ನವದೆಹಲಿ: ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಂದೂ ಕೂಡಾ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಇಂದೂ ಕೂಡಾ ಬೆಲೆಯನ್ನು ಬದಲಾವಣೆ ಮಾಡದಿರಲು ನಿರ್ಧರಿಸಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 70 ಡಾಲರ್ ಇದ್ದು, ಈ ಬೆಲೆ ಹಿಂದಿನ ಬೆಲೆಗಳಿಗಿಂತ ಕಡಿಮೆ ಇದೆ. ಇದರಿಂದಾಗಿ ಭಾರತೀಯ ತೈಲ ಮಾರಾಟ ಕಂಪನಿಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡುವ ಅನಿವಾರ್ಯತೆ ಉಂಟಾಗಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.49 ರೂಪಾಯಿ, ಒಂದು ಲೀಟರ್ ಡೀಸೆಲ್ ಬೆಲೆ 88.92 ರೂಪಾಯಿಯಿದೆ.
ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂತಿದೆ.. (ಒಂದು ಲೀಟರ್ಗೆ)
ನಗರ | ಪೆಟ್ರೋಲ್ ಬೆಲೆ (ರೂ.ಗಳಲ್ಲಿ) | ಡೀಸೆಲ್ ಬೆಲೆ (ರೂ.ಗಳಲ್ಲಿ) |
ಬೆಂಗಳೂರು | 104.98 | 94.34 |
ಮುಂಬೈ | 107.52 | 96.48 |
ನವದೆಹಲಿ | 101.49 | 88.92 |
ಚೆನ್ನೈ | 99.20 | 93.52 |
ಕೋಲ್ಕತಾ | 101.82 | 91.98 |
ಹೈದರಾಬಾದ್ | 105.54 | 96.99 |