ಕಚ್(ಗುಜರಾತ್): ರಾಜ್ಯದ ಎಟಿಎಸ್ ಮತ್ತು ಡಿಆರ್ಐ ಅಧಿಕಾರಿಗಳು ಕಚ್ನ ಕಾಂಡ್ಲಾ ಬಂದರಿನಲ್ಲಿ 2,500 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದುಕೊಂಡಿದ್ದು, ಇದರ ಒಟ್ಟು ಪ್ರಮಾಣ 250 ಕಿಲೋ ಗ್ರಾಂ ಆಗಿದೆ. ಇದರ ಜೊತೆಗೆ ಅಫ್ಘಾನಿಸ್ತಾನದ ಕಂಟೈನರ್ ಸಹ ಸೀಜ್ ಮಾಡಿದ್ದಾರೆ.
ಅಫ್ಘಾನಿಸ್ತಾನದಿಂದ ಆಮದಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಕಳೆದ ವರ್ಷವೂ ಕೂಡ 21,000 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದರ ಜೊತೆಗೆ ಗಾಂಜಾ, ರಕ್ತ ಚಂದನ, ವಿದೇಶಿ ಸಿಗರೇಟ್, ಅರೆಕಾ ಕಾಫಿ ಬೀಜ ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: ಭಾರತದ ಜೊತೆ £1 ಬಿಲಿಯನ್ ಹೂಡಿಕೆ ಒಪ್ಪಂದ ಘೋಷಿಸಿದ ಬ್ರಿಟನ್ ಪ್ರಧಾನಿ!
ಅಕ್ರಮವಾಗಿ ಸಾಗಣೆ ಮಾಡಲಾಗ್ತಿದ್ದ ಹೆರಾಯಿನ್ ಕಾಣದ ರೀತಿಯಲ್ಲಿ ಕಲ್ಲು ಬಳಕೆ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ಶೋಧಕಾರ್ಯ ನಡೆಸಿ, ಹೆರಾಯಿನ್ ಹೊರತೆಗೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಗುಜರಾತ್ನ ಕಚ್ನಲ್ಲಿ ಮಾದಕ ವಸ್ತು ಕಳ್ಳಸಾಗಣೆ ಘಟನೆ ಹೆಚ್ಚಾಗುತ್ತಿದ್ದು ಬಿಎಸ್ಎಫ್, ಗುಜರಾತ್ ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ಮೇಲಿಂದ ಮೇಲೆ ದಾಳಿ ನಡೆಸುತ್ತಿದ್ದಾರೆ.