ETV Bharat / bharat

ಸದ್ಯಕ್ಕೆ ನಿರಾಳ.. ದಿಢೀರ್​ ಏರಿಕೆಯಾಗಿ ಕಂಗಾಲು ಮಾಡುತ್ತಾ ಇಂಧನ ದರ? - ಇಂಧನ ಬೆಲೆ

ಹಿಂದಿನ ವಾರಗಳಲ್ಲಿ ದೇಶಾದ್ಯಂತ ಹಲವಾರು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರುಪಾಯಿಗೆ ತಲುಪಿತ್ತು. ಇದು ಅತಿ ದೊಡ್ಡ ಏರಿಕೆ ಆಗಿದ್ದು, ವಾಹನ ಸವಾರರು ಹಾಗೂ ಜನ ಸಾಮಾನ್ಯರು ಭಾರಿ ಸಂಕಷ್ಟ ಎದುರಿಸುತ್ತಿದ್ದಾರೆ.

Fuel price hike on hold for 3rd consecutive day
ದಿಢೀರ್​ ಏರಿಕೆಯಾಗಿ ಕಂಗಾಲು ಮಾಡುತ್ತಾ ಇಂಧನ ದರ
author img

By

Published : Feb 26, 2021, 1:28 PM IST

ನವದೆಹಲಿ: ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದೇ ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಕಾಯುವಿಕೆ ಮತ್ತು ವೀಕ್ಷಣಾ ಕಾರ್ಯತಂತ್ರವನ್ನು ಮುಂದುವರೆಸಿವೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಲೀಟರ್​ಗೆ 90.93 ರೂ ಮತ್ತು ಡೀಸೆಲ್ ಲೀಟರ್ 81.32 ರೂ.ಗಳಿದೆ. ಕಳೆದ 18 ದಿನಗಳಲ್ಲಿ ತೈಲ ಕಂಪನಿಗಳು ಬೆಲೆಯನ್ನು ಹೆಚ್ಚಿಸಿದ ನಂತರ ದೇಶದ ಇತರೆಡೆಗಳಲ್ಲಿ ಇಂಧನ ಬೆಲೆಗಳು ಬದಲಾಗಿಲ್ಲ.

ಫೆಬ್ರವರಿ 9 ರಿಂದ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 3.98 ರೂ.ಗಳಷ್ಟಿದ್ದರೆ, ದೆಹಲಿಯಲ್ಲಿ ಡೀಸೆಲ್ ದರ ಲೀಟರ್‌ಗೆ 4.19 ರೂ. ಹೆಚ್ಚಳವಾಗಿದೆ. ಬ್ರೆಂಟ್ ಕಚ್ಚಾ ಬೆಲೆಗಳು ಬ್ಯಾರೆಲ್‌ಗೆ $ 66 ರಷ್ಟಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಉತ್ಪನ್ನದ ಬೆಲೆಗಳು ನಿರ್ಬಂಧಿತ ಸರಬರಾಜು ಮತ್ತು ಬೇಡಿಕೆಯನ್ನು ಹೆಚ್ಚಿಸುವುದರ ಮೇಲೆ ದೃಢವಾಗಿವೆ.

ಹಿಂದಿನ ವಾರಗಳಲ್ಲಿ ದೇಶಾದ್ಯಂತ ಹಲವಾರು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗೆ ತಲುಪಿತ್ತು. ಇದು ಐತಿಹಾಸಿಕ ಉನ್ನತ ಮಟ್ಟದ ಬೆಲೆಯಾಗಿದೆ.

ಮುಂಬೈಯಲ್ಲಿ, ಪೆಟ್ರೋಲ್ ಬೆಲೆ ಲೀಟರ್​ಗೆ 97.34 ರೂ. ಗಳಿತ್ತು 100 ರೂಗೆ ಕೇವಲ ಮೂರು ರೂ. ಕಡಿಮೆ ಇದೆ. ಡೀಸೆಲ್ ಬೆಲೆ ಲೀಟರ್‌ಗೆ 90 ರೂ. (ಲೀಟರ್‌ಗೆ 88.44 ರೂ) ಹೆಚ್ಚಿದೆ. ಸರಾಸರಿ ಪೆಟ್ರೋಲ್​ 100 ರೂ ಆದರೆ, ಡೀಸೆಲ್ 90 ರೂ ಗಳಾಗಿದ್ದು, ಇತಿಹಾಸಲ್ಲಿ ಇದೇ ಮೊದಲ ಬಾರಿಗೆ ಮೂರಂಕಿ ದಾಟಿದೆ.

ಇನ್ನುಳಿದಂತೆ ಇತರ ಎಲ್ಲ ಮಹಾನಗರಗಳಲ್ಲಿ, ಪೆಟ್ರೋಲ್ ಲೀಟರ್​ಗೆ 90 ರೂ. ಮತ್ತು ಡೀಸೆಲ್ ಲೀಟರ್ 80 ರೂ. ಗಳಾಗಿದೆ. ಕೆಲವು ದಿನಗಳ ಹಿಂದೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಪ್ರತಿ ಲೀಟರ್ 100 ರೂ.ಆಗಿದೆ.

ಇಂಧನ ಬೆಲೆಗಳು ಜಾಗತಿಕ ಸಂಸ್ಕರಿಸಿದ ಉತ್ಪನ್ನಗಳ ಬೆಲೆಗಳು ಮತ್ತು ಡಾಲರ್ ವಿನಿಮಯ ದರದ 15 ದಿನಗಳ ರೋಲಿಂಗ್ ಸರಾಸರಿಗೆ ಮಾನದಂಡವಾಗಿರುವುದರಿಂದ, ಕಚ್ಚಾ ಬೆಲೆ ಸ್ಥಿರವಾಗಿದ್ದರೂ ಮುಂದಿನ ಕೆಲವು ದಿನಗಳಲ್ಲಿ ಪಂಪ್ ಬೆಲೆಗಳು ಉತ್ತರ ದಿಕ್ಕಿಗೆ ಮುಖ ಮಾಡುವ ನಿರೀಕ್ಷೆಯಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021 ರಲ್ಲಿ 25 ಪಟ್ಟು ಹೆಚ್ಚಾಗಿದೆ. ಈ ಎರಡು ಇಂಧನಗಳು ಈ ವರ್ಷದಲ್ಲಿ ಇಲ್ಲಿಯವರೆಗೆ ಕ್ರಮವಾಗಿ 7.22 ಮತ್ತು 7.45 ರೂ.ಏರಿಕೆ ಕಂಡಿವೆ.

ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ತೈಲ ಕಂಪನಿಗಳ ಅಧಿಕಾರಿಗಳು ತಿಳಿಸಿದ್ದಾರೆ. ಏಕೆಂದರೆ ಒಎಂಸಿಗಳು ವಾಹನ ಇಂಧನಗಳ ಮಾರಾಟದಿಂದ ನಷ್ಟವಾಗದಂತೆ ತಡೆಯಲು ಜಾಗತಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಚಿಲ್ಲರೆ ಬೆಲೆಗಳನ್ನು ಸಮತೋಲನ ಗೊಳಿಸಬೇಕಾಗಬಹುದು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.