂಘರ್ಷ ಮತ್ತು ಹವಾಮಾನ ಬದಲಾವಣೆಯ ಸುತ್ತಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಿಖರವಾದ ಪ್ರಯತ್ನಗಳನ್ನು ಒಳಗೊಂಡಿರುವ ಈ ಗಮನಾರ್ಹ ಸಾಧನೆಯು ಐತಿಹಾಸಿಕ ನವದೆಹಲಿ ಘೋಷಣೆಯ ಅಂಗೀಕಾರದಲ್ಲಿ ಕೊನೆಗೊಂಡಿತು" ಎಂದು ಅವರು ವಿವರಿಸಿದರು.

ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ, ಅಂತರರಾಷ್ಟ್ರೀಯ ಮಾನವೀಯ ಕಾನೂನು, ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ತತ್ವಗಳನ್ನು ಎತ್ತಿಹಿಡಿಯಲು ನಾವು ಎಲ್ಲಾ ದೇಶಗಳಿಗೆ ಕರೆ ನೀಡುತ್ತೇವೆ ಎಂದು ಘೋಷಣೆ ಹೇಳಿದೆ. ಉದಯೋನ್ಮುಖ ಆರ್ಥಿಕತೆಗಳಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾ ಪ್ರಗತಿ ಕಾಣಲು ಪ್ರಮುಖ ಪಾತ್ರ ವಹಿಸುವುದರೊಂದಿಗೆ ವಿವಾದಾತ್ಮಕ ವಿಷಯದ ಕುರಿತು ಜಿ20 ಸಭೆಯಲ್ಲಿ ಭಾರತವು ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಾಂತ್‌ ಹೇಳಿದರು.

ಇದನ್ನೂ ಓದಿ : G - 20 Summit : ಪಂಜಾಬಿನ ಸಾಂಪ್ರದಾಯಿಕ ಫುಲ್ಕಾರಿ ಕಸೂತಿಗೆ ವಿದೇಶಿಗರು ಫಿದಾ

ಇದಕ್ಕೂ ಮುನ್ನ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅಮಿತಾಭ್ ಕಾಂತ್, ಭಾರತದ ಜಿ20 ಅಧ್ಯಕ್ಷೀಯತೆಯ ಪ್ರಾರಂಭದಲ್ಲಿ ಸೂಚಿಸಲಾದ ತತ್ವಗಳನ್ನು ಒತ್ತಿ ಹೇಳಿದರು. ಇದು ಎಲ್ಲರ ಒಳಗೊಳ್ಳುವಿಕೆ, ನಿರ್ಣಾಯಕತೆ ಮತ್ತು ಕಾರ್ಯ ಆಧಾರಿತ ಸಹಕಾರದ ಗುರಿಗಳನ್ನು ಹೊಂದಿದೆ. ನವದೆಹಲಿಯ ಘೋಷಣೆಯು ಒಟ್ಟು 83 ವಿಭಾಗಗಳನ್ನು ಒಳಗೊಂಡಿದ್ದು, ಭಾಗವಹಿಸಿದ ಎಲ್ಲಾ ದೇಶಗಳಿಂದ ಸರ್ವಾನುಮತದ ಬೆಂಬಲ ಗಳಿಸಿದೆ. ಎಂಟು ವಿಭಾಭಗಳು ಭೌಗೋಳಿಕ, ರಾಜಕೀಯ ಸಮಸ್ಯೆಗಳಿಗೆ ಮೀಸಲಾಗಿವೆ. ಗ್ರಹ, ಸಾರ್ವಜನಿಕರು, ಶಾಂತಿ ಮತ್ತು ಸಮೃದ್ಧಿ ಎಂಬ ವಿಷಯಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ ಎಂದರು. ( ಪಿಟಿಐ)

ಇದನ್ನೂ ಓದಿ : ಜಿ-20 ಶೃಂಗದ ನಡುವೆ ಪ್ರಧಾನಿ ಮೋದಿ, ಇಂಗ್ಲೆಂಡ್​ ಪ್ರಧಾನಿ ಸುನಕ್ ದ್ವಿಪಕ್ಷೀಯ ಸಭೆ ; ವಿಡಿಯೋ

Last Updated : Sep 10, 2023, 11:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.